Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಮಕ್ಕಳು ಒಮ್ಮೆ ತಿಂದ್ರೆ ಬಿಡೋದೇ ಇಲ್ಲ! ಬಾಯಲ್ಲಿ ಕರಗುವ ಮಾವಿನ ಲಡ್ಡು.. ಮಾಡೋದು ತುಂಬಾ ಈಸಿ
ಮಾವಿನ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಮಾವಿನ ಹಣ್ಣಿನ ಸುಗ್ಗಿ ಶುರುವಾಗಿ, ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಬರೀ ಮಾವಿನ ಹಣ್ಣು (Mango) ತಿಂದು ತಿಂದು ಬೇಜಾರಾಗಿದ್ದರೆ, ಮಾವಿನ ಹಣ್ಣನ್ನು ಬಳಸಿಕೊಂಡು ಹಲವು ತಿಂಡಿ, ತಿನಿಸುಗಳನ್ನು ಮಾಡಿ ಸವಿಯಿರಿ. ಹೌದು, ಮಾವಿನ ಹಣ್ಣಿನಿಂದ ದೋಸೆ, ಹೋಳಿಗೆ, ಸಾಂಬಾರ್, ಹಲ್ವಾ, ಜ್ಯೂಸ್, ಮಾವಿನ ಹಣ್ಣಿನ ಶಿಕರಣೆ ಸಹ ಮಾಡಲಾಗುತ್ತದೆ. ಇದರೊಂದಿಗೆ ಮಾವಿನ ಹಣ್ಣಿನಿಂದ ಲಡ್ಡು (Mango Laddu) ಕೂಡ ಮಾಡಬಹುದು. ತುಂಬಾ ಸುಲಭವಾಗಿ ಮಾಡಬಹುದಾದ ಈ ಲಡ್ಡು ಹೆಚ್ಚು ರುಚಿ ಇರುತ್ತದೆ. ಮಾವಿನ ಹಣ್ಣನ್ನು ಈ ರೀತಿಯಲ್ಲು ಸವಿಯಬಹುದು.
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇದರ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯದಿಂದಾಗಿ ಈ ಬಿರುದು ಬಂದಿದೆ. ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣುಗಳಿಗಾಗಿ ಜನರು ಕಾತರದಿಂದ ಕಾಯುತ್ತಾರೆ. ಪ್ರತಿಯೊಂದು ಮನೆಯಲ್ಲೂ ಮಾವಿನ ಹಣ್ಣಿನ ಸುವಾಸನೆ ಹರಡಿರುತ್ತದೆ. ಮಾವಿನ ಹಣ್ಣುಗಳಿಂದ ಅನೇಕ ರೀತಿಯ ಜ್ಯೂಸ್ ಮತ್ತು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ಮಾವಿನ ಲಡ್ಡು ಒಂದು ವಿಭಿನ್ನವಾದ ರೆಸಿಪಿ. ಈ ಲಡ್ಡುಗಳನ್ನು ತಯಾರಿಸುವುದು ತುಂಬಾ ಸುಲಭ. ಇವುಗಳನ್ನು ಫ್ರಿಜ್ನಲ್ಲಿ ಮೂರರಿಂದ ನಾಲ್ಕು ದಿನಗಳವರೆಗೆ ಸಂಗ್ರಹಿಸಬಹುದು.

ಮಾವಿನ ಹಣ್ಣಿನಲ್ಲಿ ಸಿಹಿ ಇರುವುದು ಸಹಜ. ಆದ್ದರಿಂದ, ಈ ಲಡ್ಡುಗೆ ಹೆಚ್ಚು ಸಕ್ಕರೆ ಬಳಸುವ ಅಗತ್ಯವಿಲ್ಲ. ಹಾಗಾಗಿ, ಇವು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಮಕ್ಕಳು ಒಮ್ಮೆ ತಿಂದ್ರೆ ಬಿಡೋದೇ ಇಲ್ಲಾ. ಹಾಗಿದ್ರೆ, ಮಾವಿನ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ವಿಧಾನವನ್ನು (Mango Laddu Recipe) ತಿಳಿಯೋಣ ಬನ್ನಿ.
ಮಾವಿನ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಮಾವಿನ ಹಣ್ಣು - 2
• ಕೊಬ್ಬರಿ / ಕಾಯಿತುರಿ - ಒಂದು ಕಪ್
• ಏಲಕ್ಕಿ ಪುಡಿ - ಒಂದು ಸ್ಪೂನ್
• ಹಾಲಿನ ಪುಡಿ - ಕಾಲು ಕಪ್
• ತುಪ್ಪ - ಎರಡು ಸ್ಪೂನ್
• ಸಕ್ಕರೆ - ಎರಡು ಸ್ಪೂನ್ (ರುಚಿಗೆ ತಕ್ಕಷ್ಟು)

