Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
1 ನಿಮಿಷದಲ್ಲಿ ರೆಡಿ ಮಾಡಿ ಈ ಮಾವಿನ ಹಣ್ಣಿನ ಸೀಕರಣೆ: ಎಷ್ಟು ರುಚಿ ಗೊತ್ತಾ?
ಮಾವಿನ ಹಣ್ಣಿನ ಸೀಸನ್ನಲ್ಲಿ ನೀವು ಅದರಿಂದ ಹಲವು ಬಗೆಯ ಖಾದ್ಯಗಳ ಸವಿದಿರುತ್ತೀರಿ. ಮಾವಿನ ಹಣ್ಣು ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಮಾವಿನ ಕಾಯಿ ಚಿತ್ರಾನ್ನ, ಚಟ್ನಿ ನೀವು ಸವಿದಿರುತ್ತೀರಿ. ಹಾಗೆ ಮಾವಿನಕಾಯಿ ಉಪ್ಪಿನಕಾಯಿ ಅಂದ್ರೆ ನಿಮ್ಮ ಬಾಯಲ್ಲಿ ನೀರು ಬರಬಹುದು. ಇನ್ನು ಮಾವಿನ ಹಣ್ಣು ಬಳಸಿ ಕೂಡ ಹಲವು ರೀತಿ ಖಾದ್ಯಗಳ ರೆಡಿ ಮಾಡಬಹುದು. ಅದರಲ್ಲೂ ಮಾವಿನ ಹಣ್ಣಿನ ಗೊಜ್ಜು, ಸಾರು ಸಹ ಮಾಡಿ ಸವಿಯೋದು ನೋಡಿದ್ದೇವೆ.
ವಿಶೇಷ ರುಚಿಯಲ್ಲಿ ಮಾವಿನ ಹಣ್ಣಿನ ದೋಸೆ ಸಹ ಮಾಡುವುದುಂಟು. ಇನ್ನು ನಾವು ಎಲ್ಲರು ಸವಿಯಲು ಮುಂದಾಗುವಂತಹ ಮಾವಿನ ಹಣ್ಣಿನ ಸೀಕರಣೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಉತ್ತರ ಕರ್ನಾಟಕ ಭಾಗದಲ್ಲಿ ಶುಭ ಕಾರ್ಯಗಳು, ಪೂಜೆ ಇದ್ದರೆ ಮಾವಿನ ಹಣ್ಣಿನ ಸೀಕರಣೆ ಮಾಡುವುದು ನೋಡಬಹುದು.

ಬಹಳ ರುಚಿಕರವಾದ ಹಾಗೆ ಕಡಿಮೆ ಸಮಯಯದಲ್ಲಿ ಥಟ್ ಎಂದು ಇದನ್ನು ತಯಾರು ಮಾಡಬಹುದು. ಮಕ್ಕಳಿಗಂತು ಈ ಸೀಕರಣೆ ರುಚಿ ಸವಿದರೆ ಬಾಯಲ್ಲಿ ನೀರು ಬರುವಂತಾಗುತ್ತದೆ. ಅಷ್ಟು ರುಚಿಕರವಾಗಿ ಮಾವಿನ ಹಣ್ಣಿನ ಸೀಕರಣೆ ಮಾಡುತ್ತೇವೆ. ಇದನ್ನು ಮಾಡಲು ಕೆಲವೇ ವಸ್ತುಗಳ ಅವಶ್ಯಕತೆ ಇದೆ. ಹಾಗಾಗಿ ನೀವು ಸಹ ಸುಲಭವಾಗಿ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ಈ ಸೀಕರಣೆ ಮಾಡಿ ಸವಿದು ನೋಡಿ.
ಹಾಗಾದ್ರೆ ಮಾವಿನ ಹಣ್ಣಿನಿಂದ ಈ ಸೀಕರಣೆ ಮಾಡುವುದು ಹೇಗೆ?, ಮಾವಿನ ಹಣ್ಣಿನ ಸೀಕರಣೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನ ಹಣ್ಣಿನ ಸೀಕರಣೆ ಮಾಡಲು ಬೇಕಾಗುವ ವಸ್ತುಗಳು
- ಮಾವಿನ ಹಣ್ಣು
- ಬೆಲ್ಲ
- ಶುಂಠಿ ಪುಡಿ
- ಏಲಕ್ಕಿ ಪುಡಿ
- ಹಾಲು
ಮಾವಿನ ಹಣ್ಣಿನ ಸೀಕರಣೆ ಮಾಡುವುದು ಹೇಗೆ?
