Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
5 ನಿಮಿಷದಲ್ಲಿ ಮಸಾಲ ಗೋಡಂಬಿ ರೆಡಿ..! ರುಚಿಗೆ ಬಾಯಲ್ಲಿ ನೀರು ಬರುತ್ತೆ!
ನೀವು ಮನೆಯಲ್ಲಿದ್ದಾಗ ಸಂಜೆ ಸಮಯದಲ್ಲಿ ಸವಿಯಲು ಯಾವುದಾದರು ಖಾದ್ಯಗಳ ಸವಿಯಲು ಬಯಸಿರುತ್ತೀರಿ. ಅದ್ರಲ್ಲೂ ಬಗೆ ಬಗೆಯ ಖಾದ್ಯಕ್ಕಿಂತಲೂ ಬಾಯಿ ರುಚಿ ಹೆಚ್ಚಿಸುವಂತಹ ಸ್ನ್ಯಾಕ್ಸ್‌ಗಳು ಇದ್ದರೆ ರುಚಿ ಅದ್ಭುತವಾಗಿರುತ್ತೆ. ಹಾಗೆ ಟೀ ಕಾಫಿಯ ಸಮಯದಲ್ಲಂತು ಯಾವುದಾದರು ಕರಿದ ತಿಂಡಿಯನ್ನು ಎಲ್ಲರು ಬಯಸುತ್ತಾರೆ. ನಾವು ಕೂಡ ಅಂಗಡಿ, ಬೇಕರಿಗಳಿಂದ ಖರೀದಿಸಿ ತರುವ ಹಲವು ರೀತಿ ತಿಂಡಿಗಳ ಸವಿಯುತ್ತೇವೆ.
ಇನ್ನು ಮನೆಯಲ್ಲಿ ಮಕ್ಕಳಿದ್ದರೆ ಹಾಗೆ ಶುಭ ಕಾರ್ಯಗಳು, ಅತಿಥಿಗಳ ಆಗಮನದ ಸಮಯದಲ್ಲಿ ಯಾವುದಾದರು ತಿಂಡಿ ಮಾಡಿಟ್ಟರೆ ಅದ್ಭುತವಾಗಿರಲಿದೆ. ಅಂತಹ ಹಲವು ರುಚಿ ರುಚಿಯ ತಿಂಡಿಗಳ ಪೈಕಿ ನಾವಿಂದು ಸುಲಭವಾಗಿ ಮಾಡುವಂತಹ ಮಸಾಲ ಗೋಡಂಬಿ ಮಾಡುವ ಕುರಿತು ತಿಳಿದುಕೊಳ್ಳೋಣ. ಗೋಡಂಬಿಯಲ್ಲಿ ಹಲವು ರೀತಿಯ ಖಾದ್ಯಗಳ ನೀವು ಸವಿದಿರುತ್ತೀರಿ.

ಆದ್ರೆ ಮಸಾಲೆಗಳ ತುಂಬಿದ ಗೋಡಂಬಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಈ ಗೋಡಂಬಿ ಅಂಗಡಿಗಳಲ್ಲಿ ಬೇಕರಿಯಲ್ಲಿ ನೀವು ಕೂಡ ನೋಡಿರುತ್ತೀರಿ. ಸವಿಯಲು ಮುಂದಾಗಿರುತ್ತೀರಿ. ಆದ್ರೆ ಮನೆಯಲ್ಲೇ ನಾವಿಂದು ಈ ರೀತಿಯಾಗಿ ರುಚಿ ರುಚಿಯ ಮಸಾಲೆ ಗೋಡಂಬಿ ಮಾಡಿ ಸವಿಯುವುದು ಹೇಗೆ ನೋಡೋಣ.
