Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಂಗಳೂರಿನ ಫೇಮಸ್ ತುಂಬಾ ಸುಲಭದಲ್ಲಿ ಮಾಡಬಹುದು ನೋಡಿ
ದಕ್ಷಿಣ ಕನ್ನಡ, ಮಂಗಳೂರು ಭಾಗದಲ್ಲಿ ಫೇಮಸ್ ಆಗಿರೋ ಗೋಲಿ ಬಜೆಯನ್ನ ನೀವೆಂದಾದರೂ ಟೆಸ್ಟ್ ಮಾಡಿದೀರಾ? ಬೆಂಗಳೂರಿನಲ್ಲೂ ಕೆಲವು ಹೋಟೆಲ್ಗಳಲ್ಲಿ ಈ ಗೋಲಿ ಬಜೆ ಸಿಗತ್ತೆ.
ಆದ್ರೆ ಹೆಲ್ತ್ ಬಗ್ಗೆ ನಿಮಗೆ ಹೆಚ್ಚು ಗಮನ ಇದ್ದರೆ ಹೊರಗಡೆ ಯಾವ ಎಣ್ಣೆಯಲ್ಲಿ ಕರಿದಿರುತ್ತಾರೋ ಏನೋ, ಹೆಲ್ತ್ ಗೆ ಏನಾದ್ರೂ ತೊಂದರೆ ಆಗಬಹುದೋ ಏನೋ ಅನ್ನೋ ಯೋಚ್ನೆ ಬರೋದು ಸಹಜ. ಹಾಗಾದ್ರೆ ಚಿಂತೆ ಬೇಡ. ನೀವ್ ಮನೆಯಲ್ಲೇ ರುಚಿ ರುಚಿಯಾಗಿ ಗೋಲಿ ಬಜೆ ಮಾಡ್ಕೊಂಡ್ ತಿನ್ಬಹುದು. ಹಾಗಾದ್ರೆ ಬನ್ನಿ ಮನೆಯಲ್ಲೇ ಹೋಟೆಲ್ ಶೈಲಿಯ ಗೋಲಿಬಜೆ ಮಾಡೋದ್ ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು - ಒಂದು ಕಪ್
ಮೊಸರು - ಕಾಲು ಕಪ್
ಜೀರಿಗೆ - ಒಂದು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - ಅರ್ಧ ಚಮಚ
ಅಡುಗೆ ಸೋಡಾ - ಚಿಟಿಕೆಯಷ್ಟು
ಹಸಿ ಶುಂಠಿ - ಸ್ವಲ್ಪ
ಹಸಿಮೆಣಸು - 4-5 (ಖಾರಕ್ಕೆ ಅನುಗುಣವಾಗಿ ಹಾಕಿ)
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕರಿ ಬೇವಿನಎಲೆ - 5-10
ಕರಿಯಲು ಎಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಗೆ ಒಂದೂ ಬೌಲ್ ಅಳತೆಯ ಮೈದಾ ಹಿಟ್ಟನ್ನು ತೆಗೆದುಕೊಳ್ಳಿ.
(ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಪ್ರಮಾಣ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)
ಅದಕ್ಕೆ ಬೇಕಾಗುವಷ್ಟು ಮೊಸರನ್ನು ಸೇರಿಸಿ. ಇದಕ್ಕೆ ಸ್ವಲ್ಪ ಜೀರಿಗೆ,
ಹೆಚ್ಚಿಟ್ಟಿರುವ ಶುಂಠಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಯನ್ನು
ಸೇರಿಸಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ ಸೇರಿಸಿ. ಚಿಟಿಕೆಯಷ್ಟು ಅಡುಗೆ
ಸೋಡಾ ಸೇರಿಸಿ (Optional). ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಓಣ
ಕೊಬ್ಬರಿಯನ್ನೂ ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಸೇರಿಸಬಹುದು. ಅಗತ್ಯವಿದ್ದಲ್ಲಿ
ಸ್ವಲ್ಪ ನೀರನ್ನು ಸೇರಿಸಿ ಕಲಸಿ. ಹಿಟ್ಟು ತುಂಬಾ ನೀರಾಗಬಾರದು. ಇದನ್ನು ಒಂದು 3
ಗಂಟೆ ಮುಚ್ಚಿ ಇಟ್ಟುಬಿಡಿ.
ಮೂರು ಗಂಟೆಯ ನಂತರ ಹಿಟ್ತು ಚೆನ್ನಾಗಿ ಹುದುಗಿರುತ್ತದೆ. ನಂತರ ಹಿಟ್ಟನ್ನು
ಇನ್ನೊಮೆ ಮಿಶ್ರಣ ಮಾಡಿ. ಚೆನ್ನಾಗಿ ಕಲಸಿ. ಒಂದು ಬಾಣಲೆಗೆ ಕರಿಯಲು ಬೇಕಾಗುವಷ್ಟು
ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಕಾದ ಎಣ್ಣೆಯಲ್ಲಿ ನಿಮಗೆ ಬೇಕಾದ ಗಾತ್ರದಲ್ಲಿ
ಕೈಯಂದಲೇ ಹಿಟ್ಟನ್ನು ಬಿಡಿ. ದೊಡ್ಡ ಉರಿಯಲ್ಲಿ ಕರಿಯಬೇಡಿ. ಮದ್ಯಮ ಉರಿಯಲ್ಲಿ
ಹೊಂಬಣ್ಣ ಬರುವ ತನಕ ಕರಿದು ತೆಗೆಯಿರಿ. ಇದನ್ನು ಬಿಸಿ ಇರುವಾಗಲೆ ನಿಮ್ಮ ಇಷ್ಟದ
ಚಟ್ನಿಯೊಂದಿಗೆ ಸವಿಯಿರಿ. ಜೋರಾಗಿ ಸುರಿವ ಮಳೆ ಅದರ ನಡುವೆ ಚಳಿ ಜೊತೆಗೆ ಗೋಲಿಬಜೆ
ಚಹ ಇದ್ರೆ ಮತ್ತೇನ್ ಬೇಕು? ನೀವು ಟ್ರೈ ಮಾಡಿ.



Click it and Unblock the Notifications
