Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಪುಳಿಯೋಗರೆ..! ಹೀಗೆ ಮಾಡಿ ನೋಡಿ..!
ಹಲವರ ಬೆಳಗ್ಗಿನ ಅಚ್ಚು ಮೆಚ್ಚಿನ ತಿಂಡಿ ಅಂದರೆ ಅದು ಪುಳಿಯೋಗರೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಪುಳಿಯೋಗರೆ ಸವಿಯುತ್ತಾರೆ. ಅದರಲ್ಲೂ ಹಲವು ರೀತಿಯ ಪುಳಿಯೋಗರೆಯನ್ನು ಮಾಡಬಹುದಾಗಿದೆ. ಪುಳಿಯೋಗರೆ ಮಿಕ್ಸ್ ಒಂದು ಇದ್ದರೆ ಕೆಲವೇ ನಿಮಿಷದಲ್ಲಿ ಸವಿಯಲು ತಿಂಡಿ ರೆಡಿಯಾಗುತ್ತದೆ.
ಜೊತೆಗೆ ಈಗ ಮಾವಿನ ಕಾಯಿ ಸೀಸನ್ ಆಗಿರೋದ್ರಿಂದ ಜನ ಮಾವಿನ ಕಾಯಿಯಿಂದ ಮಾಡುವ ಹಲವು ಖಾಧ್ಯ ಸವಿಯಲು ಇಷ್ಟಪಡುತ್ತಾರೆ. ಅದರಲ್ಲಿ ಮಾವಿನ ಕಾಯಿ ಚಿತ್ರಾನ್ನ ಹಾಗೂ ಮಾವಿನ ಕಾಯಿಯ ಪುಳಿಯೋಗರೆಯೂ ಸಹ ಒಂದಾಗಿದೆ.

ಈ ಮಾವಿನ ಕಾಯಿ ಪುಳಿಯೋಗರೆ ಮಾಡುವುದು ತುಂಬಾನೆ ಸುಲಭ ಜೊತೆಗೆ ರುಚಿಯಲ್ಲೂ ಎತ್ತಿದ ಕೈ. ಒಮ್ಮೆ ನೀವು ಮಾಡಿ ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನಿಸುತ್ತದೆ. ಹಾಗಾದ್ರೆ ನಾವಿಂದು ಈ ಮಾವಿನಕಾಯು ಪುಳಿಯೋಗರೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಮಾವಿನ ಕಾಯಿ ಪುಳಿಯೋಗರೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ. ಮಾಡಲು ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ.
ಮಾವಿನ ಕಾಯಿ ಪುಳಿಯೋಗರೆ ಮಾಡಲು ಬೇಕಾಗುವ ಪದಾರ್ಥಗಳು
- ಮಾವಿನಕಾಯಿ - 1
- ಅನ್ನ - 1 ಬೌಲ್
- ಬಿಳಿ ಎಳ್ಳು- 1/4 ಚಮಚ
- ಜೀರಿಗೆ- 1/4 ಚಮಚ
- ಸಾಸಿವೆ
- ಮೆಂತ್ಯ- 1/4 ಚಮಚ
- ಒಣ ಮೆಣಸಿನಕಾಯಿ- 2
- ಕರಿಬೇವು
- ಇಂಗು
- ಕಡಲೆ ಬೇಳೆ
- ಉದ್ದಿನ ಬೇಳೆ
- ಕಾಳುಮೆಣಸು
- ಕಡಲೆಕಾಯಿ ಬೀಜ
- ಅರಿಶಿಣ
- ಉಪ್ಪು
- ಕೊತ್ತಂಬರಿ ಸೊಪ್ಪು
- ಎಣ್ಣೆ
ಮಾವಿನ ಕಾಯಿ ಪುಳಿಯೋಗರೆ ಮಾಡುವ ವಿಧಾನ
ಮೊದಲಿಗೆ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಕೊಬ್ಬರಿ, ಎಳ್ಳು, ಜೀರಿಗೆ ಮೆಂತ್ಯ, ಕಡಲೆ ಬೇಳೆ, ಕಾಳು ಮೆಣಸು, ಉದ್ದಿನ ಬೇಳೆ, ಕರಿಬೇವು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷ ಹುರಿದ ಬಳಿಕ ಅದನ್ನು ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ಅದನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರ್ಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಇದೇ ಮಿಕ್ಸರ್ಗೆ ತುರಿದುಕೊಂಡಿರುವ ಮಾವಿನಕಾಯಿ ಹಾಗು ಸ್ವಲ್ಪವೆ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಹೆಚ್ಚು ನೀರು ಹಾಕಿಕೊಳ್ಳಬೇಡಿ.
ರುಬ್ಬಿಕೊಂಡ ಮಸಾಲೆಯನ್ನು ಬದಿಗಿಟ್ಟುಕೊಂಡು ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ. ಅದೇ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಒಣ ಮೆಣಸು, ಕಡಲೆಬೀಜ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. 3 ನಿಮಿಷದ ಬಳಿಕ ಅದಕ್ಕೆ ಬಿಳಿ ಎಳ್ಳು, ಅರಿಶಿಣ ಹಾಗೂ ಮೊದಲು ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆ ಚೆನ್ನಾಗಿ ಬೆಂದ ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ.
ಇದಕ್ಕೆ ಕೊನೆಯ ಹಂತವಾಗಿ ಅನ್ನವನ್ನು ಮಿಶ್ರಣ ಮಾಡಿಕೊಳ್ಳಿ. ಅನ್ನ ಹಾಕುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಸಾಲೆ ಹರಡಿಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಮಾವಿನ ಕಾಯಿ ಪುಳಿಯೋಗರೆ ರೆಡಿಯಾಗುತ್ತದೆ.
ಇದನ್ನು ಬೆಳಗ್ಗೆ ತಿಂಡಿಗೆ, ಮಧ್ಯಾಹ್ನದ ಊಟದ ಜೊತೆಯೂ ಸವಿಯಬಹುದು. ನಿಮಗೆ ಎಷ್ಟು ಪ್ರಮಾಣದಲ್ಲಿ ಅಗತ್ಯವಿದೆಯೋ ಅಷ್ಟು ಹಾಕಿಕೊಳ್ಳಿ. ಮಾವಿನ ಕಾಯಿ ಹುಳಿಯಾದರೆ ಸ್ವಲ್ಪ ಪ್ರಮಾಣದಲ್ಲಿ ಹಾಕಿದರೆ ಸಾಕಾಗುತ್ತದೆ. ಹಲವರ ಬೆಳಗ್ಗಿನ ಅಚ್ಚು ಮೆಚ್ಚಿನ ತಿಂಡಿ ಅಂದರೆ ಅದು ಪುಳಿಯೋಗರೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಪುಳಿಯೋಗರೆ ಸವಿಯುತ್ತಾರೆ. ಅದರಲ್ಲೂ ಹಲವು ರೀತಿಯ ಪುಳಿಯೋಗರೆಯನ್ನು ಮಾಡಬಹುದಾಗಿದೆ. ಪುಳಿಯೋಗರೆ ಮಿಕ್ಸ್ ಒಂದು ಇದ್ದರೆ ಕೆಲವೇ ನಿಮಿಷದಲ್ಲಿ ಸವಿಯಲು ತಿಂಡಿ ರೆಡಿಯಾಗುತ್ತದೆ.



Click it and Unblock the Notifications