ಮಾವಿನ ಲಡ್ಡು ತಯಾರಿಸುವ ವಿಧಾನ
ಮೊದಲಿಗೆ, ಎರಡು ಚೆನ್ನಾಗಿ ಮಾಗಿದ ಬಾದಾಮಿ ಅಥವಾ ಕಡಿಮೆ ನಾರಿನಂಶವಿರುವ ಸಿಹಿ ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಿ. ಮಾವಿನ ಹಣ್ಣನ್ನು ಸಣ್ಣಗೆ ಕತ್ತರಿಸಿ ಅದರ ತಿರುಳನ್ನು ತೆಗೆದು ಮಿಕ್ಸಿಗೆ ಹಾಕಿ. ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ ರುಬ್ಬಿಕೊಳ್ಳಿ. ಬಳಿಕ, ಕೊಬ್ಬರಿ ತುರಿಯನ್ನು ತೆಗೆದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. ಈಗ ದಪ್ಪ ತಳದ ಬಾಣಲೆಯನ್ನು ತೆಗೆದುಕೊಂಡು ಒಲೆ ಮೇಲೆ ಇಡಿ. ಅದಕ್ಕೆ ಸ್ವಲ್ಪ ತುಪ್ಪ ಹಾಕಿ, ಕೊಬ್ಬರಿ ತುರಿಯನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ. ನಂತರ, ಮಾವಿನಕಾಯಿ ತಿರುಳು ಮತ್ತು ಹಾಲಿನ ಪುಡಿ ಸೇರಿಸಿ, ತೇವಾಂಶ ಕೈಯಾಡಿಸುತ್ತಾ ಬೇಯಿಸಿ.
ಈಗ ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ, ಗೋಡಂಬಿ ಮತ್ತು ಪಿಸ್ತಾ ಹಾಕಿ ಕಲಸಿ. ಕೆಲವು ಗೋಡಂಬಿ ಮತ್ತು ಪಿಸ್ತಾವನ್ನು ಲಡ್ಡುಗಳನ್ನು ಅಲಂಕರಿಸಲು ತೆಗೆದಿಡಿ. ಈ ಮಾವಿನ ಮಿಶ್ರಣವು ಲಡ್ಡು ಕಟ್ಟುವ ಹದಕ್ಕೆ ಬರುವವರೆಗೆ ಬಿಸಿ ಮಾಡಿ. ಬಳಿಕ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಆಕಾರದಲ್ಲಿ ಲಡ್ಡುಗಳನ್ನು ಕಟ್ಟಿ. ಬಳಿಕ ಈ ಮಾವಿನ ಲಡ್ಡುಗಳನ್ನು ತುರಿದ ಕೊಬ್ಬರಿಗೆ ಅದ್ದಿ, ಒಂದು ತಟ್ಟೆಯಲ್ಲಿ ಇಡಿ. ಈಗ ಪಿಸ್ತಾ ಮತ್ತು ಗೋಡಂಬಿಗಳಿಂದ ಅಲಂಕರಿಸಿ. ಇಷ್ಟು ಮಾಡಿದರೆ, ರುಚಿಯಾದ ಮಾವಿನ ಲಡ್ಡುಗಳು ಸವಿಯಲು ಸಿದ್ಧ.

ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 2 ರಿಂದ 3 ದಿನಗಳವರೆಗೆ ಕೆಡದಂತೆ ಇಡಬಹುದು. ಇವುಗಳನ್ನು ತಯಾರಿಸುವುದು ಬಹಳ ಸುಲಭ ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದು. ಮಾವಿನ ಹಣ್ಣಿನ ಸೀಸನ್ ಇರುವಾಗ ಈ ಲಡ್ಡುಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ಮಕ್ಕಳು ಮತ್ತು ಕುಟುಂಬದವರು ಇಷ್ಟಪಟ್ಟು ತಿನ್ನುತ್ತಾರೆ.



Click it and Unblock the Notifications
