Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಸಾಲೆ ದೋಸೆಗೆ ಹಾಕುವ ಈ ಚಟ್ನಿ ಮಾಡುವುದು ಹೇಗೆ?: 5 ನಿಮಿಷದಲ್ಲಿ ಮಾಡಬಹುದು
ಮಸಾಲೆ ದೋಸೆ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮನೆಯಲ್ಲಿ ಮಾತ್ರವಲ್ಲ ಹೋಟೆಲ್ನಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಸವಿಯವುದು ಅಂದ್ರೆ ಎಲ್ಲರಿಗೂ ಇಷ್ಟ. ಮಸಾಲೆ ದೋಸೆ ಜೊತೆಗೆ ತೆಂಗಿನಕಾಯಿ ಚಟ್ನಿ ಇದ್ದರಂತು ಅದರ ರುಚಿಯೇ ಬೇರೆ. ಹಾಗೆ ರೋಸ್ಟ್ ಮಾಡಿದ ಮಸಾಲೆ ದೋಸೆಗೆ ಒಂದಿಷ್ಟು ಅಭಿಮಾನಿಗಳೇ ಇದ್ದಾರೆ ಅಂದರೂ ತಪ್ಪಾಗುವುದಿಲ್ಲ.
ಹಾಗೆ ಈ ಮಸಾಲೆ ದೋಸೆಯನ್ನ ನಾವು ಸಹ ಮನೆಯಲ್ಲಿ ಮಾಡಿ ಸವಿದಿರುತ್ತೇವೆ. ಮಸಾಲೆ ದೋಸೆ ಮಾಡುವುದು ಅಂದ್ರೆ ಮತ್ತೆ ಅದರ ಜೊತೆಗೆ ಒಂದೆರಡು ಖಾದ್ಯ ಮಾಡಬೇಕಾಗುತ್ತದೆ. ಮಸಾಲೆ ದೋಸೆಗೆ ಆಲೂಗಡ್ಡೆ ಪಲ್ಯ ಹಾಗೂ ಕೆಂಪು ಚಟ್ನಿ ಮಾಡಿದರೆ ರುಚಿಯ ದುಪ್ಪಟ್ಟಾಗುತ್ತೆ. ನಾವು ಮಸಾಲೆ ದೋಸೆಗೆ ಈ ಆಲೂಗಡ್ಡೆ ಪಲ್ಯ ಮಾಡುವುದನ್ನು ಈ ಮೊದಲೇ ತಿಳಿಸಿದ್ದೆವು. ಈಗ ಕೆಂಪು ಚಟ್ನಿ ಕುರಿತಂತೆ ತಿಳಿಯೋಣ.

ಮಸಾಲೆ ದೋಸೆ ಹೆಚ್ಚು ರುಚಿ ಬರಬೇಕಾದರೆ ಅದರ ಮೇಲೆ ಒಂದು ಕೆಂಪು ಬಣ್ಣದ ಚಟ್ನಿಯನ್ನು ಸವರುತ್ತಾರೆ. ಇದು ಮಸಾಲೆ ದೋಸೆಗೆ ಖಾರದ ಜೊತೆಗೆ ಒಂದಿಷ್ಟು ರುಚಿ ಹಚ್ಚಿಸಲು ಮುಖ್ಯವಾಗಿರುತ್ತೆ. ಹಾಗಾದ್ರೆ ನಾವಿಂದು ಈ ಕೆಂಪು ಚಟ್ನಿಯನ್ನು ಮಾಡುವುದನ್ನು ನೋಡೋಣ. ಕೆಂಪು ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನೇನು? ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ದೋಸೆಗೆ ಕೆಂಪು ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಒಣ ಮೆಣಸು - 15
- ಜೀರಿಗೆ
- ಬೆಳ್ಳುಳ್ಳಿ -2
- ಚಕ್ಕೆ
- ಕರಿಬೇವಿನ ಸೊಪ್ಪು
- ಉಪ್ಪು
ಮಸಾಲೆ ದೋಸೆಗೆ ಕೆಂಪು ಚಟ್ನಿ ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರ್ಗೆ ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಚಕ್ಕೆ, ಮೆಣಸಿನ ಕಾಯಿ, ಒಂದು ಚಿಟಿಕೆ ಉಪ್ಪು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಸ್ವಲ್ಪವೇ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನೀರು ಹೆಚ್ಚಾದರೆ ಚಟ್ನಿ ತೆಳುವಾಗುತ್ತದೆ. ಹೀಗಾಗಿ ಸ್ವಲ್ಪವೇ ನೀರು ಬಳಸಿಕೊಳ್ಳಿ. ಇದು ಗಟ್ಟಿಯಾಗಿರುವಂತೆ ರುಬ್ಬಿಕೊಳ್ಳಬೇಕು.
ನಂತರ ಬೌಲ್ಗೆ ಹಾಕಿಕೊಂಡು ಮಸಾಲೆ ದೋಸೆ ಮಾಡುವಾಗ ದೋಸೆಯ ಮೇಲೆ ಹಚ್ಚಿಕೊಂಡು ರೋಸ್ಟ್ ಮಾಡಿದರೆ ದೋಸೆ ರೆಡಿಯಾಗುತ್ತದೆ. ಆದ್ರೆ ಇದೇ ಚಟ್ನಿಗೆ ನೀವು ಒಗ್ಗರಣೆ ಹಾಕಿದರೆ ಬೇರೆ ಎಲ್ಲಾ ತಿಂಡಿಗೂ ಬಳಸಬಹುದು. ಹೇಗೆ ಎಂಬುದನ್ನು ನಾವೀಗ ತಿಳಿಯೋಣ.
ಮೊದಲು ಈ ಒಗ್ಗರಣೆಗೆ ಏನೆಲ್ಲಾ ಬೇಕು ಎಂಬುದನ್ನು ತಿಳಿದುಕೊಳ್ಳೋಣ.
- ಜೀರಿಗೆ
- ಸಾಸಿವೆ
- ಕರಿವೇವು
- ಬೆಳ್ಳುಳ್ಳಿ
ಈ ಚಟ್ನಿಯನ್ನು ಬೇರೆ ತಿಂಡಿಗೆ ಬಳುವುದಾರೆ ಅದಕ್ಕೊಂದು ಒಗ್ಗರಣೆ ಹಾಕಿಕೊಳ್ಳಿ. ಮೊದಲು ಸಣ್ಣ ಪಾತ್ರ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಹಾಕಿ ಇಳಿಸಿಕೊಂಡು ಈ ಚಟ್ನಿಗೆ ಹಾಕಿ ತಿರುಗಿಸಿಕೊಳ್ಳಿ. ಬೇಕಾದರೆ ಸ್ವಲ್ಪ ನೀರು ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿಕೊಂಡರೆ ಈ ಚಟ್ನಿ ಎಲ್ಲಾ ಖಾದ್ಯದ ಜೊತೆಯೂ ಸವಿಯಬಹುದು.
ನೀವು ಸಹ ಒಮ್ಮೆ ಮನೆಯಲ್ಲಿ ಈ ಚಟ್ನಿ ಟ್ರೈ ಮಾಡಿ ನೋಡಿ. ಇದು ಎಲ್ಲಾ ದೋಸೆಯೊಂದಿಗೆ ಸವಿಯಬಹುದು. ಸ್ವಲ್ಪ ಹೆಚ್ಚು ಖಾರವಾಗಿರುವುದರಿಂದ ರುಚಿ ಮತ್ತಷ್ಟು ಹೆಚ್ಚುತ್ತದೆ.



Click it and Unblock the Notifications
