Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂಜೆಯ ಸ್ನ್ಯಾಕ್ಸ್‌ಗೆ ಇಲ್ಲಿದೆ ಮಸಾಲ ಶೇಂಗಾ ಖಾರ ಕಡ್ಲೆ..! ಮಾಡೋದು ಬಹಳ ಸುಲಭ!
ಈ ಮಳೆಗಾಲದ ಸಮಯದಲ್ಲಿ ಸಂಜೆ ಸಮಯ ಸವಿಯಲು ಯಾವುದಾದರು ಸ್ನ್ಯಾಕ್ಸ್ ಇದ್ದರೆ ಬಹಳ ರುಚಿ ಎನಿಸಲಿದೆ. ಅದ್ರಲ್ಲು ಟೀ ಕಾಫಿಯೊಂದಿಗೆ ಯಾವುದಾದರು ಕರಿದ ತಿಂಡಿ ಇದ್ದರೆ ಅದ್ಭುತ ರುಚಿ ನೀಡಲಿದೆ. ಅದರಲ್ಲೂ ಬೇಕರಿಗಳಲ್ಲಿ ಸಿಗುವಂತಹ ಯಾವುದಾದರು ತಿಂಡಿ ಬಳಿ ಇದ್ದರೆ ಟೀ ಕಾಫಿಯ ಸವಿಯಲು ಉತ್ತಮ. ಮಳೆಗಾಲದಲ್ಲಂತು ಈ ರೀತಿ ಸವಿಯೋಕೆ ಎಲ್ಲರು ಇಷ್ಟೊಪಡುತ್ತಾರೆ.
ಮಳೆ ಬೀಳುತ್ತಿದ್ದಾಗ ಚಳಿಯಲ್ಲಿ ಬಾಯಿ ರುಚಿಗೆ ತಿಂಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಮನೆಯಲ್ಲಿಯೇ ಇಂತಹ ಹಲವು ತಿಂಡಿಗಳ ಮಾಡಿ ಸವಿಯುವುದು ಕಾಮನ್. ಬೇಕರಿ ರುಚಿಯ ಹಲವು ತಿಂಡಿಗಳನ್ನು ಖರೀದಿಸಿ ತಂದು ಸವಿಯುವ ಬದಲಾಗಿ ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಮಳೆಗಾಲದ ಸಮಯದಲ್ಲಿ ಟೀ ಕಾಫಿಯ ಜೊತೆಗೆ ಸಂಜೆ ಖಾರ ಮಸಾಲ ಕಡ್ಲೆ ಸವಿಯಲು ಇಷ್ಟಪಡುತ್ತಾರೆ, ಬೇಕರಿಗಳಲ್ಲಿ ಸಿಗುವಂತಹ ರುಚಿಯ ಈ ಖಾರವನ್ನು ಮನೆಯಲ್ಲೂ ಕೂಡ ಮಾಡಿ ಸವಿಯಬಹುದು, ಈ ಕೆಂಪು ಖಾರದ ಶೇಂಗಾ ಕಡ್ಲೆ ಸಂಜೆ ಸಮಯದಲ್ಲಿ ಸವಿಯಲು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ಕಡ್ಲೆಯನ್ನ ಮನೆಯಲ್ಲಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಸಾಲ ಶೇಂಗಾ ಕಡ್ಲೆ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಶೇಂಗಾ ಕಡ್ಲೆ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಶೇಂಗಾ ಸ್ವಲ್ಪ
- ಖಾರದ ಪುಡಿ
- ಕಡಲೆ ಹಿಟ್ಟು- 1 ಕಪ್
- ಅಕ್ಕಿ ಹಿಟ್ಟು- 4 ಸ್ಪೂನ್
- ಅರಶಿಣ
- ಇಂಗು
- ಉಪ್ಪು
ಮಸಾಲ ಶೇಂಗಾ ಕಡ್ಲೆ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಅಳತೆ ಕಪ್‌ನಲ್ಲಿ ಒಂದು ಕಪ್ ಕಡಲೆ ಹಿಟ್ಟು ಹಾಕಿ, ಖಾರದ ಪುಡಿ, ಉಪ್ಪು, ಅಕ್ಕಿ ಹಿಟ್ಟು, ಅರಶಿಣ, ಇಂಗು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿ. ನಂತರ ಒಂದು ಕಪ್ ಶೇಂಗಾವನ್ನು ಸಹ ಇದಕ್ಕೆ ಹಾಕಿಕೊಂಡು ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು.
ಮಸಾಲೆಗಳು ಚೆನ್ನಾಗಿ ಕಡ್ಲೆಗೆ ಹಿಡಿಯುವಂತಹ ಹದವಾಗಿ ಈ ಹಿಟ್ಟನ್ನು ಮಾಡಿಕೊಳ್ಳಬೇಕು. ನಂತರ ಕಡ್ಲೆಯನ್ನು ಅದೇ ಪಾತ್ರೆಯಲ್ಲಿ ಸ್ವಲ್ಪ ಹರಡಿಕೊಂಡಂತೆ ಮಾಡಿ 10 ನಿಮಿಷಗಳ ಕಾಳ ಬಿಡಬೇಕು. ಈ ಸಮಯದಲ್ಲಿ ಕಡ್ಲೆಗೆ ಮಸಾಲೆ ಚೆನ್ನಾಗಿ ಹಿಡಿಯುತ್ತದೆ. ಇದು ಒಣಗುವಾಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
ನಂತರ ಈ ಕಡ್ಲೆಯನ್ನು ನಿಧಾನವಾಗಿ ಬಿಡಿ ಬಿಡಿಯಾಗಿ ಹಾಕಿಕೊಳ್ಳಬೇಕು ಒಟ್ಟಿಗೆ ಹಾಕಿದರೆ ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಹೀಗಾಗಿ ಬಿಡಿಸಿಕೊಂಡು ಎಣ್ಣೆ ಹಾಕಿಕೊಳ್ಳಿ. ಚೆನ್ನಾಗಿ ಎಣ್ಣೆಯಲ್ಲಿ ಕರಿದ ಬಳಿಕ ಜರಡಿಯಲ್ಲಿ ತೆಗೆದು ಎಣ್ಣೆ ಇಳಿಯಲು ಬಿಡಿ. ತಣ್ಣಗಾದ ಬಳಿಕ ಇದು ಸವಿಯಲು ಸಿದ್ದವಾಗುತ್ತೆ. ಟೀ ಕಾಫಿಯೊಂದಿಗೆ ಸಂಜೆ ಸಮಯದಲ್ಲಿ ಸವಿಯಲು ಬಹಳ ರುಚಿ ನೀಡಲಿದೆ. '
ಮನೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇದನ್ನು ಸವಿಯಲು ಬಹಳ ಇಷ್ಟಪಡುತ್ತಾರೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ಸವಿದು ನೋಡಿ. ಗಾಳಿ ಹೋಗದಂತೆ ಡಬ್ಬಿಯಲ್ಲಿ ಹಾಕಿ ಇಟ್ಟರೆ ಒಂದಿಷ್ಟು ದಿನ ಇಟ್ಟು ಸವಿಯಬಹುದು. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಮಾಡಿ ಸಂಜೆಯ ಸ್ನ್ಯಾಕ್ಸ್ ಆಗಿ ಸವಿದು ನೋಡಿ. ಹಾಗೆ ಸಮಯ ಕಳೆಯಲು ಕೂಡ ಇದು ಅದ್ಭತವಾಗಿರಲಿದೆ.



Click it and Unblock the Notifications