ಕೆಲವೇ ನಿಮಿಷದಲ್ಲಿ ಮಸಾಲ ಗೋಡಂಬಿ ಮಾಡಿ ಸವಿಯುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಗೋಡಂಬಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಗೋಡಂಬಿ
- ತುಪ್ಪ
- ಖಾರದ ಪುಡಿ
- ಜೀರಿಗೆ ಪುಡಿ
- ಇಂಗು
- ಕಾಳು ಮೆಣಸಿನ ಪುಡಿ
- ಗರಂ ಮಸಾಲೆ
ಮಸಾಲ ಗೋಡಂಬಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಉಪ್ಪು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ, ಚಿಟಿಕೆ ಇಂಗು, ಗರಂ ಮಸಾಲೆ ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮಸಾಲೆಯನ್ನು ತೆಗೆದಿಟ್ಟು ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟುಕೊಳ್ಳಿ. ನಂತರ ಅದಕ್ಕೆ 1 ಸ್ಪೂನ್ ತುಪ್ಪ ಹಾಕಿಕೊಂಡು ಬಿಸಿ ಮಾಡಿ.
ನಂತರ ಗೋಡಂಬಿಯನ್ನು ಅದಕ್ಕೆ ಹಾಕಿ ಹುರಿದುಕೊಳ್ಳಬೇಕು. ಇಡೀ ಗೋಡಂಬಿಯನ್ನು ಇದಕ್ಕೆ ಬಳಸುವುದು ಸೂಕ್ತ, ಟೂ ಪೀಸ್ ಗೋಡಂಬಿ ಕೂಡ ಬಳಸಬಹುದು. ಹೀಗೆ ಗೋಡಂಬಿಯನ್ನು ಹಾಕಿ ಚೆನ್ನಾಗಿ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಹುರಿದುಕೊಳ್ಳಬೇಕು. ಚೆನ್ನಾಗಿ ಹುರಿದುಕೊಂಡ ಬಳಿಕ ಈಗ ಖಾರದ ಪುಡಿ ಹಾಕಿ ಮತ್ತೆ 1 ನಿಮಿಷ ಮಿಕ್ಸ್ ಮಾಡಬೇಕು.
ಈಗ ಒಲೆ ಆಫ್ ಮಾಡಿಕೊಂಡು ಈಗಾಗಲೇ ಮಿಕ್ಸ್ ಮಾಡಿಕೊಂಡಿದ್ದ ಮಸಾಲೆ ಪುಡಿಗಳನ್ನು ಇದಕ್ಕೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಬೇಕು. ಬಾಣಲೆಯ ಬಿಸಿಯಲ್ಲೇ ಇದು ಬೇಯಬೇಕು. ಒಲೆ ಆರಿಸದೆ ಮಸಾಲೆ ಹಾಕಿದರೆ ಕರಟುವ ಸಾಧ್ಯತೆ ಇರಲಿದೆ. ಹಾಗೆ ಸುಟ್ಟು ಹೋಗಬಹುದು. ಹೀಗಾಗಿ ಒಲೆ ಆಫ್ ಮಾಡಿದ ಬಳಿಕವೇ ಈ ಮಸಾಲೆಗಳ ಹಾಕಿ ಮಿಶ್ರಣ ಮಾಡಬೇಕು.
ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಮಸಾಲ ಗೋಡಂಬಿ ರೆಡಿಯಾಗುತ್ತದೆ. ಮನೆಯಲ್ಲಿ ಬಹಳ ಸುಲಭವಾಗಿ ಮಾಡಿ ಮುಗಿಸಬಹುದಾದ ಒಂದು ರೆಸಿಪಿ ಇದಾಗಿದೆ. ಅದ್ರಲ್ಲೂ ಸಂಜೆಯ ಸಮಯದಲ್ಲಿ ಮನೆ ಮಂದಿಯಲ್ಲ ಕುಳಿತು ಸವಿಯಬಹುದು. ಬಹಳ ರುಚಿಕರವಾಗಿರಲಿದೆ. ಹಾಗೆ ಸ್ಟೀಲ್ ಡಬ್ಬಿಗೆ ಹಾಕಿ ಬಹಳ ದಿನಗಳ ಕಾಲ ಇಟ್ಟು ಸವಿಯಬಹುದು.



Click it and Unblock the Notifications
