Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಮಲ್ನಾಡ್ ಶೈಲಿಯ ತಟ್ಟೆ ಇಡ್ಲಿ ಮಾಡೋದು ಎಷ್ಟು ಸುಲಭ ಗೊತ್ತಾ? ಇಲ್ಲಿದೆ ವಿಧಾನ
ನಾವು ಬೆಳಗ್ಗೆ ತಿಂಡಿಗೆ ಎಷ್ಟು ಬಗೆಯ ರೆಸಿಪಿಗಳ ಮಾಡುರುತ್ತೇವೆ. ನಿತ್ಯ ಒಂದೇ ರೀತಿಯ ತಿಂಡಿಯಂತು ಮಾಡುವುದಿಲ್ಲ. ಹಾಗೆ ಯಾವಾಗಲು ಒಂದೇ ರುಚಿಯಲ್ಲೂ ಸವಿಯಲು ನಾವು ಇಷ್ಟಪಡುವುದಿಲ್ಲ. ಹಾಗೆ ಬೆಳಗ್ಗೆ ತಿಂಡಿ ಎಷ್ಟು ರುಚಿಯಾಗಿರುತ್ತೋ ಹಾಗೆ ಆ ದಿನವೂ ಕೂಡ ಉತ್ತಮವಾಗಿರುತ್ತೆ. ಹಾಗೆ ನಾವು ಬೆಳಗ್ಗೆ ತಿಂಡಿಯ ವಿಚಾರಕ್ಕೆ ಬಂದರೆ, ಇಡ್ಲಿ ಮಾಡುವುದು ಕಾಮನ್.
ಸುಲಭವಾಗಿ ಕಡಿಮೆ ಸಮಯದಲ್ಲಿ ಹಾಗೆ ಕಡಿಮೆ ಎಣ್ಣೆ ಬಳಸಿ ಮಾಡುವುದರಿಂದ ಬೆಳಗ್ಗೆ ಸವಿಯಲು ಇದೊಂದು ಅತ್ಯುತ್ತಮ ಖಾದ್ಯ, ಹೀಗಾಗಿ ಎಲ್ಲರಿಗೂ ಇಡ್ಲಿ ಅಂದರೆ ಇಷ್ಟವಾಗುತ್ತೆ. ಅದರಲ್ಲೂ ಮಲ್ಲಿಗೆ ಹೂವಿನಂತಹ ಮೃದುವಾದ ಇಡ್ಲಿ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟ. ನಾವಿಂದು ಇಂತಹ ಇಡ್ಲಿಯ ಹೊಸ ಬಗೆಯ ಇಡ್ಲಿ ಕುರಿತು ತಿಳಿಯೋಣ.

ಅದರಲ್ಲೂ ನಾವಿಂದು ಮಲ್ನಾಡ್ ಶೈಲಿಯ ಫೇಮಸ್ ತಟ್ಟೆ ಇಡ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವೆಲ್ಲಾ ತಟ್ಟೆ ಇಡ್ಲಿಯನ್ನು ಮನೆಯಲ್ಲಿ ಮಾಡಿ ಸವಿದಿರುತ್ತಾರೆ. ಅದರಲ್ಲಿ ಈ ಮಲ್ನಾಡ್ ಶೈಲಿಯ ತಟ್ಟೆ ಇಡ್ಲಿ ಎಂದಾದರು ಮಾಡಿದ್ದೀರಾ? ಅದರ ವಿಶೇಷತೆ ಏನು? ಮಾಡುವುದು ಹೇಗೆ? ಈ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಲ್ನಾಡ್ ಶೈಲಿ ತಟ್ಟೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತು ಬೇಕು
- ಅಕ್ಕಿ- 2 ಕಪ್
- ಉದ್ದು- ಅರ್ಧ ಕಪ್
- ಮೆಂತ್ಯ- ಸ್ವಲ್ಪ
- ದಪ್ಪ ಅವಲಕ್ಕಿ- ಕಾಲು ಕಪ್
- ಎಣ್ಣೆ
- ಉಪ್ಪು
- ಸೋಡಾ
ಮಲ್ನಾಡ್ ಶೈಲಿ ತಟ್ಟೆ ಇಡ್ಲಿ ಮಾಡುವ ವಿಧಾನ
ಮೊದಲು ಉದ್ದು ಹಾಗೂ ಮೆಂತ್ಯ ಒಟ್ಟಿಗೆ ತೊಳೆದು ನೆನೆಸಿಡಿ. ಹಾಗೆ ಅಕ್ಕಿಯನ್ನು ಕೂಡ ತೊಳೆದು ಮತ್ತೊಂದು ಕಡೆ ನೆನೆಸಿಡಿ, ಅವಲಕ್ಕಿಯನ್ನು ನೆನೆಸಿ ಇಟ್ಟುಕೊಳ್ಳಿ. ಬೆಳಗ್ಗೆ ನೆನೆಸಿಟ್ಟರೆ ಸಂಜೆ ಹಿಟ್ಟುಕೊಂಡಿಕೊಳ್ಳಬಹುದು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಉದ್ದು ಮತ್ತು ಮೆಂತ್ಯ ಹಾಕಿ ಹಾಗೆ ಇದಕ್ಕೆ ನೆನೆಸಿಟ್ಟ ಅವಲಕ್ಕಿ ಕೂಡ ಕೂಡ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಈ ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ.
