Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮದುವೆ ಮನೆ ರುಚಿಯ ಸೊಗಸಾದ ಎಲೆಕೋಸಿನ ಪಲ್ಯ ಮಾಡಿ..! ಇಲ್ಲಿದೆ ಸುಲಭ ರೆಸಿಪಿ
ನೀವು ಊಟಕ್ಕೆ ಹಲವು ತರಕಾರಿಗಳ ಪಲ್ಯವನ್ನು ಮಾಡಿ ಸವಿದಿರುತ್ತೀರಿ. ಎಲ್ಲಾ ಸಮಯದಲ್ಲು ನೀವು ರುಚಿ ರುಚಿಯಾಗಿ ಏನಾದರು ವಿಶೇಷವಾದ ಪಲ್ಯ ಮಾಡಲು ಬಯಸಿರುತ್ತೀರಿ. ನಿತ್ಯ ಒಂದೇ ರೀತಿಯ ಪಲ್ಯ ಒಂದೇ ರೀತಿಯ ಸಾಂಬಾರ್ ಸವಿಯಲು ಹೇಗೆ ಇಷ್ಟಪಡುವುದಿಲ್ಲವೋ ಅದೇ ರೀತಿ ಹೊಸದಾಗಿ ಪಲ್ಯ ಮಾಡುವ ಕುರಿತು ತಿಳಿದಿರುತ್ತೀರಿ.
ಅದರಲ್ಲೂ ನಿಮಗೆ ಎಲೆಕೊಸಿನ ಪಲ್ಯ ಬಹಳ ಇಷ್ಟವಿರಬಹುದು. ಅದರಲ್ಲೂ ನೀವು ಮದುವೆ ಮನೆಗಳಿಗೆ ಹೋದಾಗ ಅಲ್ಲಿ ಮಾಡುವಂತಹ ಮಸಾಲೆಗಳೇ ಇಲ್ಲದ ಅದ್ಭುತ ರುಚಿ ನೀಡುವ ಪಲ್ಯವನ್ನಂತು ನೀವು ಬಾಯಿ ಚಪ್ಪರಿಸಿ ಸವಿದಿರುತ್ತೀರಿ. ಅನ್ನದ ಜೊತೆಗೆ ಮಾತ್ರವಲ್ಲ ತಿಂಡಿಯ ಜೊತೆಗೆ ಹಾಗೆ ಸವಿಯಲು ಕೂಡ ಈ ಪಲ್ಯ ಅದ್ಭುತವಾಗಿರುತ್ತೆ.

ಮನೆಯಲ್ಲಿ ಈ ಪಲ್ಯ ಮಾಡಿದ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಹಾಗಾದ್ರೆ ನಾವು ಈ ಮದುವೆ ಮನೆ ರುಚಿಯಲ್ಲಿ ಎಲೆಕೋಸಿನ ಪಲ್ಯ ಮಾಡುವುದು ಹೇಗೆ ಎನ್ನುವುದು ನಾವಿಂದು ತಿಳಿದುಕೊಳ್ಳೋಣ. ಈ ಎಲೆಕೋಸಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಪಲ್ಯ ಮಾಡುವ ವಿಧಾನವೇನು? ಎಲೆಕೋಸಿನ ಪಲ್ಯ ಮಾಡಲು ಎಸಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಲೆಕೋಸಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಎಲೆಕೋಸು - 1
- ಕಡಲೆ ಬೇಳೆ
- ಈರುಳ್ಳಿ
- ಸಾಸಿವೆ
- ಜೀರಿಗೆ
- ಹಸಿ ಮೆಣಸು
- ಒಣ ಮೆಣಸು
- ಕರಿಬೇವು
- ತೆಂಗಿನ ತುರಿ
- ಅರಶಿಣ
- ಕೊತ್ತಂಬರಿ
- ಉಪ್ಪು
- ಎಣ್ಣೆ
ಎಲೆಕೋಸಿನ ಪಲ್ಯ ಮಾಡುವುದು ಹೇಗೆ?
ಮೊದಲಿಗೆ ಎಲೆಕೋಸನ್ನು ಚೆನ್ನಾಗಿ ಕತ್ತರಿಸಿಕೊಂಡು ತೊಳೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಇನ್ನೊಂದು ಕಡೆ ಕಡಲೆ ಬೇಳೆಯನ್ನು ಕೂಡ ಚೆನ್ನಾಗಿ ತೊಳೆದು ನೀರು ಹಾಕಿ ನೆನೆಸಿಡಬೇಕು. 2 ರಿಂದ 3 ಗಂಟೆ ನೆನೆಸಿಟ್ಟರೆ ಉತ್ತಮ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಅದಕ್ಕೆ ಕೆಡಲೆ ಬೇಳೆ ಹಾಕಿ ನೀರು ಸಹ ಹಾಕಿಕೊಳ್ಳಿ. ಹಾಗೆ ಎಲೆಕೋಸನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ಹಾಗೆ 10 ನಿಮಿಷ ಬೇಯಲು ಬಿಡಿ.
ಬೇಯುವ ವೇಳೆ ಅರಶಿಣ, ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ 10 ನಿಮಿಷದ ಬಳಿಕ ಅದನ್ನು ತೆಗೆದಿಟ್ಟುಕೊಳ್ಳಿ. ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ ಹಾಕಿ ಬಿಡಿ ಮಾಡಿ. ನಂತರ ಇದಕ್ಕೆ ಹಸಿ ಮೆಣಸು, ಒಣ ಮೆಣಸು, ಈರುಳ್ಳಿ, ಕರಿಬೇವು ಸಹ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ.
ಅನಂತರ ಇದಕ್ಕೆ ಉಪ್ಪು ಹಾಗೂ ಬೇಯಿಸಿಕೊಂಡಿರುವ ಎಲೆಕೋಸು ಕಡಲೆ ಬೇಳೆಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಹಾಗೆಯೇ ಬಿಡಿ. 2 ನಿಮಿಷದ ಬಳಿಕ ಇದಕ್ಕೆ ತೆಂಗಿನಕಾಯಿ ತುರಿ ಹಾಕಿ, ಕೊತ್ತಂಬರಿ ಸೊಪ್ಪು ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. 2 ರಿಂದ 3 ನಿಮಿಷ ಫ್ರೈ ಮಾಡಿಕೊಂಡರೆ ನಿಮ್ಮ ಮುಂದೆ ಸೊಗಸಾದ ಈ ಎಲೆಕೋಸಿನ ಪಲ್ಯ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಮದುವೆ ಮನೆಯಲ್ಲೂ ಕೂಡ ಇದೇ ವಿಧಾನ ಬಳಸಿ ಈ ಪಲ್ಯ ಮಾಡಲಾಗುತ್ತೆ, ಇದೇ ರುಚಿ ಮನೆಯಲ್ಲೇ ಮಾಡಿಕೊಳ್ಳಬಹುದು.



Click it and Unblock the Notifications
