Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಾವಿನ ಹಣ್ಣಿನ ಜಾಮ್ ಮನೆಯಲ್ಲೇ ಮಾಡಿ..! ಎಲ್ಲಾ ತಿಂಡಿ ಜೊತೆಗೂ ಫಸ್ಟ್ರ್ ಕ್ಲಾಸ್!
ಮಾರುಕಟ್ಟೆಯಲ್ಲಿ ಈಗ ಹಣ್ಣುಗಳ ರಾಜ ಮಾವಿನ ಹಣ್ಣಿನ ದರ್ಬಾರ್ ಆರಂಭಗೊಂಡಿದೆ. ಎಲ್ಲಿ ನೋಡಿದರೂ ಮಾವಿನ ಹಣ್ಣುಗಳ ರಾಶಿ ನೋಡಬಹುದು. ದುಬಾರಿ ಬೆಲೆಯ ಮಾವಿನ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರುತರಿಸುತ್ತಿವೆ. ಹಾಗೆ ಈ ಹಣ್ಣುಗಳಿಂದ ಹಲವು ಬಗೆಯ ರೆಸಿಪಿಗಳು ಈಗ ಅಡುಗೆ ಮನೆಯಲ್ಲಿಯೂ ಸ್ವಾದ ಹೆಚ್ಚಿಸಲು ಕಾರಣವಾಗಿವೆ. ಮಾವಿನ ಹಣ್ಣಿನಿಂದ ಹತ್ತು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯಬಹುದು ಎಂಬುದು ನಿಮಗೂ ಕೂಡ ತಿಳಿದಿರಬಹುದು.
ಹಾಗೆ ನಾವಿಂದು ಈ ಮಾವಿನಿಂದ ಅದ್ಭುತ ರುಚಿಯ ಜಾಮ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಮಾವಿನ ಜಾಮ್ ಮಾಡಿದ್ರೆ ಎಲ್ಲಾ ತಿಂಡಿಯ ಜೊತೆಗೆ ಸವಿಯಲು ನೀಡಬಹುದು. ಅದರಲ್ಲೂ ಅದ್ಭುತ ರುಚಿಯಲ್ಲಿ ಈ ಜಾಮ್ ಮಾಡಿದರೆ ಮಕ್ಕಳಿಗೆ ಬಹಳ ಇಷ್ಟವಾಗುತ್ತೆ. ಜೊತೆಗೆ ನೀವು ಬೆಳಗ್ಗೆ ಯಾವುದೇ ತಿಂಡಿ ಮಾಡಿದ್ರೆ ಅದಕ್ಕೆ ಚಟ್ನಿ, ಪಲ್ಯ, ಸಾಂಬಾರ್ನ ಅಗತ್ಯವಿರುವುದಿಲ್ಲ. ಈ ಜಾಮ್ ಒಂದು ಇದ್ದರೆ ಸಾಕಾಗುತ್ತೆ.

ಹಾಗಾದ್ರೆ ನಾವಿಂದು ಈ ಜಾಮ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಚಪಾತಿ, ದೋಸೆ, ಸ್ಯಾಂಡ್ ವಿಚ್ನಂತಹ ಖಾದ್ಯದ ಜೊತೆಗೆ ಜಾಮ್ ಸವರಿಕೊಂಡು ತಿನ್ನಲು ಇಷ್ಟಪಡುವವರಾಗಿದ್ದರೆ ಈ ಮಾವಿನ ಹಣ್ಣಿನ ಜಾಮ್ ಕೂಡ ಅದ್ಭುತ ರುಚಿ ನೀಡಬಲ್ಲದು. ಹಾಗಾದ್ರೆ ಮಾವಿನ ಹಣ್ಣಿನಿಂದ ರುಚಿ ರುಚಿಯ ಈ ಮಾವಿನ ಹಣ್ಣಿನ ಜಾಮ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನ ಹಣ್ಣಿನ ಜಾಮ್ ಮಾಡಲು ಯಾವೆಲ್ಕಾ ವಸ್ತುಗಳು ಬೇಕು?
- ಮಾವಿನ ಹಣ್ಣು- 3
- ಸಕ್ಕರೆ - 1 ಕಪ್
- ನಿಂಬೆ ಹಣ್ಣಿನ ರಸ
ಮಾವಿನ ಹಣ್ಣಿನ ಜಾಮ್ ಮಾಡುವುದು ಹೇಗೆ?
ಮೊದಲಿಗೆ ಮಾವಿನ ಹಣ್ಣುನ್ನು ತೊಳೆದು ಬಳಿಕ ಕತ್ತರಿಸಿಕೊಂಡು 2 ಬೌಲ್ ಆಗುವಷ್ಟು ಮಾಡಿಕೊಳ್ಳಿ. ನಂತರ ಈ ಎರಡು ಕಪ್ ಮಾವಿನ ಹಣ್ಣನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಹಾಗೆ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಮಾವಿನ ಹಣ್ಣಿನ ಪೇಸ್ಟ್ ಹಾಗೂ 1 ಕಪ್ ಸಕ್ಕರೆ ಹಾಕಿ 20 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಸಕ್ಕರೆ ಚೆನ್ನಾಗಿ ಕರಗಬೇಕು.
ಚೆನ್ನಾಗಿ ಕುದಿಬರಲು ಬಿಡಬೇಕು. ಆಗಾಗ ಮಿಕ್ಸ್ ಮಾಡುತ್ತಾ ಇರಬೇಕು. ಈಗ ಗಟ್ಟಿಯಾಗಲು ಆರಂಭಿಸಲಿದೆ. ನಂತರ ಇದು ಸಕ್ಕರೆ ಪಾಕದಂತೆ ಹದ ಬರಲಿದೆ. ಟೊಮೆಟೋ ಜಾಮ್ನಂತೆ ಗಟ್ಟಿಯಾದಾರು ಸಾಕಾಗುತ್ತದೆ. ಈಗ ಒಂದು ಚಮಚ ನಿಂಬೆ ರಸವನ್ನು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಬೇಕು. 2 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳುತ್ತಾ ಮಿಕ್ಸ್ ಮಾಡಿ.
ಇಷ್ಟಾದರೆ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಮಾವಿನ ಹಣ್ಣಿನ ಜಾಮ್ ರೆಡಿಯಾಗುತ್ತೆ. ಇದನ್ನು ಒಂದು ಬಾಟಲಿಗೆ ಹಾಕಿ ಇಟ್ಟುಕೊಳ್ಳಬಹುದು. ಯಾವುದೇ ತಿಂಡಿಯ ಜೊತೆಗೆ ಇದನ್ನು ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಫ್ರಿಡ್ಜ್ನಲ್ಲಿ ಇಟ್ಟು ತಿಂಗಳ ಕಾಲ ಇಟ್ಟು ಸವಿಯಬಹುದು. ಚಪಾತಿ, ದೋಸೆಯ ಜೊತೆಗೆ ಇದು ಬಹಳ ರುಚಿ ನೀಡಲಿದೆ. ಮಕ್ಕಳು ಈ ಮಾವಿನ ಹಣ್ಣಿನ ಜಾಮ್ ರುಚಿ ನೋಡಿದರೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತಾರೆ. ನೀವು ಕೂಡ ಮನೆಯಲ್ಲಿ ಇದನ್ನು ಸವಿದು ನೋಡಿ.



Click it and Unblock the Notifications
