Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಯಲ್ಲೇ ಮಾಡಿ ಸ್ಟ್ರೀಟ್ ಫುಡ್ ಮಸಾಲ ಪೂರಿ..! ಹೇಗೆ ಮಾಡೋದು..!
ಪಾನಿಪೂರಿ ಹಾಗೂ ಮಾಸಾಲೆ ಪೂರಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ಎರಡು ಖಾದ್ಯವನ್ನು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಸಂಜೆಯಾದರೆ ಸಾಕು ರಸ್ತೆ ಬದಿಯಲ್ಲಿ ಎಷ್ಟು ಜನರಿದ್ದರೂ ಕಾದು ಈ ಪಾನಿಪೂರಿ-ಮಸಾಲ ಪೂರಿ ತಿನ್ನುತ್ತಾರೆ.
ಕೆಲವರಂತು ಇದನ್ನು ನಿತ್ಯ ಸವಿಯಲು ಮುಂದಾಗುತ್ತಾರೆ. ಮತ್ತೆ ಕೆಲವರು ಇದನ್ನು ಮನೆಯಲ್ಲು ಮಾಡಿ ತಿನ್ನುತ್ತಾರೆ. ಭಾರತದ ಯಾವುದೇ ಮೂಲೆಗೆ ಹೋದರು ನೀವು ಪಾನಿಪೂರಿ ಹಾಗೂ ಮಸಾಲ ಪೂರಿಯನ್ನು ನೋಡುತ್ತೀರಿ. ಸ್ಟ್ರೀಟ್ ಫುಡ್‌ನ ರಾಜ ಎಂದರೂ ತಪ್ಪಾಗಲಾರದು. ಇತ್ತಿಚಿಗೆ ಇದರಲ್ಲೇ ಹತ್ತು ಹಲವು ವಿಧವೂ ಬಂದುಬಿಟ್ಟಿದೆ ಜನರು ಮುಗಿಬಿದ್ದು ಸೇವಿಸುತ್ತಾರೆ.

ಆದ್ರೆ ಮಸಾಲ ಪೂರಿಯನ್ನು ಹೊರಗೆ ಸೇವಿಸುವುದಕ್ಕಿಂತ ನೀವೆ ಮನೆಯಲ್ಲಿ ಮಾಡಿ ಸವಿದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಆದರೆ ಇದನ್ನು ಮಾಡುವುದು ಹೇಗೆ ಎಂಬುದೇ ಹಲವರ ಪ್ರಶ್ನೆಯಾಗಿರುತ್ತೆ. ಹಾಗಾದ್ರೆ ನಾವಿಂದು ಇಲ್ಲಿ ಮಸಾಲ ಪೂರಿ ಮಾಡುವುದು ಹೇಗೆ? ಅದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಸಾಲ ಪೂರಿ ಮಾಡಲು ಬೇಕಾಗುವ ಪದಾರ್ಥಗಳು
- ಬಟಾಣಿ-1/4 ಕೆಜಿ
- ಆಲೂಗಡ್ಡೆ-1
- ಕೊತ್ತಂಬರಿ ಸೊಪ್ಪು - 2 tbs
- ಪುದೀನ - 2 ಟೀಸ್ಪೂನ್
- ಈರುಳ್ಳಿ - 2
- ಹಸಿರು ಮೆಣಸಿನಕಾಯಿ - 3
- ಬೆಳ್ಳುಳ್ಳಿ - 5
- ಶುಂಠಿ- 1/2
- ಟೊಮೆಟೊ- 2
- ಖಾರ ಬೂಂದಿ - 1 ಕಪ್
- ಕ್ಯಾರೆಟ್ - 2 ಟೀಸ್ಪೂನ್ (ತುರಿದ)
- ಕರಿಮೆಣಸು ಪುಡಿ - 1/4 ಟೀಸ್ಪೂನ್
- ಜೀರಿಗೆ ಪುಡಿ - 1/4 ಟೀಸ್ಪೂನ್
- ಚಾಟ್ ಮಸಾಲಾ ಪುಡಿ - 1/4 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
- ಪಾನಿ ಪುರಿ ಮಸಾಲಾ ಪುಡಿ - 1/4 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1/4 ಕಪ್
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಮಸಾಲ ಪೂರಿ ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಹಾಗೂ ಬಟಾಣಿಯನ್ನು ಕುಕ್ಕರ್‌ಗೆ ಹಾಕಿ 2 ಸೀಟಿ ಹೊಡೆಸಿಕೊಳ್ಳಿ. ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಒಂದು ಟೊಮೆಟೋ, ಕೊತ್ತಂಬರಿ, ಪುದೀನ, ಈರುಳ್ಳಿ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿ ಅದೇ ಮಿಕ್ಸಿ ಜಾರ್‌ಗೆ ಆಲೂಗಡ್ಡೆ ಹಾಗೂ ಬಟಾಣಿಯನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ.
ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಮೊದಲು ರುಬ್ಬಿಕೊಂಡ ಮಸಾಲೆಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕುದಿಬರುವವರೆಗೂ 5 ನಿಮಿಷ ಕುದಿಸಿಕೊಳ್ಳಿ. 5 ನಿಮಿಷದ ಬಳಿಕ ಅದಕ್ಕೆ ರುಬ್ಬಿದ ಬಟಾಣಿ ಆಲೂಗಡ್ಡೆ ಪೇಸ್ಟ್ ಹಾಗೂ ಸ್ವಲ್ಪ ಹಸಿ ಬಟಾಣಿಯನ್ನು ಅದಕ್ಕೆ ಹಾಕಿ. ಬಳಿಕ ಸ್ವಲ್ಪ ನೀರು ಹಾಕಿ.
ಬಳಿಕ ಇದಕ್ಕೆ ಕರಿಮಣಸು, ಖಾರದ ಪುಡಿ, ಚಾಟ್ ಮಸಾಲೆ ಸೇರಿ ಎಲ್ಲಾ ಮಸಾಲ ಐಟಂ ಅನ್ನು ಅದಕ್ಕೆ ಹಾಕಿ. ಇದೇ ವೇಳೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 10 ನಿಮಿಷದ ವರೆಗೂ ಚೆನ್ನಾಗಿ ಕುದಿಸಿಕೊಳ್ಳಿ. ಇಷ್ಟಾದರೆ ಮಸಾಲೆ ರೆಡಿಯಾಗುತ್ತದೆ. ಈಗ ರೆಡಿಮೇಡ್ ಪೂರಿಯನ್ನು ತೆಗೆದುಕೊಂಡು ಒಂದು ಪ್ಲೇಟ್‌ಗೆ ಹಾಕಿಕೊಂಡು ಅದರ ಮೇಲೆ ಈ ಮಸಾಲೆಯನ್ನು ಹಾಕಿಕೊಳ್ಳಿ.
ಅದರ ಮೇಲೆ ಕ್ಯಾರೆಟ್ ತುರಿ, ಟೊಮೆಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಸೇವ್ ಪೂರಿ ಅಥವಾ ಖಾರ ಭೂಂದಿಯನ್ನು ಹಾಕಿ ಸವಿಯಲು ನೀಡಿದರೆ ನಿಮ್ಮ ಮುಂದೆ ರುಚಿಕರ ಮಸಾಲ ಪೂರಿ ರೆಡಿಯಾಗುತ್ತದೆ.



Click it and Unblock the Notifications
