Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ದೋಸೆ-ಇಡ್ಲಿ ಜೊತೆಗೆ ಮಸಾಲ ಕುರ್ಮಾ; ಸುಲಭವಾಗಿ ಮಾಡೋದು ಹೇಗೆ?
ದಕ್ಷಿಣ ಭಾರತೀಯರಿಗೆ ಇಡ್ಲಿ ದೋಸೆ ಅಂದ್ರೆ ಬಹಳ ಇಷ್ಟವಾಗುವ ಖಾದ್ಯ. ಮನೆಯಿಂದ ಹಿಡಿದು ಹೋಟೆಲ್‌ನಲ್ಲು ಸಹ ಅವರು ದೋಸೆ ಅಥವಾ ಇಡ್ಲಿ ಸವಿಯಲು ಇಷ್ಟಪಡುತ್ತಾರೆ. ದೋಸೆಯಲ್ಲಿ ಹತ್ತಾರು ಬಗೆ ಮಾಡುವಂತೆ ಇಡ್ಲಿಯಲ್ಲೂ ಕೂಡ ಒಂದಿಷ್ಟು ಬಗೆಯ ಖಾದ್ಯ ಮಾಡುವುದು ನೋಡಬಹುದು. ಎಲ್ಲರಿಗೂ ಈ ರೀತಿಯ ತಿಂಡಿಗಳ ಸವಿಯಲು ಇಷ್ಟವಾಗುತ್ತೆ. ಹಾಗೆ ಬಹುತೇಕರಿಗೆ ಇಡ್ಲಿ ಮತ್ತು ದೋಸೆ ಅಂದ್ರೆ ಅದರೊಂದಿಗೆ ಚಟ್ನಿ ಅಥವಾ ಸಾಂಬಾರ್ ಇರಬೇಕಿದೆ.
ಆದ್ರೆ ಮನೆಯಲ್ಲಿ ಇಡ್ಲಿ ದೋಸೆ ಮಾಡಿದ್ರೆ ಎಲ್ಲರು ಸವಿಯಲು ಅದರೊಂದಿಗೆ ಸಾಂಬಾರ್, ಚಟ್ನಿ ಅಥವಾ ಕುರ್ಮಾ ಬಯಸುತ್ತಾರೆ. ಹೀಗಾಗಿ ನಾವಿಂದು ದೋಸೆ, ಇಡ್ಲಿ ಮಾಡಿದಾಗ ಅದನ್ನು ಸವಿಯಲು ಮಸಾಲ ಕುರ್ಮಾ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಬಹಳ ಸುಲಭವಾಗಿ ಹಾಗೆ ರುಚಿ ರುಚಿಯಾದ ಈ ವೆಜಿಟೇಬಲ್ ಕುರ್ಮಾ ಮಾಡುವ ಕುರಿತು ತಿಳಿಯೋಣ.

ಇಡ್ಲಿ ದೋಸೆಗೆ ಮಸಾಲ ಕುರ್ಮಾ ಮಾಡಲು ಯಾವೆಲ್ಲಾ ವಸ್ತುಗಳ ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಸಾಲ ಕುರ್ಮಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಈರುಳ್ಳಿ
- ಟೊಮೆಟೋ
- ಗೋಡಂಬಿ
- ಏಲಕ್ಕಿ
- ತೆಂಗಿನಕಾಯಿ
- ಲವಂಗ
- ಶುಂಠಿ
- ಬೆಳ್ಳುಳ್ಳಿ
- ಸೋಂಪು
- ಜೀರಿಗೆ
- ಹಸಿ ಮೆಣಸು
- ಕರಿಬೇವು
- ಖಾರದ ಪುಡಿ
- ಧನಿಯಾ
- ಅರಶಿಣ
- ಉಪ್ಪು
- ಕೊತ್ತಂಬರಿ ಸೊಪ್ಪು
ಮಸಾಲ ಕುರ್ಮಾ ಮಾಡುವ ವಿಧಾನವೇನು?
ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ದೊಡ್ಡದಾಗಿ ಹೆಚ್ಚಿದ ಒಂದು ಈರುಳ್ಳಿ, ಟೊಮೆಟೋ, ತೆಂಗಿನಕಾಯಿ ಚೂರುಗಳು, ಗೋಡಂಬಿ, ಏಲಕ್ಕಿ, ಲವಂಗ ಶುಂಠಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಕೊಂಡು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಸೋಂಪು, ಹಸಿ ಮೆಣಸು, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ಹಾಗೆ ಉದ್ದಕ್ಕೆ ಕತ್ತರಿಸಿಕೊಂಡ ಒಂದು ಈರುಳ್ಳಿ, ಹಾಗೆ ರುಬ್ಬಿಕೊಂಡಿದ್ದ ಮಸಾಲ ಇದಕ್ಕೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ. ಹಾಗೆ ಈಗ ಖಾರದ ಪುಡಿ, ಧನಿಯಾ ಪುಡಿ, ಅರಶಿಣ ಪುಡಿ, ಉಪ್ಪು ಕೂಡ ಹಾಕಿ ಮತ್ತೆ ಮಿಕ್ಸ್ ಮಾಡಿ.
ಈಗ ಇದಕ್ಕೆ ಎಷ್ಟು ದಪ್ಪವಾಗಿ ಬೇಕೋ ಆ ಹದಕ್ಕೆ ನೀರು ಹಾಕಿಕೊಳ್ಳಿ. ಹಾಗೆ ಕುದಿಬರಲು ಬಿಡಿ. ಮುಚ್ಚಳ ಮುಚ್ಚಿ ಸುಮಾರು 5 ನಿಮಿಷ ಆದರೂ ಕುದಿಬರಲು ಬಿಡಬೇಕು. ಇದು ಘಮ ಘಮ ಎನ್ನುವಂತೆ ಸುವಾಸನೆ ಬರಲಿದೆ. ಹಾಗೆ ಇದಕ್ಕೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಮಸಾಲ ಕುರ್ಮ ಸಿದ್ದವಾಗುತ್ತೆ. ಇಡ್ಲಿ ದೋಸೆಗೆ ಇದನ್ನು ಮಾಡಿದ್ರೆ ಬಾಯಿ ಚಪ್ಪರಿಸಿ ಸವಿಯೋದು ಖಚಿತ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