ಮೊದಲು ಮಾವಿನ ಹಣ್ಣುಗಳ ತೊಳೆದು ಅದರ ಸಿಪ್ಪೆ ತೆಗೆದು ಕತ್ತರಿಸಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ನಂತರ ಅದಕ್ಕೆ ಬೆಲ್ಲ ಹಾಕಿಕೊಳ್ಳಿ. ಬೆಲ್ಲ ಕುಟ್ಟಿ ಪುಡಿ ಮಾಡಿ ಹಾಕಿ, ಹಾಗೆ ಏಲಕ್ಕಿ ಪುಡಿ ಹಾಗೂ ಶುಂಠಿ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣ ದಪ್ಪವಾದರೆ ಅಥವಾ ನಿಮಗೆ ತೆಳುವಾಗಿ ಬೇಕಿದ್ದರೆ ಹಾಲನ್ನು ಕೂಡ ಹಾಕಿಕೊಂಡು ಮತ್ತೆ ಮಿಶ್ರಣ ಮಾಡಿಕೊಳ್ಳಿ. ಇಷ್ಟಾದರೆ ಸಾಕು ನಿಮ್ಮ ಮುಂದೆ ರುಚಿ ರುಚಿಯ ಮಾವಿನ ಹಣ್ಣಿನ ಸೀಕರಣೆ ರೆಡಿಯಾಗುತ್ತದೆ. ಇದನ್ನು ನೀವು ಕೂಡ ಮನೆಯಲ್ಲಿ 1 ನಿಮಿಷದಲ್ಲಿ ಮಾಡಬಹುದು. ಹಾಗೆ ಸವಿಯಲು ನೀಡಿದೆ ಅದರ ರುಚಿಗೆ ಮತ್ತೆ ಮತ್ತೆ ಕೇಳಿ ಸವಿಯುವುದು ಖಚಿತ.
ಈ ಮಾವಿನ ಹಣ್ಣಿನ ಸೀಕರಣೆಯನ್ನು ಹಬ್ಬದ ಸಮಯದಲ್ಲಿ, ಪೂಜೆ, ಶುಭ ಕಾರ್ಯವಿದ್ದಾಗ ಅಥವಾ ಅತಿಥಿಗಳು ಬಂದಾಗಲು ಇದನ್ನು ಥಟ್ ಎಂದು ಮಾಡಬಹುದು, ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಮನೆಯಲ್ಲಿ ಈ ಮಾವಿನ ಹಣ್ಣಿನ ಸೀಕರಣೆ ಮಾಡಿ ಸವಿದು ನೋಡಿ ಅದರಲ್ಲೂ ಮಕ್ಕಳಿಗಂತು ಇದು ಬಹಳ ಇಷ್ಟವಾಗುವ ಖಾದ್ಯ ಆಗಿರಲಿದೆ.
ಮಾವಿನ ಹಣ್ಣಿನ ಆರೋಗ್ಯಕರ ಲಾಭವೇನು?
ಮಾವಿನಹಣ್ಣುಗಳು ವಿಟಮಿನ್ ಸಿ ಮತ್ತು ವಿಟಮಿನ್ ಎ ಇಂದ ಕೂಡಿರಲಿವೆ. ಇದು ಬಿಳಿ ರಕ್ತಕಣಗಳ ಹಾಗೂ ರೋಗ ನಿರೋಧಕ ಶಕ್ತಿಯ ಉತ್ತೇಜನಕ್ಕೆ ಮುಖ್ಯ ವಸ್ತು ಆಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಬಹಳ ಸಹಕಾರಿಯಾಗಲಿದೆ. ಮಾವಿನಹಣ್ಣುಗಳು ಅಮೈಲೇಸ್ಗಳಂತಹ ಕಿಣ್ವಗಳನ್ನು ಹೊಂದಿದೆ, ಇದು ಕಾರ್ಬೋಹೈಡ್ರೇಟ್ಗಳ ನಿವಾರಣೆಗೆ ಸಹಕಾರಿ ಹಾಗೆ ಜೀರ್ಣಕ್ರಿಯೆಗೂ ಕೂಡ ಸಹಕಾರಿಯಾಗಲಿದೆ.



Click it and Unblock the Notifications