ನಂತರ ಅಕ್ಕಿನ್ನು ಕೂಡ ನುಣ್ಣಗೆ ರುಬ್ಬಿಕೊಂಡು ಅದೇ ಪಾತ್ರೆಗೆ ಹಾಕಿಕೊಳ್ಳಿ. ನಂತರ ಈ ಹಿಟ್ಟನ್ನು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಅನಂತರ ಮುಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಮಾರನೆ ದಿನ ಬೆಳಗ್ಗೆ ಮತ್ತೆ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಈ ಸಮಯದಲ್ಲಿ ನೀವು ಉಪ್ಪು, ಚಿಟಿಕೆಯಷ್ಟು ಸೋಡಾ ಕೂಡ ಹಾಕಿಕೊಳ್ಳಬಹುದು. ಈ ಎರಡು ಅಂಶ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಇಡ್ಲಿ ಮಾಡಲು ದೊಡ್ಡ ತಟ್ಟೆಗಳ ತೆಗೆದುಕೊಂಡು ಎಣ್ಣೆ ಅವರಿಕೊಂಡು ಅದಕ್ಕೆ ಇಡ್ಲಿ ಹಿಟ್ಟನ್ನು ಮುಕ್ಕಾಲು ಭಾಗ ತುಂಬುವಂತೆ ಹಾಕಿಕೊಳ್ಳಿ. ನಂತರ ಎಲ್ಲಾ ತಟ್ಟೆಗಳನ್ನು ಇಡ್ಲಿ ಬಾಕ್ಸ್ ಅಥವಾ ಕುಕ್ಕರ್‌ನಲ್ಲಿ ಇಟ್ಟು 10 ರಿಂದ 15 ನಿಮಿಷ ಬೇಯಿಸಿಕೊಂಡರೆ ಸಾಕು. ನಂತರ ಇಡ್ಲಿಯನ್ನು ಹೊರತೆಗೆದು ಬಿಡಿಸಿ ತಟ್ಟೆಯಲ್ಲಿ ಹಾಕಿಕೊಳ್ಳಬಹುದು, ನೀವು ಇಡಿಯಾಗಿ ತಿನ್ನಬಹುದು. ಇಲ್ಲದೆ ಕತ್ತರಿಸಿಕೊಂಡು ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮಾಡಿಕೊಳ್ಳಬಹುದು. ಮೊದಲು ಇಡ್ಲಿ ತಟ್ಟೆಯಿಂದ ಬಿಡದಿದ್ದರೆ ತಣ್ಣೀರಿನಲ್ಲಿ ಇಡ್ಲಿ ತಟ್ಟೆಯನ್ನು ಅದ್ದಿ ಇಡಬೇಕು. ಇಡ್ಲಿ ತಣ್ಣಗಾದ ಬಳಿಕ ಬಿಡಿಸಿದರೆ ಸುಲಭವಾಗಿ ಬರುತ್ತದೆ.
ಹಾಗೆ ಇಡ್ಲಿಗೆ ಸುಲಭವಾಗಿ ಇಂದು ಕಾಯಿ ಚಟ್ನಿ ಅಥವಾ ಹುರಿಗಡಲೆ ಚಟ್ನಿ ಮಾಡಿದರೆ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications