ಮಂಗಳೂರು ಶೈಲಿಯ ಚಿಕನ್ ಸುಕ್ಕ ಸವಿದಿದ್ದೀರಾ? ಈ ರುಚಿ ಮಾಡಿ ನೋಡಿ..!

Posted By:

ಚಿಕನ್ ಖಾದ್ಯಗಳೆಂದರೆ ಮಾಂಸ ಪ್ರಿಯರಿಗೆ ಅಚ್ಚುಮೆಚ್ಚು ಅವರಿಗೆ ಚಿಕನ್‌ನಿಂದ ಮಾಡಿರುವ ಎಲ್ಲಾ ಖಾದ್ಯ ಇಷ್ಟವಾಗುತ್ತದೆ. ಚಿಕನ್‌ನಲ್ಲಿ ಹತ್ತಾರು ಬಗೆ ಖಾದ್ಯ ನಾವು ಮಾಡಬಹುದು. ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ ಮಾಡುವ ವಿಭಿನ್ನ ರುಚಿಯ ಚಿಕನ್ ಖಾದ್ಯಗಳಂತು ಎಲ್ಲರಿಗೂ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಚಿಕನ್ ಸುಕ್ಕ, ಚಿಕನ್ ಗ್ರೇವಿ, ಚಿಕನ್ ಚಿಕನ್ ಡ್ರೈ ಕೂಡ ಅಚ್ಚ ಮೆಚ್ಚು.

ಚಿಕನ್ ಖಾದ್ಯಗಳು ಅಂದ್ರೆ ಅದು ಖಾರ ಖಾರವಾಗಿ ಬಾಯಿಯಲ್ಲಿ ನೀರು ತರಿಸುವ ಖಾದ್ಯಗಳು. ಒಂದೊಂದು ಬಗೆಯೂ ವಿಶೇಷ ರೀತಿಯ ಸ್ವಾದ, ರುಚಿ ಹೊಂದಿರುತ್ತೆ. ದೊಡ್ಡ ದೊಡ್ಡ ಹೋಟೆಲ್‌ನ ಮೆನ್ಯೂವಿನಲ್ಲಿ ನೀವು ಯಾವತ್ತು ಕೇಳಿರದ ಹೆಸರಿನ ಚಿಕನ್ ಖಾದ್ಯ ಇರುತ್ತವೆ. ಹಾಗೆ ಅವುಗಳ ರುಚಿ ನಿಮಗೆ ಮತ್ತೆ ಮತ್ತೆ ನೆನಪಿಟ್ಟುಕೊಳ್ಳುವಂತೆ ಮಾಡುತ್ತವೆ.

How To Make Mangalore Style Chicken Sukka Recipe At Home In Kannada

ನಾವಿಂದು ಚಿಕನ್‌ನಲ್ಲಿ ಮಾಡುವಂತಹ ರುಚಿ ರುಚಿಯ ಚಿಕನ್ ಸುಕ್ಕ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಅದರಲ್ಲೂ ಮಂಗಳೂರು ಶೈಲಿಯಲ್ಲಿ ಸಿಕನ್ ಸುಕ್ಕ ಮಾಡುವ ಕುರಿತು ತಿಳಿಯೋಣ. ಮಂಗಳೂರು ಶೈಲಿಯ ಚಿಕನ್ ಸುಕ್ಕ ಅತ್ಯಂತ ರುಚಿಕರವಾಗಿರುತ್ತೆ. ಅದರ ಮಸಾಲೆಯಿಂದ ರುಚಿ ಮತ್ತಷ್ಟು ಹೆಚ್ಚಾಗಿರುತ್ತದೆ.

ಹಾಗಾದ್ರೆ ಈ ಮಂಗಳೂರು ಶೈಲಿಯ ಚಿಕನ್ ಸುಕ್ಕ ಮಾಡುವುದು ಹೇಗೆ? ಚಿಕನ್ ಸುಕ್ಕ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ನೋಡೋಣ.

ಮಂಗಳೂರು ಶೈಲಿಯ ಚಿಕನ್ ಸುಕ್ಕ ಮಾಡಲು ಬೇಕಾಗುವ ಪದಾರ್ಥಗಳು

  • ಚಿಕನ್
  • ಈರುಳ್ಳಿ -3ರಿಂದ 4
  • ತೆಂಗಿನಕಾಯಿ ತುರಿ
  • ಬ್ಯಾಡಗಿ ಮೆಣಸಿನಕಾಯಿ -10
  • ಒಣ ಮೆಣಸು
  • ಶುಂಠಿ
  • ಬೆಳ್ಳುಳ್ಳಿ
  • ಕರಿಬೇವಿನ ಸೊಪ್ಪು
  • ಅರಿಶಿನದ ಪುಡಿ
  • ಹುಣಸೆಹಣ್ಣು
  • ದನಿಯಾ ಕಾಳು
  • ಜೀರಿಗೆ
  • ಸೋಂಪು ಕಾಳು
  • ಮೆಂತ್ಯ ಕಾಲು
  • ಕಾಳು ಮೆಣಸು
  • ಚಕ್ಕೆ
  • ಲವಂಗ
  • ಉಪ್ಪು
  • ಎಣ್ಣೆ

