Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರೆಸಿಪಿ: ಮ್ಯಾಂಗೋ ಕುಲ್ಫಿ ಮಾಡುವುದು ಸುಲಭ, ತಿಂಗಳವರೆಗೆ ಬಳಸಬಹುದು
ನಾವು ಮ್ಯಾಂಗೋ ಐಸ್ ಕ್ಯಾಂಡಿ ರೆಸಿಪಿ ನೀಡಿದ್ದೇವೆ, ಇದೀಗ ನಿಮಗಾಗಿ ಮ್ಯಾಂಗೋ ಕುಲ್ಫಿ, ಮಾವಿನಕಾಯಿ ಸೀಸನ್ ಅಲ್ವಾ? ಏಕೆ ಇಂಥ ಟೇಸ್ಟ್ ಮಿಸ್ ಮಾಡ್ಬೇಕು ಅಲ್ವಾ? ನೀವು ಈ ಕುಲ್ಫಿ ಮಾಡಿದರೆ ಒಂದು ತಿಂಗಳವರೆಗೆ ಇಟ್ಟು ಬಳಸಬಹುದು.
ಬನ್ನಿ ಮ್ಯಾಂಗೋ ಕುಲ್ಫಿ ಮಾಡುವುದು ಹೇಗೆ ಎಂದು ನೋಡೋಣ, ಜೊತೆಗೆ ಕುಲ್ಫಿ ಪಲೋಡಾ ಮಾಡುವುದು ಹೇಗೆ ಎಂದು ಹೇಳಲಾಗಿದೆ ನೋಡಿ:

ಬೇಕಾಗುವ ಸಾಮಗ್ರಿ
ಅರ್ಧ ಲೀಟರ್ ಮಂದ ಹಾಲು (ಒಂದು ಲೀಟರ್ ಹಾಲನ್ನು ಮೆಲ್ಲನೆ ಕಾಯಿಸಿ 1/2 ಲೀಟರ್
ಬರುವವರೆಗೆ ಕಾಯಿಸಿ)
1/2 ಕಪ್ ಕ್ರೀಮ್
1/2 ಚಮಚ ಏಲಕ್ಕಿ ಪುಡಿ
1 ಕಪ್ ಮಾವಿನಹಣ್ಣು
ಚಿಟಿಕೆಯಷ್ಟು ಕೇಸರಿ
ಮಾಡುವ ವಿಧಾನ
ಹಾಲು ತಣ್ಣಗಾದ ಮೇಲೆ ಮಾವಿನ ಹಣ್ಣು ಹಾಕಿ ಬ್ಲೆಂಡ್ ಮಾಡಿ. ಸಕ್ಕರೆಯನ್ನು ಹಾಕಿ
ಗ್ರೈಂಡ್ ಮಾಡಿ. ನಂತರ ಏಲಕ್ಕಿ ಪುಡಿ, ಕೇಸರಿ ಹಾಕಿ ಮಿಕ್ಸ್ ಮಾಡಿ.
ನಂತರ ಫ್ರೆಶ್ ಕ್ರೀಮ್ ಸೇರಿಸಿ.
ನಂತರ ಮಿಕ್ಸ್ ಮಾಡಿ ಕುಲ್ಫಿ ಮೋಲ್ಡ್ಗೆ ಹಾಕಿ
ನಂತರ ಅಲ್ಯುಮಿನಿಯಂ ಕವರ್ನಿಂದ ಮುಚ್ಚಿ, ನಂತರ ಫ್ರೀಝರ್ನಲ್ಲಿ 6-8 ಗಂಟೆ ಇಡಿ.
ಕುಲ್ಫಿ ರೆಡಿ.
ಕುಲ್ಫಿ ಮಾಡಲು ಟಿಪ್ಸ್
- ಹಾಲು: ಕುಲ್ಫಿ ಮಾಡಲು ದಪ್ಪ ಹಾಲು ಬಳಸಿ, ಲೋ ಫ್ಯಾಟ್ ಹಾಲು ಸರಿ ಬರಲ್ಲ
- ಕುಲ್ಫಿಗೆ ಫ್ರೆಶ್ ಕ್ರೀಮ್ ಅಥವಾ ವ್ಹಿಪ್ಪಿಂಗ್ ಕ್ರೀಮ್ ಬಳಸಿದರೆ ಒಳ್ಳೆಯದು.
- ತುಂಬಾ ಚೆನ್ನಾಗಿರುವ , ರುಚಿಯಾದ ಮಾವಿನಹಣ್ಣು ಕುಲ್ಫಿ ಮಾಡಲು ಬಳಸಿ, ನಾರಿನಂಶ ಅಧಿಕವಿರುವ ಮಾವಿನಹಣ್ಣು ಬಳಸಬೇಡಿ.
- ನೀವು ಇದಕ್ಕೆ ಡ್ರೈ ಫ್ರೂಟ್ಸ್, ಕೇಸರಿ,ಏಲಕ್ಕಿ ಕೂಡ ಹಾಕಬಹುದು
- ಇನ್ನು ಕುಲ್ಫಿ ಮಾಡುವಾಗ ಸ್ವೀಟನ್ ಕಂಡೆನ್ಸ್ಡ್ ಹಾಲು ಕೂಡ ಸೇರಿಸಬಹುದು.
- ಈ ಕುಲ್ಫಿಯನ್ನು ತಿಂಗಳ ವರೆಗೆ ಇಡಬಹುದು.
ಆದ್ದರಿಂದ ಕುಲ್ಫಿಯನ್ನು ಮಾಡುವಾಗ ಅಧಿಕ ಕುಲ್ಫಿ ಮಾಡಿ ತಿಂಗಳವರೆಗೆ ಬಳಸಬಹುದು.
ಕುಲ್ಫಿ ಫಲೋಡಾ
ಕುಲ್ಫಿಯನ್ನು ಬೌಲ್ನಲ್ಲಿ ಹಾಕಿ. ಅದಕ್ಕೆ ಮಲೈ ಅಥವಾ ಫ್ರೆಶ್ ಕ್ರೀಮ್ ಸೇರಿಸಿ,
ಬೇಕಿದ್ದರೆ ವ್ಹಿಪ್ಪಿಂಗ್ ಕ್ರೀಮ್ ಕೂಡ ಬಳಸಬಹುದು. ಅಲ್ಲದೆ ನೆನೆ ಹಾಕಿದ ಸಬ್ಜಾ
ಸೇರಿಸಿ.
ನಂತರ ಫಲೋಡಾ ಸೇವ್ ಒಂದೂವರೆ ಚಮಚ ಬಳಸಿ.
1 ಚಮಚ ರೋಸ್ ಸಿರಪ್ ಬಳಸಿ.
ಅದಕ್ಕೆ ಗೋಡಂಬಿ, ಪಿಸ್ತಾ ಸೇರಿಸಿ.
ನಂತರ ಕೂಡಲೇ ಸರ್ವ್ ಮಾಡಿ.
ನಿಮ್ಮ ಬಳಿ ಫಲೋಡಾ ಸೇವ್ ಇಲ್ಲದಿದ್ದರೆ ಸೇವಿಗೆ ಬಳಸಿ. ಸೇವಿಗೆ ಬೇಯಿಸಿ
ಬಳಸಿ.
ಕುಲ್ಫಿ ಪಲೋಡಾಗೆ ನಿಮಗೆ ಬೇಕಾದ ರುಚಿಯ ಕುಲ್ಫಿ ಬಳಸಬಹುದು.



Click it and Unblock the Notifications
