Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಬಾಯಿ ರುಚಿ ಹೆಚ್ಚಿಸುವ ಮಸಾಲೆ ನಿಪ್ಪಟ್ಟು! ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯುತ್ತೀರಿ!
ಮಳೆಗಾಲ ಆರಂಭದಲ್ಲೇ ಅಬ್ಬರಿಸುತ್ತಿದೆ. ರಾಜ್ಯದ ಹಲವು ಭಾಗದಲ್ಲಿ ನಿತ್ಯವು ಮಳೆಯಾಗುತ್ತಿದೆ. ಇಷ್ಟು ದಿನದಿಂದ ಕಾಡುತ್ತಿದ್ದ ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಮಂದಿ ಈಗ ಮಳೆಗಾಲದ ದಿನಗಳು ಸಂತಸ ತಂದಿವೆ. ಹಾಗೆ ಈ ಸಮಯದಲ್ಲಿ ರುಚಿ ರುಚಿಯಾಗಿ ಏನಾದರು ಸವಿಯಲು ಎಲ್ಚಲರು ಇಷ್ಟಪಡುತ್ತಾರೆ. ಹೆಚ್ಚಿನ ಮಂದಿ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಹಾಗೆ ಊಟದ ಜೊತೆಗೆ ಯಾವುದಾದರು ರುಚಿ ರುಚಿಯ ರೆಸಿಪಿಗಳ ಸವಿಯಲು ಮುಂದಾಗುತ್ತಾರೆ.
ಮಳೆಗಾಲದಲ್ಲಿ ಟೀ-ಕಾಫಿಯೊಂದಿಗೆ ಹಾಗೆ ಊಟದೊಂದಿಗೆ ಇಲ್ಲವೆ ಮಳೆಬರುವಾಗ ಖಾರ ಖಾರವಾಗಿ ನಾಲಗೆ ಮೇಲೆ ಏನಾದರು ಬಿದ್ದರೆ ಆ ದಿನ ಸ್ವರ್ಗದಂತಾಗುತ್ತೆ. ಹೀಗಾಗಿ ಮಂದಿ ಈ ಸಮಯದಲ್ಲಿ ಏನಾದರು ಸ್ನ್ಯಾಕ್ಸ್ ಸವಿಯಲು ಮುಂದಾಗುವುದು ನೋಡಬಹುದು. ನಾವಿಂದು ಅದ್ಭುತ ರುಚಿಯಲ್ಲಿ ಎಲ್ಲರು ಇಷ್ಟಪಡುವಂತಹ ರುಚಿ ರುಚಿಯ ನಿಪ್ಪಟ್ಟು ಮಾಡುವ ಕುರಿತಾಗಿ ತಿಳಿಯೋಣ.

ನೀವು ಕೂಡ ಹಲವು ಬಾರಿ ನಿಪ್ಪಟ್ಟು (Nippattu) ಸವಿದಿರುತ್ತೀರಿ. ಅಂಗಡಿಗಳಲ್ಲಿ ವಿಶೇಷ ರುಚಿಯ ನಿಪ್ಪಟ್ಟು ಸಿಗಲಿದೆ, ಹಾಗೆ ಮನೆಯಲ್ಲೂ ನೀವು ಮಾಡಿ ಸವಿದಿರಬಹುದು. ಆದ್ರೆ ನಾವಿಂದು ವಿಶೇಷ ರುಚಿ ನೀಡುವ ನಿಮ್ಮ ನಾಲಗೆಯೂ ಮತ್ತಷ್ಟು ಬೇಕೆನಿಸುವಂತಹ ರುಚಿಯಲ್ಲಿ ನಿಪ್ಪಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಅದರಲ್ಲೂ ನಾವಿಂದು ಮಸಾಲೆ ಭರಿತ ನಿಪ್ಪಟ್ಟು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಮಸಾಲೆ ನಿಪ್ಪಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ಈ ಲೇಖದಲ್ಲಿ ತಿಳಿದುಕೊಳ್ಳೋಣ.
ಮಸಾಲೆ ನಿಪ್ಪಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಶೇಂಗಾ ಬೀಜ
- ಹುರಿಗಡಲೆ
- ಕರಿಬೇವು
- ಎಣ್ಣೆ
- ಅಕ್ಕಿ ಹಿಟ್ಟು
- ಖಾರದ ಪುಡಿ
- ಜೀರಿಗೆ
- ಬಿಳಿ ಎಳ್ಳು
ಮಸಾಲೆ ನಿಪ್ಪಟ್ಟು ಮಾಡುವುದು ಹೇಗೆ?
ಮೊದಲು ಬಾಣಲೆ ಇಟ್ಟು ಅದಕ್ಕೆ ಶೇಂಗಾ ಬೀಜ ಹಾಕಿ ಹುರಿದುಕೊಳ್ಳಬೇಕು, ಶೇಂಗಾ ಸಿಪ್ಪೆ ಹೋಗುವಷ್ಟು ಹುರಿದು ಬಳಿಕ ಅದನ್ನು ತೆಗೆದಿಟ್ಟುಕೊಳ್ಳಿ. ನಂತರ ಸಿಪ್ಪೆ ತೆಗೆದ ಕಾಲು ಕಪ್ ಶೇಂಗಾ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಈಗ ಅದೇ ಮಿಕ್ಸಿ ಜಾರ್‌ಗೆ ಕಾಲು ಕಪ್ ಹುರಿಗಡಲೆ ಕೂಡ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ.
ಈಗ ಒಂದು ಬೌಲ್‌ಗೆ ಅಕ್ಕಿ ಹಿಟ್ಟು ಹಾಕಿಕೊಂಡು ಅದಕ್ಕೆ ತರಿ ತರಿಯಾಗಿ ರುಬ್ಬಿದ ಪುಡಿ ಹಾಕಿಕೊಳ್ಳಿ. ಸಣ್ಣದಾಗಿ ಕತ್ತರಿಸಿಕೊಂಡ ಕರಿಬೇವು, ಬಿಳಿ ಎಳ್ಳು, ಜೀರಿಗೆ, ಖಾರದ ಪುಡಿ, ಉಪ್ಪು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಈಗ ಎರಡು ಸ್ಪೂನ್ ತಣ್ಣಗಿನ ಎಣ್ಣೆ ಕೂಡ ಇದಕ್ಕೆ ಹಾಕಿ ಕೈಯಿಂದ ನಿಧಾನಕ್ಕೆ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ಈ ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ನೀರು ಹಾಕಿ ಕಲಸಿಕೊಳ್ಳಬೇಕು. ಇದು ಉಂಡೆ ಮಾಡಿದಾಗ ಗಟ್ಟಿಯಾಗಿರಬೇಕು. ಹಿಟ್ಟು ಹದ ಬಂದ ಬಳಿಕ ಈಗ ಪ್ಲಾಸ್ಟಿಕ್ ಕವರ್‌ಗೆ ಎಣ್ಣೆ ಹಚ್ಚಿಕೊಳ್ಳಿ. ಹಾಗೆ ಲಟ್ಟಣಿಗೆಗೂ ಎಣ್ಣೆ ಹಚ್ಚಿಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ನಿಪ್ಪಟ್ಟು ಲಟ್ಟಿಸಿಕೊಳ್ಳಿ.
ಕೈಯಲ್ಲಿ ಲಟ್ಟಿಸಲು ಹೋಗಬೇಡಿ ಬಹಳ ದಪ್ಪವಾಗುತ್ತೆ. ಅಂಗೈ ಅಗಲದಷ್ಟು ಗಾತ್ರವಿದ್ದರೆ ಉತ್ತಮ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಅನಂತರ ನಿಪ್ಪಟ್ಟು ಹಾಕಿಕೊಂಡು ಕರಿಯಲು ಬಿಡಿ. ಒಂದು ಬಾರಿಗೆ ಒಂದೇ ನಿಪ್ಪಟ್ಟು ಕರಿದುಕೊಳ್ಳಿ ಚೆನ್ನಾಗಿ ಎರಡೂ ಕಡೆ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಮಸಾಲೆ ನಿಪ್ಪಟ್ಟು ರೆಡಿಯಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
