Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಸಂಜೆ ತಿಂಡಿಗೆ ರೆಡಿ ಮಾಡಿ ಗೋಲಿ ಬಜೆ, ಕಾಯಿ ಚಟ್ನಿ ಜೊತೆ ಸವಿಯಬೇಕು
ಸಂಜೆ ಸ್ನ್ಯಾಕ್ಸ್ಗೆ ಗೋಲಿ ಬಜೆ ಸೂಪರ್ ತಿಂಡಿಯಾಗಿದೆ, ನೀವು ಮಂಗಳೂರು ಕಡೆಗೆ ಬಂದಿದ್ದರೆ ಈ ಸ್ನ್ಯಾಕ್ಸ್ ನೀವು ಸವಿಯಲೇಬೇಕು. ಈ ಸ್ನ್ಯಾಕ್ಸ್ ತುಂಬಾ ಸುಲಭವಾಗಿ ಸವಿಯಬಹುದು. ಈ ಗೋಲಿ ಬಜೆಯನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ತುಂಬಾನೇ ಸೂಪರ್, ಬನ್ನಿ ಇದನ್ನು ಮಾಡುವುದು ಹೇಗೆ ನೋಡುವುದು ಹೇಗೆ?

ಬೇಕಾಗುವ ಸಾಮಗ್ರಿ
ಮುಕ್ಕಾಲು ಕಪ್ ಮೈದಾ
1 ಚಮಚ ಅಕ್ಕಿ ಹಿಟ್ಟು
5-6 ಚಮಚ ಮೊಸರು
ಸ್ವಲ್ಪ ಶುಂಠಿ ಪೇಸ್ಟ್
2-3 ಹಸಿ ಮೆಣಸು
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ತೆಂಗಿನತುರಿ
1/4 ಚಮಚ ಸೋಡಾ
ಕಲೆಸಲು ಸ್ವಲ್ಪ ನೀರು
ಎಣ್ಣೆ
ಮಾಡುವ ವಿಧಾನ
- ಮೈದಾ, ಅಕ್ಕಿ ಹಿಟ್ಟು, ಅಡುಗೆ ಸೋಡಾ, ಉಪ್ಪು ಹಾಕಿ ಮಿಕ್ಸ್ ಮಾಡಿ
- ನಂತರ ಶುಂಠಿ ಪೇಸ್ಟ್(ಚಿಕ್ಕದಾಗಿ ಕತ್ತರಿಸಿದ ಶುಂಠಿ ಅಥವಾ ತುರಿದ ಶುಂಠಿ ಸೇರಿಸಬಹುದು), ಹಸಿ ಮೆಣಸು, ಕರಿಬೇವುಉ, ತೆಂಗಿನತುರಿ, ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ.
- ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು, ಎಣ್ಣೆಗೆ ಹಾಕುವಾಗ ಸುಲಭವಾಗಿ ಬೀಳುವಂತಿರಬೇಕು, ನಂತರ ಈ ಮಿಶ್ರಣ 2 ಗಂಟೆ ಕಾಲ ಇಡಬೇಕು.
- ನಂತರ ಈ ಮಿಶ್ರಣವನ್ನು 30 ಸೆಕೆಂಡ್ ಕಾಲ ಕೈಯಿಂದ ತಿರುಗಿಸಿ, ಆದರೆ ತುಂಬಾ ಮಿಕ್ಸ್ ಮಾಡಲು ಹೋಗಬೇಡಿ.
- ನೀವು ಹಿಟ್ಟು ಕೈಯಿಂದ ಹಾಕುವಂತಿರಬೇಕು, ಆದರೆ ಹುಟ್ಟು ಸುರಿಯುವಂತೆ ಇರಬಾರದು, ಹಾಗಿದ್ದರೆ ಇನ್ನೂ ಸ್ವಲ್ಪ ಹಿಟ್ಟು ಹಾಕಿ ಮಿಕ್ಸ್ ಮಾಡಿ
- ಎಣ್ಣೆ ಕಾಯಿಸಿ, ಕಾದ ಎಣ್ಣೆ ಸ್ವಲ್ಪ ಹಿಟ್ಟು ಹಾಕಿ ಪರಿಶೀಲಿಸಿ, ಹಿಟ್ಟು ಹಾಕಿದ ತಕ್ಷಿಣ ಮುಳಗಬಾರದು, ಮೇಲೆ ತೇಲಬೇಕು, ಮುಳುಗಿದರೆ ಎಣ್ಣೆ ಬಿಸಿಯಾಗಿಲ್ಲ ಎಂದರ್ಥ.
