Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ!
ತಿಂಡಿಯ ಸಮಯಕ್ಕೆ ನೀವು ರುಚಿ ರುಚಿಯಾದ ಖಾದ್ಯ ಸವಿಯೋದು ಕಾಮನ್. ಹಾಗೆ ರೈಸ್ನಿಂದ ಮಾಡುವ ಹಲವು ರುಚಿ ರುಚಿಯಾದ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಚಿತ್ರಾನ್ನ, ಪುಳಿಯೋಗರೆ, ರೈಸ್ ಬಾತ್, ಪಲಾವ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಆದ್ರೆ ನಾವಿಂದು ಸುಲಭವಾಗಿ ಮಸಾಲೆಗಳನ್ನೇ ಬಳಸದೆ ಮಾಡುವ ವೈಟ್ ಪಲಾವ್ ಕುರಿತಾಗಿ ತಿಳಿದುಕೊಳ್ಳೋಣ.
ವೈಟ್ ಪಲಾವ್ ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಹೌದು ವೈಟ್ ಪಲಾವ್ ಹಲವರಿಗೆ ಇಷ್ಟವಾಗಬಹುದು. ಏಕೆಂದರೆ ಕಡಿಮೆ ಮಸಾಲೆಗಳ ಬಳಸಿಕೊಂಡು ಮಾಡುವ ಈ ಪಲಾವ್ ಬಹಳ ರುಚಿ ನೀಡಲಿದೆ. ಹಲವು ಹೋಟೆಲ್ಗಳಲ್ಲಿ ಈ ರೀತಿಯ ಪಲಾವ್ ನೀವು ಸವಿದಿರುತ್ತೀರಿ. ಆದ್ರೆ ಮನೆಯಲ್ಲಿ ಮಾಡುವ ಪಲಾವ್ ವಿಭಿನ್ನವಾಗಿರಲಿದೆ.

ಮನೆಯಲ್ಲಿ ಮಾಡುವ ಪಲಾವ್ಗೆ ನಾವು ಹಲವು ರೀತಿಯ ಮಸಾಲೆಗಳ ಬಳಸುತ್ತೇವೆ. ಹಲವು ವಸ್ತುಗಳಿಂದ ವಿಭಿನ್ನ ರುಚಿ ನೀಡುತ್ತದೆ. ಆದ್ರೆ ಈ ಪಲಾವ್ಗೆ ಯಾವುದೇ ಮಸಾಲೆಯ ಅವಶ್ಯಕತೆ ಇಲ್ಲ ಹಾಗೆ ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ಈ ಮಸಾಲೆ ಲೆಸ್ ವೈಟ್ ಪಲಾವ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಮಸಾಲೆ ಲೆಸ್ ವೈಟ್ ಪಲಾವ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಸಾಲೆ ಲೆಸ್ ವೈಟ್ ಪಲಾವ್ ಮಾಡಲು ಬೇಕಾಗುವ ವಸ್ತುಗಳು
- ರೈಸ್
- ತರಕಾರಿಗಳು
- ಕ್ಯಾರೆಟ್
- ಬಟಾಣಿ
- ಈರುಳ್ಳಿ
- ಟೊಮೆಟೋ
- ಬೀನ್ಸ್
- ಉಪ್ಪು
- ಎಣ್ಣೆ
ಮಸಾಲೆ ಲೆಸ್ ವೈಟ್ ಪಲಾವ್ ಮಾಡುವ ವಿಧಾನವೇನು?
ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಇದಕ್ಕೆ ಚಕ್ಕೆ, ಲವಂಗ, ಸೋಂಪುಕಾಳು, ಜೀರಿಗೆ, ಪಲಾವ್ ಎಲೆ, ಗೋಡಂಬಿ ಹಾಕಿಕೊಂಡು ಹುರಿದುಕೊಳ್ಳಿ. ಖಾರಕ್ಕೆ ಹಸಿ ಮೆಣಸು, 2 ಈರುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿ 1 ನಿಮಿಷ ಫ್ರೈ ಮಾಡಿ. ಹಾಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಕೊತ್ತಂಬರಿ ಮತ್ತು ಪುದಿನ ಸೊಪ್ಪು ಸಣ್ಣದಾಗಿ ಕತ್ತರಿಸಿಕೊಂಡು ಹಾಕಿಕೊಂಡು, ಟೊಮೆಟೋ ಹಾಗೂ ಉಪ್ಪು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. 2 ನಿಮಿಷದ ಬಳಿಕ ಇದಕ್ಕೆ ತರಕಾರಿಗಳ ಹಾಕಿಕೊಳ್ಳಿ. ನಿಮಗೆ ಯಾವ ತರಕಾರಿ ಬೇಕೋ ಆ ತರಕಾರಿ ಹಾಕಿಕೊಳ್ಳಿ. ಬಟಾಣಿ ಸಹ ಹಾಕಿಕೊಳ್ಳಿ. ಇದಕ್ಕೆ 2 ಗ್ಲಾಸ್ ಕಾಯಿ ಹಾಲು ಹಾಕಿಕೊಳ್ಳಿ. ವೈಟ್ ಪಲಾವ್ಗೆ ಇದು ಬಹಳ ಉತ್ತಮ.
ಕಾಯಿಯನ್ನು ತುರಿದುಕೊಂಡು ಬಳಿಕ ಮಿಕ್ಸಿ ಜಾರ್ನಲ್ಲಿ ಹಾಕಿ ಅದರಿಂದ ಹಾಲು ತೆಗೆದಿಟ್ಟುಕೊಳ್ಳಿ. 2 ಕಪ್ ಕಾಯಿ ಹಾಲು ಹಾಗೆ 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ. ಈಗ ಕುದಿಯಲು ಬಿಡಿ. ಇದಕ್ಕೆ ಯಾವುದೇ ಮಸಾಲೆ ಸೇರಿಸುವುದು ಬೇಡ. ನೀರು ಕುದಿಯಲು ಆರಂಭಿಸಿದಾಗ ಅಳತೆ ಪ್ರಮಾಣದಲ್ಲಿ ನೆನೆಸಿಟ್ಟ ಅಕ್ಕಿ ಹಾಕಿ. 15 ನಿಮಿಷ ಅಕ್ಕಿ ನೆನೆಸಿಟ್ಟು ಹಾಕಿಕೊಳ್ಳಬೇಕು.
ಅಕ್ಕಿ ಹಾಕಿದ ಬಳಿಕ ಚೆನ್ನಾಗಿ ನಿಧಾನಕ್ಕೆ ಮಿಕ್ಸ್ ಮಾಡಿ. 1 ಸ್ಪೂನ್ ತುಪ್ಪ ಹಾಕಿ ಕುದಿಬರಲು ಬಿಟ್ಟು ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ವೈಟ್ ಪಲಾವ್ ಸಿದ್ದವಾಗುತ್ತೆ.



Click it and Unblock the Notifications
