Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಪಾತಿ-ಊಟಕ್ಕೂ ರುಚಿ ನೀಡುವ ಮಸಾಲೆ ಎಗ್ ಬುರ್ಜಿ: ಮಾಡುವ ವಿಧಾನ ತುಂಬಾನೆ ಸಿಂಪಲ್!
ನೀವು ಊಟಕ್ಕೆ ರುಚಿ ರುಚಿಯ ಎಗ್ ಬುರ್ಜಿ ಮಾಡಿ ಸವಿದಿರುತ್ತೀರಿ. ವೆಜ್ ಹಾಗೂ ನಾನ್ ವೆಜ್ ಪ್ರಿಯರು ಕೂಡ ಈ ಎಗ್ ಬುರ್ಜಿ ಮಾಡಿ ಸವಿದಿರುತ್ತಾರೆ. ಊಟ ಹಾಗೂ ತಿಂಡಿಯ ಜೊತೆಗೆ ಎಗ್ ಬುರ್ಜಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಹಾಗೆ ಮಕ್ಕಳಿಂದ ಹಿಡಿದು ಎಲ್ಲರೂ ಎಗ್ ಬುರ್ಜಿ ಸವಿಯುವುದು ಅಂದ್ರೆ ಬಹಳ ಇಷ್ಟವಾಗುತ್ತೆ.
ಹಾಗೆ ವಿವಿಧ ರುಚಿಯಲ್ಲಿ ಎಗ್ ಬುರ್ಜಿ ಮಾಡುತ್ತೀರಿ. ಹೋಟೆಲ್‌ನಲ್ಲಿ ರೆಸ್ಟೋರೆಂಟ್‌ನಲ್ಲಿ ಎಗ್ ಬುರ್ಜಿ ಸವಿದರೆ ಆ ರುಚಿಗೆ ಮನಸೋಲುತ್ತೀರಿ, ಹಾಗೆ ಮನೆಯಲ್ಲಿ ಊಟದ ಸಮಯಕ್ಕೂ ನೀವು ಎಗ್ ಬುರ್ಜಿ ಮಾಡಿ ಸವಿದಿರುತ್ತೀರಿ. ಮನೆಯಲ್ಲಿ ಮಾಡುವಂತಹ ರುಚಿ ರುಚಿಯ ಎಗ್ ಬುರ್ಜಿ ಊಟಕ್ಕೆ ಫಸ್ಟ್ ಕ್ಲಾಸ್.
ಆದ್ರೆ ಯಾವಾಗಲು ಒಂದೇ ರೀತಿ ಎಗ್ ಬುರ್ಜಿ ಮಾಡುವ ಬದಲಾಗಿ ನಾವಿಂದು ಹೇಳುವಂತೆ ಸುಲಭದ ಹಾಗೆ ಬಹಳ ರುಚಿಕರ ರೀತಿಯ ಎಗ್ ಬುರ್ಜಿ ಮಾಡುವ ಕುರಿತು ತಿಳಿದುಕೊಳ್ಳಿ. ಬಹಳ ಸುಲಭವಾಗಿ ಮಸಾಲೆ ಭರಿತ ಎಗ್ ಬುರ್ಜಿ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ. ಇದಕ್ಕೆ ಮೊಟ್ಟೆ ಮಾತ್ರವಲ್ಲ ಅದರ ಜೊತೆಗೆ ಹಲವು ರೀತಿಯ ಮಸಾಲೆ ಹಾಕಿ ಬಾಯಿ ರುಚಿಯ ಎಗ್ ಬುರ್ಜಿ ಮಾಡಿ.

ಮಸಾಲೆ ಎಗ್ ಬುರ್ಜಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಎಗ್ ಬುರ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಟ್ಟೆ
- ಶುಂಠಿ
- ಹಸಿ ಮೆಣಸು
- ಕರಿಬೇವು
- ಈರುಳ್ಳಿ
- ಚಿಕನ್ ಮಸಾಲೆ
- ಧನಿಯ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅರಶಿಣ
- ಎಣ್ಣೆ
- ಈರುಳ್ಳಿ
- ಉಪ್ಪು
- ಟೊಮೆಟೋ
- ಖಾರದ ಪುಡಿ
ಮಸಾಲೆ ಎಗ್ ಬುರ್ಜಿ ಮಾಡುವುದು ಹೇಗೆ?
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೊಟ್ಟೆಗಳ ಒಡೆದು ಹಾಕಿಕೊಳ್ಳಿ. 4ರಿಂದ 5 ಮೊಟ್ಟೆ ಹಾಕಿಕೊಳ್ಳಿ. ನಂತರ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದು ಬಿಸಿಯಾದ ಬಳಿಕ 4 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಹಾಗೆ ಅದಕ್ಕೆ ಹಸಿ ಮೆಣಸು, ಕರಿಬೇವು, 4 ಈರುಳ್ಳಿ, ಹಾಕಿ 4 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಒಂದು ಟೊಮೆಟೋ ಸಹ ಹಾಕಿ ಬೇಯಿಸಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಅರಶಿಣ, ಧನಿಯಾ ಪುಡಿ, ಚಿಕನ್ ಮಸಾಲೆ ಹಾಕಿಕೊಂಡು ಅರ್ಧ ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಮೊದಲೇ ಒಡೆದು ಇಟ್ಟುಕೊಂಡಿರುವ ಮೊಟ್ಟೆಯನ್ನು ಈ ಮಸಾಲೆಗೆ ಹಾಕಿಕೊಳ್ಳಿ.
ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಅದು ಪುಡಿ ಪುಡಿ ಆಗುವಂತೆ ಮಿಕ್ಸ್ ಮಾಡಬೇಡಿ. ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. ಇದು ತಳ ಹಿಡಿಯದಂತೆ ಎಚ್ಚರಿಕೆಯಿಂದ ಮಿಕ್ಸ್ ಮಾಡಿ. ಮೊಟ್ಟೆ ಸೇರಿಸಿ 5 ನಿಮಿಷಗಳ ಕಾಲ ಕೈ ಬಿಡದೆ ಮಿಕ್ಸ್ ಮಾಡುತ್ತಾ ಇರಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಎಗ್ ಮಸಾಲೆ ಬುರ್ಜಿ ರೆಡಿಯಾಗುತ್ತದೆ. ಇದು ಹೋಟೆಲ್‌ನಲ್ಲಿ ನೀಡುವ ಬುರ್ಜಿಯಂತೆ ಇರಲಿದೆ.
ಈ ಎಗ್ ಬುರ್ಜಿ ಊಟದ ಜೊತೆಗೆ ಹಾಗೆ ಚಪಾತಿ, ದೋಸೆ ಜೊತೆಗೂ ಅದ್ಭುತ ರುಚಿ ನೀಡಲಿದೆ. ಮಸಾಲೆಯ ಘಮ ಮತ್ತಷ್ಟು ರುಚಿ ಹೆಚ್ಚಿಸಲಿದೆ.



Click it and Unblock the Notifications
