Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಯುಗಾದಿಗೆ ಸ್ಪೆಷಲ್ ಆಗಿ ಮಸಾಲೆ ಭರಿತ ಕಾಳು ಗೊಜ್ಜು ಮಾಡಿ..! ಇಲ್ಲಿದೆ ವಿಧಾನ
ಮಾರ್ಚ್ ತಿಂಗಳು ಕೂಡ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದೇವೆ. ಮಾರ್ಚ್‌ನಲ್ಲಿ ವಿಶೇಷವಾಗಿ ಯುಗಾದಿ ಹಬ್ಬ ಬರಲಿದೆ. ಮಾರ್ಚ್ ಕೊನೆಯಲ್ಲಿ ಯುಗಾದಿ ಆರಂಭವಾಗುತ್ತಿದೆ. ಯುಗಾದಿ ಹಬ್ಬ ಅಂದರೆ ಹಿಂದೂ ಪಾಲಿಗೆ ಅತ್ಯಂತ ಪ್ರಮುಖ ಹಾಗೆ ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಹಬ್ಬವನ್ನು ಹಿಂದೂ ಸಮುದಾಯವು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದರಲ್ಲೂ ಯುಗಾದಿಯಂದು ಬೇವು ಬೆಲ್ಲ ಸವಿಯುವುದು ನಾವು ನೋಡಿರಬಹುದು.
ಹಾಗೆ ಯುಗಾದಿ ಅಂದರೆ ಅಲ್ಲಿ ಬಗೆ ಬಗೆಯ ತಿಂಡಿ ಮಾಡುವುದು ಕಾಮನ್. ಯುಗಾದಿಯಲ್ಲಿ ಹೋಳಿಗೆ ಎಲ್ಲರ ಮನೆಯ ಸಿಹಿ ತಿಂಡಿ ಎನ್ನಬಹುದು. ಹಾಗೆ ಹೋಳಿಗೆಯ ಜೊತೆಗೆ ಹಲವು ರೀತಿಯ ಖಾದ್ಯಗಳು ಈ ಹಬ್ಬದಂದು ಮಾಡಲಾಗುತ್ತೆ. ಅದರಲ್ಲೂ ನಾವಿಂದು ಯುಗಾದಿಯಲ್ಲಿ ಹಬ್ಬದ ಊಟದ ಜೊತೆಗೆ ಸವಿಯಲೆಂದು ಮಾಡುವಂತಹ ಮಸಾಲ ಭರಿತ ಕಾಳಿನ ಗೊಜ್ಜು ಮಾಡುವ ಕುರಿತು ತಿಳಿದುಕೊಳ್ಳೋಣ.

ಈ ಕಾಳು ಗೊಜ್ಜು ಮಾಡಲು ಕಡಲೆ ಕಾಳು, ಕಾಬೂಲ್ ಕಡಲೆ, ಬಟಾಣಿಯನ್ನು ಬಳಸಲಾಗುತ್ತದೆ. ಹಾಗೆ ಇದನ್ನು ಊಟದ ಜೊತೆಗೆ, ಹೋಳಿಗೆಯೊಂದಿಗೆ, ಚಪಾತಿ, ದೋಸೆಯೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ಕಾಳು ಗೊಜ್ಜು ಮಾಡುವುದು ಹೇಗೆ? ಕಾಳುಗಳಿಂದ ಮಾಡುವ ಕಾರಣ ನಿಮ್ಮ ಆರೋಗ್ಯಕ್ಕೆ ಇದು ಬಹಳ ಉತ್ತಮವಾಗಿದೆ.
