Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಭಾನುವಾರದ ಬಾಡೂಟಕ್ಕೆ ಇಲ್ಲಿದೆ ಚಿಕನ್ ಸಾರು..! ಈ ಮಸಾಲೆ ಹಾಕಿದ್ರೆ ಬೊಂಬಾಟ್ ರುಚಿ!
ಭಾನುವಾರ ಅಂದ್ರೆ ಬಹುತೇಕರ ಮನೆಯಲ್ಲಿ ಮಾಂಸಹಾರ ಮಾಡುತ್ತಾರೆ. ಅದ್ರಲ್ಲೂ ಚಿಕನ್, ಮಟನ್ ಕಾಮನ್ ಆಗಿ ಮಾಡುತ್ತಾರೆ. ಭಾನುವಾರ ಎಲ್ಲರು ಮನೆಯಲ್ಲೇ ಇರೋದ್ರಿಂದ ಆ ದಿನ ನಾನ್ ವೆಜ್ ಮಾಡುತ್ತಾರೆ. ಅದ್ರಲ್ಲಿ ಚಿಕನ್ ಐಟಂಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವು ಚಿಕನ್ ಕಬಾಬ್, ಚಿಕನ್ ಸುಕ್ಕಾ, ಚಿಕನ್ ಗ್ರೇವಿ, ಪೆಪ್ಪರ್ ಡ್ರೈ, ಮಸಾಲ ಫ್ರೈ ಹೀಗೆ ಹತ್ತಾರು ಬಗೆಯಲ್ಲಿ ಚಿಕನ್ ಐಟಂ ಮಾಡಲಾಗುತ್ತೆ.
ಬಹುತೇಕರಿಗೆ ಚಿಕನ್‌ನಿಂದ ಮಾಡಿರುವ ಎಲ್ಲಾ ಖಾದ್ಯಗಳು ಕೂಡ ಇಷ್ಟವಾಗುತ್ತವೆ. ಭಾನುವಾರದ ಬಾಡೂಟದಲ್ಲಿ ಚಿಕನ್ ಇದ್ದರೇನೆ ಊಟಕ್ಕೊಂದು ರುಚಿ ಬರೋದು. ನಾವಿಂದು ರುಚಿ ರುಚಿಯ ಮಸಾಲೆ ಭರಿತ ಚಿಕನ್ ಸಾರು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಯಾವಾಗಲು ಒಂದೇ ರೀತಿಯ ಚಿಕನ್ ಸಾರು ಮಾಡಿ ಬೇಸರವಾಗಿದ್ರೆ ಈ ರೀತಿಯ ರೆಸಿಪಿ ಮಾಡಿ ನೋಡಿ.

ಚಿಕನ್‌ಗೆ ಹೆಚ್ಚಾಗಿ ಮಸಾಲೆಗಳ ಪ್ರಮಾಣ ಸರಿಯಾಗಿ ಹಾಕಿದರೆ ಮಾತ್ರ ರುಚಿ ಬೊಂಬಾಟ್ ಆಗಿರುತ್ತೆ. ಹಾಗಾದ್ರೆ ನಾವಿಂದು ಅದ್ಭುತ ರುಚಿಯಲ್ಲಿ ಚಿಕನ್ ಸಾರು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ರುಚಿಯಾಗಿ ಕಡಿಮೆ ಸಮಯದಲ್ಲಿ, ನಾಲಿಗೆ ರುಚಿ ಹೆಚ್ಚಿಸುವಂತಹ ಚಿಕನ್ ಸಾರು ಮಾಡುವ ಕುರಿತು ಇಲ್ಲಿದೆ ಮಾಹಿತಿ.
ಈ ಚಿಕನ್ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕು?, ಯಾವೆಲ್ಲಾ ಮಸಾಲೆಗಳನ್ನು ಹಾಕಬೇಕು ಅನ್ನೋದನ್ನ ತಿಳಿಯಿರಿ.
