Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
ಏಪ್ರಿಲ್ ತಿಂಗಳು ಆರಂಭವಾಯಿತೆಂದರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳು ರಾರಾಜಿಸುತ್ತವೆ. ಜೊತೆಗೆ ಮಾವಿನ ಮರಗಳು ಕಾಯಿಗಳಿಂದ ತುಂಬಿಕೊಳ್ಳುತ್ತವೆ. ಈ ಮಾವಿನ ಕಾಯಿಯನ್ನು ಉಪ್ಪಿನಕಾಯಿ ಹಾಕಲು ಬಳಸುತ್ತಾರೆ. ಕಾಯಿ ಆಗಿದ್ದಾಗಲೇ ಅದನ್ನು ಕತ್ತರಿಸಿ ಉಪ್ಪಿಗೆ ಹಾಕಿ ಬಳಿಕ ಖಾರ ಸೇರಿಸಿ ಬೊಂಬಾಟ್ ರುಚಿಯ ಉಪ್ಪಿನಕಾಯಿ ಮಾಡುತ್ತಾರೆ.
ಇದರ ಜೊತೆ ಮಾವಿನ ಕಾಯಿಯಲ್ಲಿ ಬಾಯಲ್ಲಿ ನೀರು ತರಿಸುವ ಚಟ್ನಿಯನ್ನು ಸಹ ಮಾಡುತ್ತಾರೆ. ಮಾವಿನ ಚಟ್ನಿ ಅಂದ ಕೂಡಲೆ ಬಾಯಲ್ಲಿ ನೀರು ಬರುತ್ತೆ. ಯಾಕಂದ್ರೆ ಅದರ ಹುಳಿ ಖಾರದ ರುಚಿ ಸವಿದವರಿಗೆ ಮಾತ್ರ ಗೊತ್ತು. ಅನ್ನದ ಜೊತೆ, ತಿಂಡಿಯ ಜೊತೆ ಇದನ್ನು ಸವಿದರೆ ಅದರ ರುಚಿ ಹೇಳಲು ಸಾಧ್ಯವಿಲ್ಲ. ಇನ್ನು ಚಟ್ನಿ ಮಾಡಲೆಂದೇ ಸಿಗುವ ವಿಶೇಷ ರೀತಿಯ ಮಾವಿನ ಕಾಯಿಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಈ ಹುಳಿ ಮಾವಿನ ಕಾಯಿಯನ್ನು ಚಟ್ನಿ ಮಾಡುವುದು ಬಹಳ ಸುಲಭ, ಹಾಗಾದರೆ ನಾವಿಂದು ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾವಿನ ಕಾಯಿ ಚಟ್ನಿ ಮಾಡುವ ಪಾಕವಿಧಾನ ಏನು ಎಂಬುದನ್ನು ತಿಳಿಯೋಣ
ಮಾವಿನ ಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಮಾವಿನ ಕಾಯಿ- 1
- ಉದ್ದಿನ ಬೇಳೆ- 1 ಸ್ಪೂನ್
- ಕಡಲೆ ಬೇಳೆ- 1 ಸ್ಪೂನ್
- ಮೆಂತ್ಯೆ- ಕಾಲು ಸ್ಪೂನ್
- ಒಣ ಮೆಣಸು-4
- ಹಸಿ ಮೆಣಸು- 2
- ಸಾಸಿವೆ- 1 ಸ್ಪೂನ್
- ಇಂಗು
- ಬೆಳ್ಳುಳ್ಳಿ- 1
- ಕರಿಬೇವಿನ ಸೊಪ್ಪು
ಮಾವಿನ ಕಾಯಿ ಚಟ್ನಿ ಮಾಡೋದು ಹೇಗೆ
ಒಲೆ ಮೇಲೆ ಪಾತ್ರೆ ಇಟ್ಟು ಮಧ್ಯಮ ಉರಿಯಲ್ಲಿ ಎಣ್ಣೆ ಹಾಕಿ. ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಪ್ರೈ ಮಾಡಿ. ನಂತರ ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಇದು ಆರೀದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದ ಮಸಾಲೆ ಹಾಗೂ ಜೀರಿಗೆ, ಬೆಳ್ಳುಳ್ಳಿ, ಮಾವಿನಕಾಯಿ, ಉಪ್ಪು ಹಾಕಿ ಕೊಂಡು ರುಬ್ಬಿಕೊಳ್ಳಿ.
ಇದನ್ನು ನೈಸ್ ಆಗಿ ಅಲ್ಲ ಸ್ವಲ್ಪ ತರಿತರಿಯಾಗಿ ರುಬ್ಬಿಕೊಂಡರೆ ಒಳ್ಳೆಯದು. ಇದಾದ ಬಳಿಕ ಪಾತ್ರೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಸಾಸಿವೆ, ಇಂಗು ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿ. ಇದು ಕಾದ ಬಳಿಕ ನೀವು ರುಬ್ಬಿಕೊಂಡಿರುವ ಅಂಶವನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಕೇವಲ 1 ನಿಮಿಷ ಮಾತ್ರ ಫ್ರೈ ಮಾಡಿಕೊಳ್ಳಿ ಸಾಕು. ಬಳಿಕ ಕೊನೆಯದಾಗಿ ರುಚಿಯನ್ನು ನೋಡಿ ಉಪ್ಪು ಹಾಕಬೇಕಾ ಬೇಡವೇ ಎಂದು ನೋಡಿಕೊಂಡು ಒಲೆ ಆಫ್ ಮಾಡಿ ಇಳಿಸಿದರೆ ಮುಗಿಯಿತು. ಈಗ ನಿಮ್ಮ ಮುಂದೆ ರುಚಿ ರುಚಿಯ ಮಾವಿನ ಕಾಯಿ ಚಟ್ನಿ ರೆಡಿಯಾಗಿದೆ.
ಇನ್ನು ಈ ಚಟ್ನಿ ಕೆಲವು ಬಾರಿ ಹುಳಿಯಾಗಬಹುದು. ಈ ವೇಳೆ ಚಟ್ನಿಗೆ ತುಪ್ಪ ಬೆರೆಸಬಹುದು. ಇಲ್ಲವೆ ಅನ್ನದ ಜೊತೆಯೂ ತುಪ್ಪ ಬೆರೆಸಿದರೆ ಮಾವಿನ ಹುಳಿ ಅಷ್ಟೊಂದು ತಿಳಿಯುವುದಿಲ್ಲ. ಇನ್ನು ಇದನ್ನು ಎಲ್ಲಾ ವಯಸ್ಸಿನವರು, ಬಾಣಂತಿ, ಗರ್ಭಿಣಿ, ಮಧುಮೇಹಿಗಳು ಸಹ ಸೇವಿಸಬಹುದು. ಗರ್ಭಿಣಿಯರಿಗೆ ಇದು ತುಂಬಾ ಉಪಕಾರಿ ಸಹ ಹೌದು.
ಈ ಮಾವಿನ ಕಾಯಿ ಚಟ್ನಿ ತುಂಬಾ ಹುಳಿ ಅಥವಾ ಕಹಿಯ ಅನುಭವ ನೀಡುತ್ತಿದ್ದರೆ ಹೆಚ್ಚು ಸೇವಿಸಬೇಡಿ. ತುಂಬಾ ಕಹಿ ಮಾವಿನ ಕಾಯಿ ಆರೋಗ್ಯಕ್ಕೆ ಒಳ್ಳೆಯದಲ್ಲ ವಾಂತಿಯಾಗುವ ಸಾಧ್ಯತೆ ಇರುತ್ತದೆ.



Click it and Unblock the Notifications