ಹಾಗಾದ್ರೆ ಈ ಮಸಾಲೆ ಭರಿತ ಕಾಳಿನ ಗೊಜ್ಜು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳುಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬಿತ್ಯಾದಿ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಕಾಳಿನ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಕಾಳು - ಕಾಲು ಕಪ್
- ಬಟಾಣಿ- ಕಾಲು ಕಪ್
- ಕಾಬುಲ್ ಚನ್ನ-ಕಾಲು ಕಪ್
- ಬಾಳೆಕಾಯಿ-2
- ಆಲೂಗಡ್ಡೆ- 1
- ಈರುಳ್ಳಿ
- ಟೊಮೊಟೊ
- ತೆಂಗಿನ ಕಾಯಿ ತುರಿ
- ಚಕ್ಕೆ
- ಲವಂಗ
- ಕಾಳುಮೆಣಸು
- ಕೊತ್ತಂಬರಿ ಸೊಪ್ಪು
- ದನಿಯ ಪುಡಿ
- ಖಾರದ ಪುಡಿ
- ಅರಿಶಿನ ಪುಡಿ
- ಬೆಳ್ಳುಳ್ಳಿ
- ಹಸಿ ಶುಂಠಿ
- ಗಸಗಸೆ
- ಹುರಿಗಡಲೆ
- ಪುದಿನ ಸೊಪ್ಪು
- ಕರಿಬೇವು
- ಇಂಗು
- ಸಾಸಿವೆ
- ಉಪ್ಪು
- ಎಣ್ಣೆ
ಮಸಾಲೆ ಕಾಳಿನ ಗೊಜ್ಜು ಮಾಡುವ ವಿಧಾನ
ಮೊದಲು ಕಡಲೆ ಕಾಳು, ಬಟಾಣಿ, ಕಾಬೂಲ್ ಕಡಲೆಯನ್ನು ಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ ನೆನೆಸಿಡಬೇಕು. ಹಿಂದಿನ ದಿನ ರಾತ್ರಿಯೇ ಇದನ್ನು ನೆನೆಸಿಡಬೇಕು. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ನೆನೆಸಿಟ್ಟ ಎಲ್ಲಾ ಕೆಡಲೆಗಳನ್ನು ಹಾಕಿಕೊಂಡು ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಯಲು ಬಿಡಿ.
ಅನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗಸೆ ಗಸೆ, ಕಾಳು ಮೆಣಸು, ಲವಂಗ, ಚಕ್ಕೆ, ಹಾಕಿ ಬಳಿಕ 2 ಸ್ಪೂನ್ ಎಣ್ಣೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 5 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಧನಿಯಾ ಪುಡಿ, ಖಾರದ ಪುಡಿ, ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಈ ಪದಾರ್ಥ ತಣ್ಣಗಾಗಲು ಬಿಡಿ.
ಈ ವಸ್ತುಗಳು ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ, ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ, ಪುದಿನ, ಹುರಿಗಡಲೆ, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ದಪ್ಪವಾಗಿರುವಂತೆ ಹುರಿದುಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, ಕರಿಬೇವು, ಈರುಳ್ಳಿ ಹಾಕಿ ಬಿಸಿ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಒಂದು ಟೊಮೆಟೋ ಹಾಕಿ 2 ನಿಮಿಷ ಮತ್ತೆ ಫ್ರೈ ಮಾಡಿ. ಹಾಗೆ ಇಂದು ಆಲೂಗಡ್ಡೆ, ಬಾಳೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಇದಕ್ಕೆ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ ನೀರು ಹಾಕಿ ಬೇಯಲು 5 ನಿಮಿಷ ಬಿಡಿ.
ಈಗ ಕುಕ್ಕರ್‌ನಲ್ಲಿ ಬೆಂದಿರುವ ಕಾಳುಗಳನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ, ಹಾಗೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಯನ್ನು ಕೂಡ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡ ಬೇಯಲು ಬಿಡಿ. 6 ನಿಮಿಷ ಕುದಿಯಲು ಬಿಡಿ ಆಗಾಗ ತಳ ಹಿಡಿಯದಂತೆ ಮಿಕ್ಸ್ ಮಾಡಿ. ನಂತರ ಒಲೆ ಆಫ್ ಮಾಡಿಕೊಂಡರೆ ಮಸಾಲೆ ಭರಿತ ಕಾಳು ಗೊಜ್ಜು ರೆಡಿಯಾಗುತ್ತದೆ.



Click it and Unblock the Notifications
