Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬೇಸಿಗೆಯಲ್ಲಿ ದೇಹ ತಂಪಾಗಿಡುವ ಅಮೃತ: ಮನೆಯಲ್ಲೇ ಮಾಡಿ ಈ ರೀತಿ ಮಸಾಲ ಮಜ್ಜಿಗೆ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದು ಬಹಳ ಮುಖ್ಯವಾಗುತ್ತದೆ. ಅದ್ರಲ್ಲೂ ನಮ್ಮ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಲಿದೆ. ಬಿಸಿಲಿನಲ್ಲಿ ಕೆಲಸ ಮಾಡುವವರು ಅಥವಾ ಬಿಸಿಲಿಗೆ ತೆರೆದುಕೊಳ್ಳುವ ಮಂದಿ ಮಾತ್ರವಲ್ಲ ನಮ್ಮ ಆಹಾರ ಕ್ರಮಗಳು ಜೀವನ ಶೈಲಿಯು ಕೂಡ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಲು ಕಾರಣವಾಗಲಿದೆ.
ಹಾಗೆ ಬಿಸಿಲಿಯನಲ್ಲಿ ದೇಹವು ಬಹುಬೇಗ ದಣಿಯುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ನೀರು ಸೇವಿಸುವುದು ಮುಖ್ಯ, ಹಾಗೆ ಕಡಿಮೆ ಮಸಾಲ ಪದಾರ್ಥಗಳ ಸೇವಿಸುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಒತ್ತಡ ಕಡಿಮೆ ಮಾಡಲಿದೆ. ಹಾಗೆ ತಂಪಾದ ಪಾನಿಯಗಳು ನಿಮ್ಮ ದೇಹವನ್ನು ಸಮತೋಲನದಲ್ಲಿ ಇಡಲಿದೆ. ಆದ್ರೆ ಬೇಸಿಗೆಯಲ್ಲಿ ಎಲ್ಲಾ ಪಾನಿಯಗಳು ಸಹ ನಿಮ್ಮ ದೇಹವನ್ನು ತಂಪಾಗಿಸುವುದಿಲ್ಲ, ಕೆಲವು ಮತ್ತಷ್ಟು ಉಷ್ಣಾಂಶ ಹೆಚ್ಚಿಸಲು ಕಾರಣವೂ ಆಗಬಹುದು.

ಆದ್ರೆ ನಾವಿಲ್ಲಿ ದೇಹವನ್ನು ತಂಪಾಗಿಡುವ ಮಜ್ಜಿಗೆಯನ್ನು ಮಾಡುವ ಕುರಿತಾಗಿ ಹೇಳಲಿದ್ದೇವೆ. ಆದ್ರೆ ಇದು ಸಾಮಾನ್ಯ ಮಜ್ಜಿಗೆ ಅಲ್ಲ ಬದಲಿಗೆ ಇದೊಂದು ಮಸಾಲ ಭರಿತ ರುಚಿ ರುಚಿಯಾದ ತಂಪೂ ತರುವ ಮಜ್ಜಿಗೆಯಾಗಿದೆ. ಊಟದೊಂದಿಗೆ ನೀವು ಕೂಡ ಮಜ್ಜಿಗೆ ಸೇವಿಸಿರುತ್ತೀರಿ. ಆದ್ರೆ ಬಹಳಷ್ಟ ಕಡೆಗಳಲ್ಲಿ ಈಗ ಮಸಾಲ ಮಜ್ಜಿಗೆಯ ಕುಡಿುವುದು ನೋಡಬಹುದು. ಅಂಡಗಿಗಳಲ್ಲಿ 10 ರೂಪಾಯಿ ನೀಡಿ ನೀವು ಕುಡಿಯುವ ಮಜ್ಜಿಗೆ ದೇಹಕ್ಕೆ ತಂಪೆನಿಸಬಹುದು. ಆದ್ರೆ ಇದನ್ನು ಮನೆಯಲ್ಲಿ ಮತ್ತಷ್ಟು ರುಚಿಕರವಾಗಿ ಮಾಡಬಹುದು.
ಹಾಗಾದ್ರೆ ರುಚಿ ರುಚಿಯಾದ ಮಸಾಲ ಮಜ್ಜಿಗೆ ಮನೆಯಲ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರುಚಿ ರುಚಿಯ ಮಸಾಲ ಮಜ್ಜಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು
ಬೇಕು?
- ಮೊಸರು
- ನೀರು
- ಉಪ್ಪು
- ಹಸಿ ಮೆಣಸು
- ಜಿರಿಗೆ ಪುಡಿ
- ಇಂಗು
- ಪುದಿನ ಎಲೆ
- ಶುಂಠಿ
- ಕೊತ್ತಂಬರಿ ಸೊಪ್ಪು
ರುಚಿ ರುಚಿಯ ಮಸಾಲ ಮಜ್ಜಿಗೆ ಮಾಡುವ ಸುಲಭದ ವಿಧಾನಬೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ ಎಲೆಗಳು, ಶುಂಠಿ, ಬೆಳ್ಳುಳ್ಳಿ, ಉಪ್ಪು ಹಾಕಿ 1 ಸುತ್ತು ರುಬ್ಬಬೇಕು. ನಂತರ ಇದನ್ನು ತೆಗೆದು ಒಂದು ಬೌಲ್‌ಗೆ ಹಾಕಿ ಚೂರು ನೀರು ಹಾಕಿ ಇಂಗು, ಜೀರಿಗೆ ಪುಡಿ ಸಹ ಹಾಕಿ ಒಮ್ಮೆ ಮಿಶ್ರಣ ಮಾಡಿಕೊಳ್ಳಿ. ಈಗ ಇದಕ್ಕೆ ಅಳತೆ ಕಪ್‌ನಲ್ಲಿ 1 ಕಪ್ ಗಟ್ಟಿ ಮೊಸರು ಹಾಕಿ 3 ಕಪ್ ನೀರು ಹಾಕಿ.
ಈಗ ಈ ಎಲ್ಲಾ ಪದಾರ್ಥಗಳನ್ನು ಮಜ್ಜಿಗೆಯಂತೆ ಕಡೆಯಬೇಕು. ಅದೇ ಪಾತ್ರೆಯಲ್ಲಿ ಬ್ಲೆಂಡರ್ ಅಥವಾ ಮಿಕ್ಸಿ ಜಾರ್‌ಗೆ ಮತ್ತೆ ಹಾಕಿಕೊಂಡು ರುಬ್ಬಿಕೊಳ್ಳಬಹುದು. 2 ನಿಮಿಷ ರುಬ್ಬಿಕೊಂಡರೆ ಸಾಕಾಗುತ್ತದೆ. ರುಬ್ಬಿದ ಈ ಮಜ್ಜಿಗೆಯನ್ನು ಜರಡಿ ಹಿಡಿದು ಇನ್ನೊಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು, ಒಂದು ಈರುಳ್ಳಿ ಕೂಡ ಹಾಕಿಕೊಳ್ಳಬಹುದು.
ಇದನ್ನು ಹೀಗೆಯೇ ಕುಡಿಯಬಹುದು, ಇಲ್ಲವೆ ಒಂದು ಒಗ್ಗರಣೆ ಸಹ ಹಾಕಬಹುದು. ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಂದು ಒಗ್ಗರಣೆ ಮಾಡಿ ಒಗ್ಗರಣೆ ತಣ್ಣಗಾದ ಬಳಿಕ ಮಿಕ್ಸ್ ಮಾಡಿಕೊಂಡು ಕುಡಿಯಬಹುದು. ಇದು ಬಹಳ ರುಚಿ ನೀಡಲಿದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications