Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಕ್ಕಳು ಬ್ರೆಡ್ ತಿನ್ನಲ್ವಾ? ಹೆಚ್ಚು ಉಳಿದಿದ್ಯಾ.. ಈ ಚೈನೀಸ್ ತಿಂಡಿ ಮಾಡಿಕೊಡಿ
ಮನೆಗೆ ತಂದ ಬ್ರೆಡ್ ಅನ್ನು ಮಕ್ಕಳು ತಿನ್ನುತ್ತಿಲ್ವಾ? ಖಾಲಿಯಾಗದೆ ಇನ್ನು ಹೆಚ್ಚು ಉಳಿದಿದ್ಯಾ? ಚಿಂತೆಬೇಡ, ಅದರಿಂದ ರುಚಿಯಾದ ತಿಂಡಿ ಮಾಡಬಹುದು. ಇದು ಸಂಜೆಯ ಸ್ನಾಕ್ಸ್ಗೆ ಹೇಳಿ ಮಾಡಿಸಿದ ತಿಂಡಿ. ಇದರ ಬಗ್ಗೆ ತಿಳಿದರೆ, ಈಗಲೇ ನೀವು ಒಮ್ಮೆ ಟ್ರೈ ಮಾಡ್ತೀರಿ. ಹೌದು, ನೀವು ಇಲ್ಲಿಯವರೆಗೆ ಪನ್ನೀರ್, ವೆಜ್ ಮತ್ತು ಸೋಯಾ ಮಂಚೂರಿಯನ್ ತಿಂದಿರಬೇಕು. ಆದರೆ, ಉಳಿದ ಬ್ರೆಡ್ನಿಂದ ಕೆಲವು ಚೈನೀಸ್ ರುಚಿಯ ತಿಂಡಿಗಳನ್ನು ತಯಾರಿಸಬಹುದು ಅಂತ ನೀವು ಎಂದಾದರೂ ಯೋಚಿಸಿದ್ದೀರಾ? ಖಂಡಿತ ಇಲ್ಲ ಬಿಡಿ. ನಾವಿಂದು ಬ್ರೆಡ್ ಮಂಚೂರಿಯನ್ (Bread Manchurian) ಮಾಡುವ ಬಗ್ಗೆ ತಿಳಿಸಲಿದ್ದೇವೆ. ಈ ತಿಂಡಿ ಪ್ರತಿ ತುತ್ತಲ್ಲೂ ಮಸಾಲೆಯುಕ್ತ ರುಚಿಯಿಂದ ತುಂಬಿರುತ್ತದೆ. ಮತ್ತೇಕೆ ತಡ, ಮನೆಯಲ್ಲಿಯೇ ಬ್ರೆಡ್ ಮಂಚೂರಿಯನ್ ಹೇಗೆ ತಯಾರಿಸಬೇಕೆಂದು ತಿಳಿಯೋಣ ಬನ್ನಿ.
ನಾವು ಕೆಲವೊಮ್ಮೆ ಮನೆಗೆ ತಂದ ಸಾಕಷ್ಟು ಸಾಮಗ್ರಿಗಳನ್ನು ಫ್ರಿಜ್ನಲ್ಲಿಟ್ಟು ಮರೆತು ಹೋಗಿರುತ್ತೇವೆ. ಏನೋ ಹುಡುಕುವಾಗ ಅದು ಕೈಗೆ ಸಿಗುತ್ತದೆ. ಆಗಲೇ, ಅದನ್ನು ತಂದಿರುವುದು ನೆನಪಾಗೋದು. ಅಷ್ಟರಲ್ಲಿ ಆ ಪದಾರ್ಥದ ಅವಧಿ ಮುಗಿಯುವ ಅಂತಕ್ಕೆ ಬಂದಿರುತ್ತದೆ. ಅದನ್ನು ಒಂದೇ ದಿನದಲ್ಲಿ ತಿಂದು ಖಾಲಿ ಮಾಡುವುದು ಕಷ್ಟ. ಆ ಸಮಯದಲ್ಲಿ ಅದನ್ನು ಬಳಸಿ ರುಚಿಯಾದ ತಿಂಡಿ ಮಾಡಿದರೆ, ನಿಮಿಷದಲ್ಲೇ ಖಾಲಿ ಆಗುತ್ತದೆ. ಬ್ರೆಡ್ ಸಹ ಹಾಗೆಯೇ. ನಾವು ಅದನ್ನು ತಂದು ಮರೆಯುತ್ತೇವೆ. ಬಿಸಾಡಲೂ ಮನಸ್ಸು ಬರಲ್ಲ. ಹಾಗಂತ ಒಂದೇ ಸಲ ಎಲ್ಲವನ್ನೂ ತಿನ್ನವುದು ಅಸಾಧ್ಯ. ಆಗ ಅದನ್ನು ಬಳಸಿ ಬ್ರೆಡ್ ಮಂಚೂರಿಯನ್ (Bread Manchurian Recipe) ಮಾಡಬಹುದು. ಇದು ತಿನ್ನಲು ಬಹಳ ಟೇಸ್ಟಿಯಾಗಿರುತ್ತದೆ.

ಬ್ರೆಡ್ ಮಂಚೂರಿಯನ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಬ್ರೆಡ್ ಸ್ಲೈಸ್ಗಳು (ಹೋಳುಗಳು) - 8 ರಿಂದ 10
• ಕಾರ್ನ್ಫ್ಲೋರ್ - 2 ಸ್ಪೂನ್
• ಮೈದಾ ಹಿಟ್ಟು - 2 ಸ್ಪೂನ್
• ಹಸಿ ಮೆಣಸಿನಕಾಯಿಗಳು - ಸಣ್ಣಗೆ ಕತ್ತರಿಸಿದ 2
• ಬೆಳ್ಳುಳ್ಳಿ - 4 ರಿಂದ 5 ಎಸಳು
• ಈರುಳ್ಳಿ - 1 ಅಥವಾ 2
• ಕ್ಯಾಪ್ಸಿಕಂ - ಸಣ್ಣಗೆ ಹೆಚ್ಚದ 1
• ಟೊಮೆಟೊ ಸಾಸ್ - 2 ಚಮಚ
• ಚಿಲ್ಲಿ ಸಾಸ್, ಸೋಯಾ ಸಾಸ್ - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಎಣ್ಣೆ - ಸ್ವಲ್ಪ (ಹುರಿಯಲು)
ಬ್ರೆಡ್ ಮಂಚೂರಿಯನ್ ಮಾಡುವುದು ಹೇಗೆ?
ಇದೀಗ ಬ್ರೆಡ್ ಮಂಚೂರಿಯನ್ ತಯಾರಿಸಲು ಪ್ರಾರಂಭಿಸೋಣ. ನಾವು ಮೊದಲು, ಬ್ರೆಡ್ ಹೋಳುಗಳನ್ನು ತೆಗೆದುಕೊಳ್ಳೋಣ. ಅವುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳೋಣ. ನೀವು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಬಹುದು. ಬಳಿಕ ಸ್ವಲ್ಪ ನೀರು, ಮೈದಾ ಹಿಟ್ಟು ಮತ್ತು ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳೋಣ. ಈಗ ಅದರಿಂದ ಸಣ್ಣ ಉಂಡೆಗಳನ್ನು ತಯಾರಿಸೋಣ. ಇದಾದ ಬಳಿಕ, ಗ್ಯಾಸ್ ಮೇಲೆ ಒಂದು ಬಾಣಲೆ ಇಡೋಣ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಬಿಸಿ ಮಾಡೋಣ. ಎಣ್ಣೆ ಕಾದ ಬಳಿಕ, ಉಂಡೆಗಳನ್ನು ಅದರಲ್ಲಿ ಹಾಕೋಣ. ಅವು ಗೋಲ್ಡನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಚೆನ್ನಾಗಿ ಬೇಯಿಸಿ, ಬಳಿಕ ಹೊರಗೆ ತೆಗೆಯೋಣ.
ಟೀ ಟೈಮ್ಗೆ ಹೇಳಿ ಮಾಡಿಸಿದ ಸ್ನಾಕ್ಸ್
ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಬಳಿಕ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿಯೋಣ. ಬಳಿಕ ಅದಕ್ಕೆ ಟೊಮೆಟೊ ಸಾಸ್, ಸೋಯಾ ಸಾಸ್ ಮತ್ತು ಚಿಲ್ಲಿ ಸಾಸ್ ಹಾಕೋಣ. ಇದಾದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಗ್ರೇವಿಗಾಗಿ ಸ್ವಲ್ಪ ನೀರು ಸೇರಿಸಿ ಕೆಲವು ನಿಮಿಷ ಬೇಯಿಸೋಣ. ಇಷ್ಟು ಮಾಡಿದರೆ ಸಾಕು ರುಚಿ ರುಚಿಯಾದ ಬ್ರೆಡ್ ಮಂಚೂರಿಯನ್ ಸಿದ್ಧವಾಗುತ್ತದೆ. ಸಂಜೆ ಟೀ ಟೈಮ್ಗೆ ಈ ಬ್ರೆಡ್ ಮಂಚೂರಿಯನ್ ಹೇಳಿ ಮಾಡಿಸಿದ ಸ್ನಾಕ್ಸ್ ಆಗಿದೆ. ನಿಮಗೆ ಇಷ್ಟವಾದರೇ ಈಗಲೇ ಒಮ್ಮೆ ಟ್ರೈ ಮಾಡಿ.



Click it and Unblock the Notifications
