Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಲೆನಾಡ ಶೈಲಿಯ ಮಾವಿನಕಾಯಿ ಹೆರಿ ಚಟ್ನಿ: ಮಾಡುವ ಸುಲಭ ವಿಧಾನ ಇಲ್ಲಿದೆ!
ಮಳೆಗಾಲ ಬಂತು ಅಂದ್ರೆ ಸಾಕು ಹುಳಿ- ಖಾರದಂತಹ ಪದಾರ್ಥಗಳು ಹೆಚ್ಚು ಇಷ್ಟವಾಗುತ್ತದೆ. ಹೊರಗಡೆ ಮಳೆ ಬರುತ್ತಿದ್ದರೆ ಒಳಗೆ ಬಿಸಿ ಬಿಸಿ ಗಂಜಿಗೆ ಮಾವಿನಕಾಯಿ ಚಟ್ನಿ ಹಾಕಿ ಸವಿಯುವ ಮಜವೇ ಬೇರೆ. ಮಾವಿನ ಕಾಯಿ ಚಟ್ನಿಯನ್ನು ನಾನಾ ವಿಧಾನಗಳಲ್ಲಿ ತಯಾರಿಸಬಹುದಾಗಿದೆ. ಮಾವಿನಕಾಯಿ ಚಟ್ನಿ ತಯಾರಿಸಲು ಹೆಚ್ಚು ಸಮಯ ಬೇಕಿಲ್ಲ. ಅಲ್ಲದೇ ಹೆಚ್ಚಿನ ಶ್ರಮದ ಅವಶ್ಯಕತೆ ಕೂಡಾ ಇರೋದಿಲ್ಲ. ಆದರೆ ನಾಲಿಗೆಗೆ ಮಾತ್ರ ಹಬ್ಬವನ್ನೇ ನೀಡುತ್ತದೆ.
ಮಾವಿನಕಾಯಿ ಹೆರಿ ಚಟ್ನಿ ಎನ್ನುವುದು ಮಲೆನಾಡಿನ ಬ್ರಾಹ್ಮಣ ಶೈಲಿಯ ಮಾವಿನಕಾಯಿ ಚಟ್ನಿಯಾಗಿದೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಭಾಗಗಳಲ್ಲಿ ಈ ಮಾದರಿಯ ಚಟ್ನಿಯನ್ನು ಹೆಚ್ಚಾಗಿ ತಯಾರಿಸುತ್ತಾರೆ. ಹೊಸ ಮಾದರಿಯ ಮಾವಿನ ಕಾಯಿಯ ಚಟ್ನಿಯನ್ನು ತಯಾರಿಸುವುದು ಹೇಗೆ..? ಇದಕ್ಕೆ ಬೇಕಾದ ಸಾಮಗ್ರಿಗಳು ಯಾವುದು..? ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು
- ಸಾಸಿವೆ ಸ್ವಲ್ಪ
- ಜೀರಿಗೆ 1 ಚಮಚ
- ಒಣ ಮೆಣಸಿನಕಾಯಿ 3
- ಮಾವಿನಕಾಯಿ 1
- ಇಂಗು 1 ಚಿಟಿಕೆ
- ಉಪ್ಪು ರುಚಿಗೆ ತಕ್ಕಷ್ಟು
- ಅಡುಗೆ ಎಣ್ಣೆ 1 ಚಮಚ
ಮಾಡುವ ವಿಧಾನ
ಮೊದಲು ಒಂದು ಬಾಣಲೆ ತೆಗೆದುಕೊಂಡು ಇದಕ್ಕೆ ಸ್ವಲ್ಪ ಸಾಸಿವೆ,ಜೀರಿಗೆ ಹಾಗೂ ಒಣ ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಇದನ್ನು ತಣ್ಣಗಾಗಲು ಬಿಡಿ. ಈಗ ಒಂದು ಮಾವಿನ ಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ, ನೆನಪಿರಲಿ ಮಾವಿನ ಕಾಯಿ ಹುಳಿ ಇದ್ದಷ್ಟೂ ಈ ಚಟ್ನಿ ಒಳ್ಳೆಯ ರುಚಿ ನೀಡುತ್ತದೆ.
ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿದ ಮಾವಿನ ಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಸ್ವಲ್ಪ ನೀರು ಹಾಗೂ ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಇದೇ ಮಿಶ್ರಣಕ್ಕೆ ನೀವು ಈಗಾಗಲೇ ಹುರಿದು ಇಟ್ಟಿದ್ದ ಒಣ ಮೆಣಸಿನಕಾಯಿ, ಜೀರಿಗೆ ಹಾಗೂ ಸಾಸಿವೆಯನ್ನು ಸೇರಿಸಿ ಮತ್ತೊಂದು ಬಾರಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಚಿಟಿಕೆ ಇಂಗು, ಸಾಸಿವೆ, ಜೀರಿಗೆ ಹಾಗೂ ಒಂದು ಒಣ ಮೆಣಸನ್ನು ಸೇರಿಸಿ ಹುರಿದುಕೊಳ್ಳಿ. ಈಗ ಈ ಒಗ್ಗರಣೆಯನ್ನು ಚಟ್ನಿಯ ಮೇಲೆ ಹಾಕಿ ಮುಚ್ಚಳ ಮುಚ್ಚಿಬಿಡಿ. ಕೆಲವು ನಿಮಿಷಗಳ ಬಳಿಕ ನೀವು ಘಮ ಘಮವಾದ, ರುಚಿ ರುಚಿಯಾದ ಮಾವಿನಕಾಯಿ ಹೆರಿ ಚಟ್ನಿಯನ್ನು ಸವಿಯಬಹುದಾಗಿದೆ. ಬಿಸಿ ಬಿಸಿ ಗಂಜಿಯೊಂದಿಗೆ ಸವಿಯಲು ಈ ಚಟ್ನಿ ಚೆನ್ನಾಗಿ ಇರುತ್ತದೆ.
ಅಲ್ಲದೇ ಇದನ್ನು ನೀವು ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದೆ. ಇದಕ್ಕೆ ಕಾಯಿ ಬಳಸದ ಕಾರಣ 15 ದಿನಗಳವರೆಗೆ ಈ ಚಟ್ನಿಯನ್ನು ನೀವು ಫ್ರಿಡ್ಜ್ನಲ್ಲಿಟ್ಟು ಬಳಕೆ ಮಾಡಬಹುದಾಗಿದೆ.
ಮಾವಿನ ಕಾಯಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿ ಇರುವುದರಿಂದ ಮಳೆಗಾಲದಲ್ಲಿ ಮಾವಿನಕಾಯಿ ಸೇವನೆ ಸೂಕ್ತ ಎಂದು ಪರಿಗಣಿಸಲಾಗಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಅಗಾಧ ಪ್ರಮಾಣದಲ್ಲಿದ್ದು ಮಳೆಗಾಲದಲ್ಲಿ ಎದುರಾಗುವ ರೋಗ ರುಜಿನಗಳನ್ನು ಹೊಡೆದೋಡಿಸುವ ಸಾಮರ್ಥ್ಯ ಹೊಂದಿರುತ್ತದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಯಾರು ದೈಹಿಕವಾಗಿ ಹೆಚ್ಚು ದಣಿಯುವುದಿಲ್ಲ. ಇದರಿಂದ ಜೀರ್ಣಕ್ರಿಯೆ ಬಹುತೇಕರಿಗೆ ಸರಾಗವಾಗಿ ನಡೆಯುವುದಿಲ್ಲ. ಆದರೆ ಮಾವಿನ ಕಾಯಿ ಸೇವನೆಯು ದೇಹದಲ್ಲಿ ಚಯಾಪಚಯ ಕ್ರಿಯೆಯ ವೇಗ ಹೆಚ್ಚುವಂತೆ ಮಾಡುತ್ತದೆ. ಮಾವಿನಕಾಯಿಗಳಲ್ಲಿ ವಿಟಮಿನ್ ಎ, ಸಿ, ಇ ಜೊತೆಯಲ್ಲಿ ಫೈಬರ್ ಅಂಶ ಕೂಡ ಅಗಾಧ ಪ್ರಮಾಣದಲ್ಲಿದ್ದು ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ.



Click it and Unblock the Notifications