ಚಿಕನ್ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಚಿಕನ್
- ಈರುಳ್ಳಿ
- ಟೊಮೆಟೋ
- ಶುಂಠಿ
- ಕೊತ್ತಂಬರಿ ಸೊಪ್ಪು
- ಗರಂ ಮಸಾಲೆ
- ಉಪ್ಪು
- ಎಣ್ಣೆ
- ಧನಿಯಾ ಪುಡಿ
- ಅರಶಿಣ
- ಕಾಳು ಮೆಣಸು
- ಲವಂಗ
- ಚಕ್ಕೆ
- ಗಸೆಗಸೆ
- ಖಾರದ ಪುಡಿ
- ಕಸೂರಿ ಮೇಥಿ
ಚಿಕನ್ ಸಾರು ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆ ಇಟ್ಟು ದೊಡ್ಡಗಾಗಿ ಕತ್ತರಿಸಿಕೊಂಡ ಎರಡು ಈರುಳ್ಳಿ ಹಾಕಿ ನಂತರ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿಕೊಳ್ಳಬೇಕು. ಎರಡರಿಂದ ಮೂರು ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕಾಳು ಮೆಣಸು ಕೂಡ ಹಾಕಿ. ಹಾಗೆ ಇದಕ್ಕೆ ಒಂದು ಸ್ಪೂನ್ ಗಸೆಗಸೆ, ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚಿಟಿಕೆ ಅರಶಿನ ಹಾಕಿಕೊಂಡು ಅರ್ಧ ಗ್ಲಾಸ್ ನೀರು ಹಾಕಿ ಫ್ರೈ ಮಾಡಿಕೊಳ್ಳಬೇಕು.
1 ನಿಮಿಷಗಳ ಕಾಲ ನಿರಂತರವಾಗಿ ತಿರುಗಿಸಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿ ಈ ಮಸಾಲೆಯನ್ನು ತಣ್ಣಗಾಗಲು ಬದಿಗೆ ಇಟ್ಟುಕೊಳ್ಳಿ. ಈ ನಡುವೆ ಮತ್ತೊಂದು ಪಾತ್ರೆ ಸಾರು ಮಾಡಲು ಒಲೆ ಮೇಲೆ ಇಟ್ಟುಕೊಂಡು ಅದಕ್ಕೆ ಎಣ್ಣೆ, ಕರಿಬೇವು, ಕಸೂರಿ ಮೇಥಿ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ಟೊಮೆಟೋ ಕೂಡ ಹಾಕಿ ಫ್ರೈ ಮಾಡಿಕೊಳ್ಳಿ.
ಇದು ಫ್ರೈ ಆಗುವಾಗ ತೊಳೆದು ಇಟ್ಟಿರುವ ಚಿಕನ್ ಅನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಉಪ್ಪು, ಅರಶಿನ ಹಾಕಿ ಸಹ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ತಣ್ಣಗಾಗಲು ಇಟ್ಟಿದ್ದ ಮಸಾಲೆಯನ್ನು ಹಾಕಿ ರುಬ್ಬಿಕೊಳ್ಳಬೇಕು. ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಇದನ್ನು ಒಲೆ ಮೇಲೆ ಇರುವ ಚಿಕನ್‌ಗೆ ಹಾಕಿ ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನೀರು ಸ್ವಲ್ಪ ಚಿಕನ್ ಮುಚ್ಚಿ ಮೇಲೆ ಇರಲಿ. ಇದರ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿಕೊಳ್ಳಿ. ಮಧ್ಯದಲ್ಲಿ ತಳ ಹಿಡಿಯದಂತೆ ತಿರುಗಿಸಿಕೊಳ್ಳಿ. ಒಟ್ಟು 8 ನಿಮಿಷ ಬೆಂದರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ಚಿಕನ್ ಸಾರು ರುಚಿಕರವಾಗಿರುತ್ತೆ. ನೀವು ಗರಂ ಮಸಾಲೆ ಹಾಕುವಾಗ ಬೇಕಾದರೆ ಘಮಲಿಗೆ ಚಿಕನ್ ಮಸಾಲೆ ಕೂಡ ಹಾಕಿಕೊಳ್ಳಬಹುದು. ನೀವು ಕೂಡ ಈ ಭಾನುವಾರ ಈ ರೀತಿ ಚಿಕನ್ ಸಾರು ಮಾಡಿ ನೋಡಿ.



Click it and Unblock the Notifications
