Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಿಭಿನ್ನ ರುಚಿಯ ಚಿಕನ್ ಫ್ರೈ ಮಾಡಿ..! ಮಸಾಲೆ ರುಬ್ಬದೆ ಮಾಡುವ ರೆಸಿಪಿ ಇದು..!
ಭಾರತೀಯರು ಖಾದ್ಯ ಪ್ರಿಯರು. ಅವರಿಗೆ ಋತುಮಾನ ದೊಡ್ಡ ಸಮಸ್ಯೆಯಲ್ಲ. ಯಾವ ಕಾಲದಲ್ಲೂ ಎಲ್ಲಾ ಆಹಾರವನ್ನು ಸೇವಿಸುವ ಮನಸ್ಸು ಅವರಿಗಿದೆ. ಅದರಲ್ಲೂ ಖಾರದ ಆಹಾರ ಎಲ್ಲಾ ಕಾಲದಲ್ಲೂ ಅವರು ಸೇವಿಸುತ್ತಾರೆ. ಚಿಕನ್‌ನಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಚಿಕನ್ ಅನ್ನು ಸಾರು ಮಾಡಿ ತಿನ್ನುವುದಕ್ಕಿಂತ, ಸ್ವಲ್ಪ ಡ್ರೈ ರೀತಿ ಮಾಡಿ ತಿನ್ನಬೇಕೆಂದು ಬಯಸುವುದಾದರೆ ಈ ಚಿಕನ್ ಫ್ರೈ ಟ್ರೈ ಮಾಡಬಹುದು.
ಚಿಕನ್‌ನಲ್ಲಿ ಕಾಯಿ ಹಾಕಿ ಮಾಡುವ ಸಾರು ತುಂಬಾ ರುಚಿಯಾಗಿರುತ್ತದೆ. ಅದನ್ನು ಬಿಟ್ಟರೆ ಈ ರೀತಿ ಫ್ರೈ ಮಾಡಿದರೆ ಸಿಕ್ಕಾಪಟ್ಟೆ ರುಚಿ ಇರುತ್ತದೆ. ಇಂದು ನಾವು ಡಿಫರೆಂಟ್ ಆಗಿ ಚಿಕನ್ ಫ್ರೈ ಮಾಡೋದನ್ನು ಟ್ರೈ ಮಾಡೋಣ. ಹಾಗಾದ್ರೆ ಈ ಚಿಕನ್ ಫ್ರೈ ಮಾಡೋದು ಹೇಗೆ? ಅದನ್ನು ಮಾಡಲು ಬೇಕಾಗಿವ ಪದಾರ್ಥಗಳೇನು? ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.

ಚಿಕನ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ಚಿಕನ್ - 500 ಗ್ರಾಂ
- ಈರುಳ್ಳಿ-2
- ಹಸಿರು ಮೆಣಸಿನಕಾಯಿ - 2
- ಸೋಂಕಾಳು - 1/4 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ದಾಲ್ಚಿನ್ನಿ - 1 ಪಿಸಿ
- ಏಲಕ್ಕಿ - 2 ಪಿಸಿಗಳು
- ಲವಂಗ - 2 ಪಿಸಿಗಳು
- ಚಕ್ರಮೊಗ್ಗು -1
- ಪಲಾವ್ ಎಲೆ - 1
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಕರಿಬೇವಿನ ಎಲೆಗಳು - 2 tbs
- ಟೊಮೆಟೊ-2
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1/2 ಟೀಸ್ಪೂನ್
- ಸಾಂಬಾರ್ ಪುಡಿ - 1 tbs
- ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbs
- ಕರಿಮೆಣಸು ಪುಡಿ - 1 ಟೀಸ್ಪೂನ್
- ನೀರು - 1/2 ಕಪ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಚಿಕನ್ ಫ್ರೈ ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಚೆಕ್ಕೆ, ಲವಂಗ, ಸೋಂಕಾಳು, ಚಕ್ರಮೊಗ್ಗು, ಪಲಾವ್ ಎಲೆ ಹಾಕಿ, ಬಳಿಕ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ, ಹಸಿ ಮೆಣಸಿನಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಬ್ರೌನ್ ಕಲರ್ ಬಂದಾಗ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ 2 ಟೊಮೆಟೋವನ್ನು ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಕರಿಬೇವು, ಅರಶಿನ ಪುಡಿ, ಖಾರದ ಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈ ಫ್ರೈಗೆ ತೊಳೆದಿಟ್ಟುಕೊಂಡ ಚಿಕನ್ ಹಾಕಿಕೊಂಡು ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಫ್ರೈ ಮಾಡಿ. ಬಳಿಕ ಒಂದು ಸಣ್ಣ ಕಪ್‌ನಲ್ಲಿ ನೀರು ಹಾಕಿ ಬಳಿಕ 20 ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ನಿಮಗೆ ಎಷ್ಟು ದಪ್ಪ ಅಥವಾ ಎಷ್ಟು ತೆಳುಬೇಕೋ ಅಷ್ಟು ಹೊತ್ತು ಬೇಯಿಸಬಹುದು.
ಅಂತಿಮವಾಗಿ ಸ್ವಲ್ಪ ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಚಿಕನ್ ಫ್ರೈ ರೆಡಿ. ಇದು ವಿಶೇಷವಾಗಿ ಧನಿಯಾ ಪುಡಿ ಹಾಕದೇ ಮಾಡಲಾಗಿದೆ. ಹೀಗಾಗಿ ವಿಶೇಷ ರುಚಿ ನೀಡಲಿದೆ. ಇದಕ್ಕೆ ಮಸಾಲೆ ರುಬ್ಬಿಕೊಳ್ಳಬೇಕು ಅನ್ನೋದಿಲ್ಲ. ಹಾಗೆ ಮಾಡಬಹುದು.



Click it and Unblock the Notifications
