Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಾವಿನಕಾಯಿ ಚಿತ್ರಾನ್ನ ಮಾಡಿ ನೋಡಿ..! ಮತ್ತೆ ಮತ್ತೆ ಸವಿಯೋದು ಗ್ಯಾರಂಟಿ..!!
ಮಾವಿನಕಾಯಿ ಸೀಸನ್ ಆರಂಭಗೊಂಡಿದೆ. ಅದರಲ್ಲೂ ಬಹುತೇಕ ಮಾರುಕಟ್ಟೆಗಳಲ್ಲಿ ಈಗ ಮಾವಿನ ಕಾಯಿ ನೋಡಲು ಸಿಗುತ್ತಿದೆ. ಮಾವಿನಕಾಯಿಯಿಂದ ಹತ್ತು ರೀತಿಯ ಖಾದ್ಯ ಮಾಡಿ ಸವಿಯಬಹುದು ಎಂಬುದನ್ನು ನೀವು ಕೂಡ ತಿಳಿದಿರಬಹುದು. ಮಾವಿನಕಾಯಿಯ ಉಪ್ಪಿನಕಾಯಿ ಅಂತು ಎಲ್ಲರ ಫೇವರಿಟ್ ಖಾದ್ಯ. ಇನ್ನು ನೀವು ಮಾವಿನಕಾಯಿಯ ಚಿತ್ರಾನ್ನ ಮಾಡಿದರಂತು ಮನೆ ಮಂದಿಯ ಬಾಯಲ್ಲಿ ನೀರು ಬರುವುದು ಖಚಿತ.
ಚಿತ್ರಾನ್ನವನ್ನ ಹಲವು ಬಗೆಯಲ್ಲಿ ಮಾಡಿ ಸವಿಯಬಹುದು. ಅದರಲ್ಲೂ ಈ ಮಾವಿನಕಾಯಿಯ ಹುಳಿ ಹುಳಿಯಾದ ಚಿತ್ರಾನ್ನವಂತು ಬೇರೆಲ್ಲಾ ವಿಧಕ್ಕಿಂತ ಅತ್ಯಂತ ರುಚಿಕರವಾಗಿರುತ್ತೆ. ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಇದಾಗಿರುತ್ತೆ. ಬೆಳಗ್ಗೆ ತಿಂಡಿಗೆ ಈ ರೀತಿ ಮಾವಿನಕಾಯಿ ಚಿತ್ರಾನ್ನ ಮಾಡಿದರೆ ಎಲ್ಲರು ಕೇಳಿ ಹಾಕಿಸಿಕೊಂಡು ಸವಿಯುತ್ತಾರೆ.

ಚಿತ್ರಾನ್ನ ಎಂದಾಗ ಮೂಗು ಮುರಿಯುವವರು ಕೂಡ ಮಾವಿನಕಾಯಿ ಚಿತ್ರಾನ್ನದ ರುಚಿ ನೋಡಿದ್ರೆ ನಿತ್ಯ ಸವಿಯುವ ಮನಸ್ಸು ಮಾಡೋದು ಖಚಿತ. ಹಾಗೆ ಮಧ್ಯಾಹ್ನದ ಬಾಕ್ಸ್ಗೂ ಕೂಡ ಇದೇ ಚಿತ್ರಾನ್ನ ಸವಿಯಲು ಮುಂದಾಗುತ್ತಾರೆ. ಇದನ್ನು ಮಾಡುವುದು ಕೂಡ ಬಹಳ ಸುಲಭ. ಹಾಗಾದ್ರೆ ಈ ಮಾವಿನಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ಉಪ್ಪಿನಕಾಯಿ ಮಾಡಲು ವಸ್ತುಗಳು ಬೇಕು?
- ಅನ್ನ
- ತೆಂಗಿನಕಾಯಿ ತುರಿ
- ಮಾವಿನಕಾಯಿ ತುರಿ
- ಒಣ ಮೆಣಸು
- ಸಾಸಿವೆ
- ಜೀರಿಗೆ
- ಕರಿಬೇವು
- ಮೆಂತ್ಯ
- ಅರಶಿಣ
- ಉದ್ದಿನ ಬೇಳೆ
- ಕಡಲೆ ಬೇಳೆ
- ಕಡಲೆ ಬೀಜ
- ಉಪ್ಪು
- ಎಣ್ಣೆ
ಮಾವಿನಕಾಯಿ ಉಪ್ಪಿನ ಕಾಯಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಮೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು, ಸಾಸಿವೆ, ಮೆಂತ್ಯ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಸಾಸಿವೆ ಸಿಡಿಯುವವರೆಗೂ ಹುರಿದುಕೊಳ್ಳಿ, ನಂತರ ಒಲೆ ಆಫ್ ಮಾಡಿ ಕರಿಬೇವು ಹಾಕಿ ಇದರೊಟ್ಟಿಗೆ ಬಿಸಿ ಮಾಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಎಲ್ಲಾ ಪದಾರ್ಥಗಳ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಹಾಗೆ ಮಾವಿನ ಕಾಯಿ ತುರಿ ಸಹ ಹಾಕಿಕೊಂಡು ಪುಡಿ ಮಾಡಿಕೊಳ್ಳಿ.
ನುಣ್ಣಗೆ ಪುಡಿ ಮಾಡಿಕೊಂಡ ಬಳಿಕ ಅದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಬಾಣಲೆಗೆ 2ರಿಂದ 3 ಚಮಚ ಎಣ್ಣೆ ಹಾಕಿಕೊಂಡು ನೆಲಗಡಲೆ ಹಾಕಿ ಸ್ವಲ್ಪ ಫ್ರೈ ಮಢಿ, ನಂತರ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಒಂದು ನಿಮಿಷ ಫ್ರೈ ಮಾಡಿಕೊಂಡ ಬಳಿಕ ನೀವು ಇದಕ್ಕೆ ನೀವು ರುಬ್ಬಿಕೊಂಡಿದ್ದ ಮಸಾಲೆಗಳನ್ನು ಇದಕ್ಕೆ ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ಅರಶಿಣ ಕೂಡ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಈಗ ಮೊದಲೇ ಮಾಡಿರುವ ಹುಡಿ ಹುಡಿಯಾದ ಅನ್ನವನ್ನು ಸಹ ಇದಕ್ಕೆ ಹಾಕಿಕೊಂಡು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಚೆನ್ನಾಗಿ ಅನ್ನಕ್ಕೆ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಾವಿನ ಕಾಯಿ ಚಿತ್ರಾನ್ನ ರೆಡಿಯಾಗುತ್ತೆ. ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಈ ಚಿತ್ರಾನ್ನ ಮಾಡಿ ಮುಗಿಸಬಹುದು, ನೀವು ಕೂಡ ಈ ಚಿತ್ರಾನ್ನ ಮಾಡಿ ಮುಗಿಸಲು ಪ್ರಯತ್ನಿಸಿ. ಈ ರುಚಿ ಸವಿದರೆ ಮತ್ತೆ ಮತ್ತೆ ಸವಿಯೋದು ಗ್ಯಾರಂಟಿ.



Click it and Unblock the Notifications
