Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವೆಜ್ ಪ್ರಿಯರ ಪನ್ನೀರ್ ಬಟಾಣಿ ಮಸಾಲೆ ಮಾಡಿ..! ಯಾವುದೇ ತಿಂಡಿ ಜೊತೆ ಸಖತ್ ರುಚಿ..!!
ವೆಜ್ ಪ್ರಿಯರಿಗೆ ಅತ್ಯಂತ ರುಚಿಕರ ಆಹಾರ ಅಥವಾ ಖಾದ್ಯ ಅಂದ್ರೆ ಪನ್ನೀರ್ನಿಂದ ಮಾಡುವಂತಹ ಯಾವುದೇ ಅಡುಗೆ ಎನ್ನಬಹುದು. ಹಾಗೆ ಮಾಂಸಹಾರಿಗಳು ಕೂಡ ಪನ್ನೀರ್ ಖಾದ್ಯಗಳ ಇಷ್ಟಪಡುತ್ತಾರೆ. ಪನ್ನೀರ್ನಲ್ಲಿ ಹತ್ತು ಹಲವು ಬಗೆಯ ಖಾದ್ಯ ಮಾಡಿ ಸವಿಯಬಹುದು. ಸಸ್ಯಹಾರಿಗಳ ಪಾಲಿಗೆ ಪನ್ನೀರ್ ಒಂದಿದ್ದರೆ ಹತ್ತಾರು ಬಗೆ ಖಾದ್ಯ ತಕ್ಷಣ ರೆಡಿ ಮಾಡಬಹುದು.
ಹಾಗೆ ಈ ಪನ್ನೀರ್ ನಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದು. ಹಾಗೆ ಪನ್ನೀರ್ ಖಾದ್ಯಗಳು ಎಲ್ಲಾ ಬಗೆಯ ತಿಂಡಿಗೂ ರುಚಿ ನೀಡುತ್ತೆ. ಅನ್ನಕ್ಕೂ ಕೂಡ ಇದು ಅದ್ಭುತ ರುಚಿ ನೀಡಲಿದೆ. ಅನ್ನದ ಜೊತೆಗೆ ಪನ್ನೀರ್ ಗ್ರೇವಿ ಅದ್ಭುತ, ಹಾಗೆ ತಿಂಡಿಗಳಿಗೆ ಪನ್ನೀರ್ ಮಸಾಲೆ ಮಾಡಿದರೆ ಅದರ ರುಚಿಗೆ ನೀವು ಫಿದಾ ಆಗುತ್ತೀರಿ. ಇಂತಹ ರುಚಿಕರ ಪನ್ನೀರ್ನಲ್ಲಿ ನಾವು ಪನ್ನೀರ್ ಬಟಾಣಿ ಮಸಾಲ ಮಾಡುವ ಕುರಿತು ತಿಳಿದುಕೊಳ್ಳೋಣ.

ಪನ್ನೀರ್ ಬಟಾಣಿ ಮಸಾಲೆ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಪನ್ನೀರ್ ಬಟಾಣಿ ಮಸಾಲೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪನ್ನೀರ್ ಬಟಾಣಿ ಮಸಾಲೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪನ್ನೀರ್
- ಕ್ಯಾಪ್ಸಿಕಂ
- ಹಸಿ ಬಟಾಣಿ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಬೆಳ್ಳುಳ್ಳಿ
- ಶುಂಠಿ
- ಕೆಂಪು ಮೆಣಸಿನ ಪುಡಿ
- ಟೊಮೆಟೋ
- ಧನಿಯಾ ಪುಡಿ
- ಗರಂ ಮಸಾಲೆ
- ಅರಶಿಣ
- ಪಲಾವ್ ಎಲೆ
- ಏಲಕ್ಕಿ
- ಜೀರಿಗೆ
- ಉಪ್ಪು
- ಎಣ್ಣೆ
ಪನ್ನೀರ್ ಬಟಾಣಿ ಮಸಾಲೆ ಮಾಡುವುದು ಹೇಗೆ?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಇದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ, ಹಸಿ ಮೆಣಸು, ಬೆಳ್ಳುಳ್ಳಿ, ಸಾಸಿವೆ, ಶುಂಠಿ, ಟೊಮೆಟೋ ಹಾಕಿಕೊಂಡು 5 ನಿಮಿಷ ಫ್ರೈ ಮಾಡಿಕೊಳ್ಳಿ. ಒಂದಾದ ಮೇಲೆ ಒಂದು ವಸ್ತು ಹಾಕಿ 5 ನಿಮಿಷ ಫ್ರೈ ಮಾಡಿ. ಫ್ರೈ ಮಾಡುವಾಗ ಉಪ್ಪು ಹಾಕಿಕೊಂಡರೆ ಟೊಮೆಟೋ ಬೇಗ ಫ್ರೈ ಆಗಲಿದೆ. 5 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ಈ ಪದಾರ್ಥಗಳು ತಣ್ಣಗಾಗಲು ಬಿಡಿ.
ಈಗ ಈ ವಸ್ತುಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ಮಾಡಿಕೊಳ್ಳಬೇಕು. ಈಗ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದಾಗ ಸಾಸಿವೆ, ಪಲಾವ್ ಎಲೆ, ಜೀರಿಗೆ, ಖಾರದ ಪುಡಿ ಹಾಕಿಕೊಳ್ಳಿ. ಅನಂತರ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಹಾಗೆ ಕುದಿ ಬರಲು ಬಿಡಿ.
2 ನಿಮಿಷದ ಬಳಿಕ ಇದಕ್ಕೆ ಗರಂ ಮಸಾಲೆ ಹಾಗೂ ಧನಿಯಾ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಉರಿಯನ್ನ ಸಣ್ಣದಾಗಿ ಇಟ್ಟುಕೊಳ್ಳಿ. ಈಗ 2 ನಿಮಿಷದ ಬಳಿಕ ಇದಕ್ಕೆ ಹಸಿ ಬಟಾಣಿಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಕತ್ತರಿಸಿಕೊಂಡಿರುವ ಪನ್ನೀರ್ ಅನ್ನು ಕೂಡ ಹಾಕಿಕೊಂಡು ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ತುಂಬಾ ದಪ್ಪಗಿದ್ದರೆ ಅರ್ಧ ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ.
3ರಿಂದ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಟ್ಟರೆ ಸಾಕಾಗುತ್ತದೆ. ನಂತರ ಒಲೆ ಆಫ್ ಮಾಡಿಕೊಂಡು ಒಮ್ಮೆ ಉಪ್ಪು ಸಾಕಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡರೆ ನಿಮ್ಮ ಮುಂದೆ ಬಟಾಣಿ ಪನ್ನೀರ್ ಮಸಾಲೆ ರೆಡಿಯಾಗುತ್ತದೆ. ಸುಲಭವಾಗಿ ಮಾಡಬಹುದಾದ ಈ ಖಾದ್ಯ ಮನೆಯಲ್ಲಿ ಸವಿದು ನೋಡಿ.



Click it and Unblock the Notifications
