Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಬಾಯಲ್ಲಿ ನೀರು ತರಿಸುವ ಬೆಳ್ಳುಳ್ಳಿ ಖಾರ ರೈಸ್! ಹೊಸ ರೀತಿ ತಿಂಡಿ ಇದು!
ಬ್ರೇಕ್ಫಾಸ್ಟ್ಗೆ ನೀವು ರುಚಿ ರುಚಿಯಾಗಿ ರೈಸ್ನಿಂದ ಮಾಡುವ ಯಾವುದಾದರು ಖಾದ್ಯ ಸವಿಯಲು ಇಷ್ಟಪಡಬಹುದು. ಅದ್ರಲ್ಲೂ ಹಲವರಿಗೆ ಪಲಾವ್, ಚಿತ್ರಾನ್ನ, ರೈಸ್ ಬಾತ್, ಚಿತ್ರಾನ್ನ ಸೇರಿ ಹಲವು ರೈಸ್ನಿಂದ ಮಾಡುವ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ. ಅದ್ರಲ್ಲೂ ಕೆಲವೊಮ್ಮೆ ಸ್ಪೆಷಲ್ ಆಗಿ ರೈಸ್ ಬಳಸಿ ಮಾಡುವ ರುಚಿ ರುಚಿಯ ಖಾದ್ಯ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ.
ಆದ್ರೆ ನಾವಿಂದು ಸುಲಭವಾಗಿ ಹಾಗೆ ಅತ್ಯಂತ ರುಚಿಕರ ರೀತಿಯಲ್ಲಿ ಮಾಡಿ ಸವಿಯಬಹುದಾದಂತಹ ಖಾದ್ಯವೊಂದರ ಕುರಿತಾಗಿ ತಿಳಿದುಕೊಳ್ಳೋಣ. ಬ್ರೇಕ್ಫಾಸ್ಟ್ ಸವಿಯಲು ಸುಲಭವಾಗಿ ಮಾಡುವಂತಹ ಬೆಳ್ಳುಳ್ಳಿ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಖಾರ ರೈಸ್ ಮಾಡಿದ್ರೆ ಬೆಳಗ್ಗೆ ತಿಂಡಿಗೆ ಮಾತ್ರವಲ್ಲದೆ ಮಧ್ಯಾಹ್ನದ ಬಾಕ್ಸ್ಗೂ ಸಹ ಬಳಸಬಹುದು.

ಈ ರೈಸ್ ರುಚಿ ಒಮ್ಮೆ ಸವಿದರೆ ನೋವು ವಾರದಲ್ಲಿ ಮತ್ತೆ ಎರಡು ಮೂರು ಬಾರಿ ಮಾಡಿ ಸವಿಯಲು ಮುಂದಾಗೋದು ಖಚಿತ. ಹಾಗಾದ್ರೆ ನಾವಿಂದು ಈ ಖಾರ ಬೆಳ್ಳುಳ್ಳಿ ರೈಸ್ ಮಾಡುವುದು ಹೇಗೆ ನೋಡೋಣ. ಬೆಳ್ಳುಳ್ಳಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿಯಿರಿ.
ಬೆಳ್ಳುಳ್ಳಿ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅನ್ನ
- ಬೆಳ್ಳುಳ್ಳಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಶುಂಠಿ
- ಈರುಳ್ಳಿ
- ಸಾಸಿವೆ
- ಜೀರಿಗೆ
- ಎಣ್ಣೆ
- ಉಪ್ಪು
- ಖಾರದ ಪುಡಿ
- ಅರಶಿಣ
ಬೆಳ್ಳುಳ್ಳಿ ರೈಸ್ ಮಾಡುವ ವಿಧಾನವೇನು?
ಮೊದಲು 2 ಗಡ್ಡೆ ಬೆಳ್ಳುಳ್ಳಿಯನ್ನು ಬಿಡಿಸಿಕೊಂಡು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ ಹಾಗೆ ಇದಕ್ಕೆ 1 ಸ್ಪೂನ್ ಖಾರದ ಪುಡಿ ಕೂಡ ಹಾಕಿ 2 ಸುತ್ತು ರುಬ್ಬಿ. ಪುಡಿ ಪುಡಿಯಾದರೆ ಸಾಕು. ಕಲ್ಲಿನಲ್ಲಿ ಜಜ್ಜಿಕೊಂಡರೂ ಸಾಕಾಗುತ್ತದೆ. ಹಾಗೆ ಇದಕ್ಕೆ 1 ಪೀಸ್ ಶುಂಠಿ ಕೂಡ ಹಾಕಿ ರುಬ್ಬಿಕೊಂಡಿರಿ. ಅದು ಚಟ್ನಿಯಂತೆ ಬರಬೇಕು, ಇದನ್ನು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ ಇದಕ್ಕೆ ಶೇಂಗಾ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಎಣ್ಣೆಗೆ ಒಣ ಮೆಣಸು ಕೂಡ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ನಂತರ ಸಾಸಿವೆ, ಜೀರಿಗೆ, ಕತ್ತರಿಸಿಕೊಂಡ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಸ್ವಲ್ಪ ಕರಿಬೇವು ಸೇರಿಸಿ ಫ್ರೈ ಮಾಡಿಕೊಂಡು ಮೊದಲು ರುಬ್ಬಿಕೊಂಡಿದ್ದ ಬೆಳ್ಳುಳ್ಳಿ ಖಾರವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಬೇಕು. ಎಣ್ಣೆ ಸ್ವಲ್ಪ ಹೆಚ್ಚಾಗಿ ಬಳಸಿಕೊಳ್ಳಿ. ಈ ಖಾರ ಚೆನ್ನಾಗಿ ಮಿಕ್ಸ್ ಆಗಬೇಕು. ಈಗ ಖಾರದ ಪುಡಿ, ಅರಶಿಣ ಹಾಕಿ ಮಿಶ್ರಣ ಮಾಡಿಕೊಳ್ಳಿ. ಉಪ್ಪು ಸಹ ಹಾಕಿಕೊಳ್ಳಿ. ಇದು ಗೊಜ್ಜಿನ ರೀತಿ ಬರಬೇಕು.
ಬಳಿಕ ಕೊತ್ತಂಬರಿ ಸೊಪ್ಪು, ಹಾಗೆ ಮೊದಲೇ ಮಾಡಿಟ್ಟ ಅನ್ನವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೊನೆಯಲ್ಲಿ ಫ್ರೈ ಮಾಡಿಕೊಂಡ ಶೇಂಗಾ ಬೀಜ ಹಾಗೆ ಮೆಣಸನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಚೆನ್ನಾಗಿ ಅನ್ನಕ್ಕೆ ಹಿಡಿಯಬೇಕು. ಹೀಗೆ ಮಾಡಿ ಸವಿದು ನೋಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಖಾರ ಬೆಳ್ಳುಳ್ಳಿ ಅನ್ನ ರೆಡಿಯಾಗುತ್ತದೆ. ಬ್ರೇಕ್ಫಾಸ್ಟ್ಗೆ ಇದು ಅದ್ಭುತ ರುಚಿ ನೀಡುವಂತಹ ಖಾದ್ಯ ಆಗಿರಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಆದರೂ ಟ್ರೈ ಮಾಡಿ ನೋಡಿ.



Click it and Unblock the Notifications