Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಥಟ್ ಅಂತ ಗರಿ ಗರಿಯ ನಿಪ್ಪಟ್ಟು ಮಾಡಬಹುದು! ಇಲ್ಲಿದೆ ವಿಧಾನ
ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬ ಎಂದ ಮಾತ್ರಕ್ಕೆ ಅಲ್ಲಿ ಸಿಹಿ ತಿಂಡಿ ಇರಲೇಬೇಕು. ಅದ್ರಲ್ಲೂ ಸುಲಭವಾಗಿ ಮಾಡುವ ಸಿಹಿ ತಿಂಡಿ ಹಾಗೆ ಕರಿದ ತಿಂಡಿಗಳನ್ನು ಮಾಡಿಯೇ ಮಾಡುತ್ತೀರಿ. ಅದ್ರಲ್ಲೂ ಮಸಾಲೆ ಭರಿತ ನಿಪ್ಪಟ್ಟು ಮಾಡಿ ಸವಿಯುವ ಕುರತಾಗಿ ತಿಳಿದುಕೊಳ್ಳೋಣ. ಈ ನಿಪ್ಪಟ್ಟು ಬಹಳ ರುಚಿಯಾಗಿ ಗರಿ ಗರಿಯಾಗಿ ಸವಿದು ನೋಡಿ.
ನಿಪ್ಪಟ್ಟನ್ನು ಊಟದ ಜೊತೆಗೂ ಸವಿಯುವುದು ನೋಡಬಹುದು. ಅದ್ರಲ್ಲೂ ಹಬ್ಬದ ಸಮಯದಲ್ಲಂತು ಊಟಕ್ಕೆ ಈ ನಿಪ್ಪಟ್ಟು ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ರುಚಿ ರುಚಿಯ ನಿಪ್ಪಟ್ಟು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.

ಅಂಗಡಿ, ಬೇಕರಿಯಲ್ಲಿ ಸಿಗುವಂತಹ ಅಂಗೈ ಅಗಲದ ನಿಪ್ಪಟ್ಟನ್ನು ನೀವು ಮನೆಯಲ್ಲೇ ಮಾಡಿ ಸವಿದರೆ ಬಹಳ ರುಚಿಯಾಗಿರಲಿದೆ. ಹಾಗಾದ್ರೆ ಈ ಮಸಾಲೆ ನಿಪ್ಪಟ್ಟು ಮಾಡುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
ಮಸಾಲೆ ನಿಪ್ಪಟ್ಟು ಮಾಡಲು ಬೇಕಾಗುವ ವಸ್ತುಗಳು
- ಶೇಂಗಾ
- ಅಕ್ಕಿ ಹಿಟ್ಟು
- ಹುರಿಗಡಲೆ
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
- ಖಾರದ ಪುಡಿ
- ಒಂಕಾಳು
- ಜೀರಿಗೆ
- ಎಳ್ಳು
ಮಸಾಲೆ ನಿಪ್ಪಟ್ಟು ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್ನಲ್ಲಿ ಅರ್ಧ ಕಪ್ನಷ್ಟು ಹುರಿದು ಸಿಪ್ಪೆದಿದ್ದ ಶೇಂಗಾ ಬೀಜ ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ಹಾಗೆ ಕಾಲು ಕಪ್ ಹುರಿಗಡಲೆ ಕೂಡ ಹಾಕಿ ತರಿ ತರಿಯಾಗಿ ರುಬ್ಬಿ ತೆಗೆದಿಟ್ಟುಕೊಳ್ಳಿ. ಈಗ ಒಂದು ಪಾತ್ರೆಗೆ ಒಂದು ಕಪ್ ನುಣ್ಣಗಿರುವ ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಬೇಕು.