ಮಂಗಳೂರು ಶೈಲಿಯ ಚಿಕನ್ ಸುಕ್ಕ ಮಾಡುವ ವಿಧಾನ

ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಮಸಾಲೆ ಹುರಿದುಕೊಳ್ಳಬೇಕು. ಈ ಪಾತ್ರೆಗೆ ಒಣ ಮೆಣಸು, ಬ್ಯಾಡಗಿ ಮೆಣಸು ಹಾಕಿ, ಎಣ್ಣೆ ಹಾಕಿ ಹುರಿದುಕೊಂಡು ಬದಿಗಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಧನಿಯಾ ಕಾಳು, ಜೀರಿಗೆ, ಸೋಂ ಕಾಳು, ಮೆಂತ್ಯ ಕಾಳು, ಕಾಳು ಮೆಣಸು, ಚಕ್ಕೆ, ಲವಂಗ ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಹುರಿದ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ.

ಈಗ ಮತ್ತೆ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಇದಕ್ಕೆ ಈರುಳ್ಳಿ ಹಾಕಿ 10 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವು ಹಾಕಿ ಮಿಕ್ಸ್ ಮಾಡಿದ ಬಳಿಕ ಚಿಕನ್ ಪೀಸ್‌ಗಳನ್ನು ಹಾಕಿ, ಉಪ್ಪು, ಅರಶಿನ ಹಾಕಿ ಮಿಕ್ಸ್ ಮಾಡಿಕೊಂಡು 5 ನಿಮಿಷ ಬಿಸಿ ಮಾಡಿಕೊಳ್ಳಿ.

ಈಗ ಚಿಕನ್ ನೀರು ಬಿಟ್ಟುಕೊಳ್ಳುತ್ತದೆ. ಈಗ ರುಬ್ಬಿಕೊಂಡಿರುವ ಮಸಾಲೆ ಪುಡಿಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಸುಮಾರು 10 ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಲು ಬಿಡಿ. 5 ನಿಮಿಷದ ಬಳಿಕ ನೀರಿನಲ್ಲಿ ಅದ್ದಿಕೊಂಡ ಹುಣಸೆ ಹಣ್ಣಿನ ಹುಳಿ ಹಾಕಿ ಮಿಕ್ಸ್ ಮಾಡಿ ಮತ್ತೆ 5 ನಿಮಿಷ ಬೇಯಲು ಬಿಡಿ.

ರೆಸ್ಟೋರೆಂಟ್ ರುಚಿಯ ಚಿಕನ್ ಫ್ರೈ..! 10 ನಿಮಿಷದಲ್ಲಿ ರೆಡಿ ಮಾಡಬಹುದು!

ಈಗ ಮತ್ತೊಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಎಣ್ಣೆ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. 5 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ತೆಂಗಿನಕಾಯಿ ತುರಿ ಹಾಕಿಕೊಂಡು ಮತ್ತೆ 5 ನಿಮಿಷ ಫ್ರೈ ಮಾಡಿ. ಈಗ ಈ ಮಸಾಲೆಯನ್ನು ತಣ್ಣಗಾಗಲು ಬಿಟ್ಟು ನಂತರ ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.

ಈಗ ಈ ರುಬ್ಬಿಕೊಂಡ ವಸ್ತುಗಳನ್ನು ಒಲೆ ಮೇಲೆ ಬೇಯುತ್ತಿರುವ ಚಿಕನ್‌ಗೆ ಹಾಕಿ ಮಿಕ್ಸ್ ಮಾಡಿ. ಮತ್ತೆ 5 ನಿಮಿಷ ಬೇಯಲು ಬಿಡಿ. ಈ ವೇಳೆ ನೀರು ಹಾಕಬೇಡಿ ತಳ ಹಿಡಿಯದಂತೆ ತಿರುಗಿಸುತ್ತಾ ಇರಿ. 5 ನಿಮಿಷ ಬೇಯಿಸಿದರೆ ನಿಮ್ಮ ಮುಂದೆ ಚಿಕನ್ ಸುಕ್ಕ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಮಂಗಳೂರು ಶೈಲಿಯ ಚಿಕನ್ ಸುಕ್ಕ ಮಾಡಿ ನೋಡಿ.

[ of 5 - Users]
X
Desktop Bottom Promotion