- ಈಗ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಹಾಕಿ, ಉಂಡೆ ತುಂಬಾ ಚಿಕ್ಕದು ಮಾಡಬಹುದು, ಸಾಧಾರಣ ಉಂಡೆ ಮಾಡಬಹುದು, ಆದರೆ ದೊಡ್ಡ ಉಂಡೆ ಮಾಡಲು ಹೋಗಬಾರದು.
- ಕಡಾಯಿ ಸ್ವಲ್ಪ ದೊಡ್ಡದಿದ್ದರೆ ತುಂಬಾ ಉಂಡೆ ಹಾಕಬಹುದು, ಚಿಕ್ಕ ಕಡಾಯಿ ಆದರೆ ಸ್ವಲ್ಪ- ಸ್ವಲ್ಪ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ ತೆಗೆಯಬೇಕು.
- ರೆಡಿಯಾದ ಗೋಳಿ ಬಜೆಯನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿಯಬಹುದು.
ಈ ರೆಸಿಪಿಗೆ ಕೆಲ ಸಲಹೆ:
ನೀವು ಮೈದಾ ಬದಲಿಗೆ ಗೋಧಿ ಹಿಟ್ಟು ಬಳಸಿ ಈ ತಿಂಡಿ ಮಾಡಬಹುದು, ಅಲ್ಲೆ ಗೋಧಿ
ಬೋಂಡದ ರುಚಿ ಕೂಡ ತುಂಬಾ ಚೆನ್ನಾಗಿರುತ್ತದೆ. ಅಲ್ಲದೆ ಬೋಂಡಾ ಫ್ರೈ ಮಾಡುವಾಗ
ಒಳ್ಳೆಯ ಸುವಾಸನೆ ಕೂಡ ಬರುತ್ತದೆ.
ನೀವು ಮೊಸರು ಅಂಗಡಿಯಿಂದ ತಂದು ಬಳಸಬಹುದು, ಆದರೆ ಮನೆಯಲ್ಲಿಯೇ ಮಾಡಿದ ಮೊಸರಿಗೆ
ಹುಳಿಯಂಶ ಇರುತ್ತದೆ, ರುಚಿ ತುಂಬಾನೇ ಚೆನ್ನಾಗಿರುತ್ತದೆ.
ಮೊಸರು ಬದಲಿಗೆ ಸ್ವಲ್ಪ ಮಜ್ಜಿಗೆ ಬಳಸಬಹುದು
ನಿಮಗೆ ಸೋಡಾ ಹಾಕಿದರೆ ಹೊಟ್ಟೆಗೆ ಸರಿಯಾಗಲ್ಲ ಎಂದಾದರೆ ನೀವು ಹುಟ್ಟು ಹುದುಗು
ಬರಲು ಹಿಟ್ಟು ಮಿಕ್ಸ್ ಮಾಡಿ 6 ಗಂಟೆ ಇಟ್ಟು ನಂತರ ಬಳಸಿ.
ಹಿಟ್ಟುವಿನ ಹದ ಈ ಪಕೋಡ ಮಾಡುವಾಗ ಇರುತ್ತದೆ ಅಲ್ವಾ ಆ ರೀತಿ ಇರಲಿ.
ಈ ಗೋಲಿ ಬಜೆ ಮೃದುವಾಗಿ ಗರಿಗರಿಯಾಗಿರಬೇಕು, ಕಾಯಿ ಚಟ್ನಿ ಮಾಡುವಾಗ ಒಣ ಮೆಣಸು
ಬದಲಿಗೆ ಹಸಿ ಮೆಣಸಿನಕಾಯಿ ಹಾಕಿ.



Click it and Unblock the Notifications