ಈ ಅಕ್ಕಿ ಹಿಟ್ಟಿಗೆ ಮೊದಲು ತರಿ ತರಿಯಾಗಿ ರುಬ್ಬಿಕೊಂಡಿದ್ದ ಶೇಂಗಾ ಹಾಗೂ ಹುರಿಗಡಲೆ ಪುಡಿಯನ್ನು ಕೂಡ ಹಾಕಿಕೊಳ್ಳಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಗೆ ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಖಾರ, ಹಾಗೆ ಓಂಕಾಳು, ಜೀರಿಗೆ, ಒಂದು ಚಮಚ ಎಳ್ಳು ಹಾಕಿ ಡ್ರೈ ಮಿಕ್ಸ್ ಮಾಡಿ.
ಈಗ 2 ಸ್ಪೂನ್ನಲ್ಲಿ 2 ಸ್ಪೂನ್ ಎಣ್ಣೆ ಕೂಡ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಸುಮಾರು ಅರ್ಧ ಕಪ್ ನೀರು ಬಳಸಿದರೆ ಸಾಕು. ಈ ಹಿಟ್ಟು ಗಟ್ಟಿಯಾಗಿ ಬರಬೇಕು. ಕೈಯಲ್ಲಿ ಉಂಡೆ ಕಟ್ಟಿದರೆ ಮೃದುವಾಗಿರಲಿ. ಆದ್ರೆ ನೀರಿನ ಅಂಶ ಹೆಚ್ಚಾಗಿ ಇರಬಾರದು.
ಈಗ ಚಪಾತಿ ಲಟ್ಟಿಸಿಕೊಳ್ಳವ ಮಣೆ ಹಾಗೂ ಲಟ್ಟಣಿಗೆ ತೆಗದುಕೊಂಡು ಸ್ವಲ್ಪ ಎಣ್ಣೆ ಹಚ್ಚಿಕೊಂಡು ಮಧ್ಯದಲ್ಲಿ ಸಣ್ಣ ಹಿಟ್ಟಿನ ಉಂಡೆ ಇಟ್ಟು ನಿಧಾನಾಗಿ ಲಟ್ಟಿಸಿಕೊಳ್ಳಿ. ಚಪಾತಿಯಂತೆ ದೊಡ್ಡದಾಗಿ ಮೊದಲು ಲಟ್ಟಿಸಿಕೊಳ್ಳಿ. ಅನಂತರ ನಿಮ್ಮ ಗಾತ್ರಕ್ಕೆ ಅನುಗುಣವಾಗಿ ಯಾವುದಾದರು ಇಡ್ಲಿ ಕಪ್, ಊಟದ ಬಾಕ್ಸ್ ತೆಗೆದುಕೊಂಡು ಅದನ್ನು ಹಿಟ್ಟಿನ ಮೇಲೆ ಒತ್ತಿಕೊಂಡು ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ.
ಇದೇ ವಿಧಾನದಲ್ಲಿ ಎಲ್ಲಾ ಹಿಟ್ಟನ್ನು ಕೂಡ ನೀವು ಉಂಡೆಯಿಂದ ನಿಪ್ಪಟ್ಟು ಮಾಡಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾಯಲು ಬಿಡಿ. ನಂತರ ಒಂದೇ ನಿಪ್ಪಟ್ಟು ಮೊದಲು ಹಾಕಿ ನಿಪ್ಪಟ್ಟು ಮೇಲೆ ಬರಲು ಬಿಡಿ. ಮೇಲೆ ಬಂದ ಬಳಿಕ ತಿರುಗಿಸಿಕೊಳ್ಳುತ್ತಾ ಎರಡೂ ಕಡೆಗಳಲ್ಲಿ ಕರಿದುಕೊಳ್ಳಿ ಇಷ್ಟಾದರೆ ನಿಮ್ಮ ಮುಂದೆ ಗರಿ ಗರಿಯ ಮಸಾಲ ನಿಪ್ಪಟ್ಟು ರೆಡಿಯಾಗುತ್ತದೆ. ಇದನ್ನು ಮನೆಯಲ್ಲಿ ಎಲ್ಲರೂ ಸವಿಯಲು ಇಷ್ಟಪಡುತ್ತಾರೆ, ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
