Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮಲ್ಲಿಗೆ ತಟ್ಟೆ ಇಡ್ಲಿ ಮಾಡೋದು ಎಷ್ಟು ಸುಲಭ ಗೊತ್ತಾ? ಇಲ್ಲಿದೆ ರೆಸಿಪಿ
ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡೋದು ಕಾಮನ್, ದಕ್ಷಿಣ ಭಾರತದಲ್ಲಿ ಇಡ್ಲಿ ಮಾಡದೇ ಇರುವ ಮನೆಯೇ ಇಲ್ಲ. ಆದರೆ ಬಹುತೇಕರ ಮನೆಯಲ್ಲಿ ಒಂದೇ ರೀತಿ ಇಡ್ಲಿ ಮಾಡಿ ಸವಿಯುತ್ತಾರೆ. ಆದ್ರೆ ಇಡ್ಲಿಯಲ್ಲಿ ಹತ್ತಾರು ವಿಧದ ಖಾದ್ಯ ಮಾಡಬಹುದು. ಅದ್ರಲ್ಲಿ ನಾವು ಹಿಂದೆ ಈ ಬಿಡದಿ ತಟ್ಟೆ ಇಡ್ಲಿ ಮಾಡುವುದನ್ನು ನೋಡಿದ್ದೆವು.
ಇಂದು ನಾವು ತಟ್ಟೆಯಲ್ಲಿ ಇಡ್ಲಿಯಲ್ಲೇ ವಿವಿಧ ರೀತಿಯ ಇಡ್ಲಿ ಮಾಡುವುದನ್ನು ನೋಡಬಹುದು. ಹೋಟೆಲ್ ಗಳಲ್ಲಿ ನಾವು ತಟ್ಟೆ ಇಡ್ಲಿ ನೋಡಬಹುದು, ಸಾಮಾನ್ಯಕ್ಕಿಂತ ದೊಡ್ಡದಾಗಿ ರುಚಿಯಲ್ಲೂ ಅದ್ಭುತವಾಗಿರುತ್ತೆ. ಆದ್ರೆ ನಾವು ಮನೆಯಲ್ಲಿ ಈ ತಟ್ಟೆ ಇಡ್ಲಿ ಮಾಡಿದರೆ ರುಚಿಗಿಂತಲು ಸ್ವಲ್ಪ ಗಟ್ಟಿಯಾಗಿರುತ್ತೆ. ಹಾಗಾದ್ರೆ ಮನೆಯಲ್ಲಿ ಮೃದು ತಟ್ಟೆ ಇಡ್ಲಿ ಮಾಡುವುದು ಹೇಗೆ?
ತಟ್ಟೆ ಇಡ್ಲಿಯ ಒಂದು ವಿಧದಲ್ಲಿ ಮಲ್ಲಿಗೆ ತಟ್ಟೆ ಇಡ್ಲಿ ತುಂಬಾನೆ ಫೇಮಸ್ ಖಾದ್ಯ ಆಗಿದೆ. ಮಲ್ಲಿಗೆ ತಟ್ಟೆ ಇಡ್ಲಿ ಅಂದ್ರೆ ತುಂಬಾನೆ ಮೃದುವಾದ ಇಡ್ಲಿ. ಸವಿಯೋಕೆ ಮಲ್ಲಿಗೆಯಂತೆ ಮೃದುವಾಗಿರುತ್ತೆ. ಈ ರೀತಿ ಇಡ್ಲಿ ಮಾಡಲು ಅದರ ಹಿಟ್ಟು ರೆಡಿ ಮಾಡಿಕೊಳ್ಳುವಾಗ ಒಂದಿಷ್ಟು ಕ್ರಮ ವಹಿಸಿದರೆ ಸಾಕಾಗುತ್ತದೆ.

ಹಾಗಾದ್ರೆ ಈ ಮಲ್ಲಿಗೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಲ್ಲಿಗೆ ಇಡ್ಲಿ ಮಾಡುವುದು ಹೇಗೆ?, ಮಲ್ಲಿಗೆ ತಟ್ಟೆಗೆ ಹಿಟ್ಟು ರೆಡಿಮಾಡಿಕೊಳ್ಳುವುದು ಹೇಗೆ?, ಮಲ್ಲಿಗೆ ಇಡ್ಲಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಲ್ಲಿಗೆ ತಟ್ಟೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ಅಕ್ಕಿ- 3 ಕಪ್
- ಮೆಂತ್ಯೆ- ಸ್ವಲ್ಪ
- ಉದ್ದಿನ ಬೇಳೆ- 1 ಕಪ್
- ಸಬ್ಬಕ್ಕಿ- ಕಾಲು ಕಪ್
- ಅವಲಕ್ಕಿ- ಅರ್ಧ ಕಪ್
- ಉಪ್ಪು
- ಎಣ್ಣೆ
ಮಲ್ಲಿಗೆ ತಟ್ಟೆ ಇಡ್ಲಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್ಗೆ ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಹಾಕಿ ಅದಕ್ಕೆ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. ಮೂರರಿಂದ ನಾಲ್ಕು ಬಾರಿ ತೊಳೆದುಕೊಂಡರೆ ಉತ್ತಮ. ಬಳಿ ನೀರು ತೆಗೆದು ಮತ್ತೆ ಹೊಸ ನೀರು ಹಾಕಿ ನೆನೆಸಿಡಿ. ಈಗ ಇನ್ನೊಂದು ಬೌಲ್ನಲ್ಲಿ ಸಬಕ್ಕಿ ಹಾಗೂ ಅವಲಕ್ಕಿ ಹಾಕಿಕೊಂಡು ಚೆನ್ನಾಗಿ ತೊಳೆಯಿರಿ.
ಈ ರೀತಿ ತಳೆದ ಬಳಿಕ ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನ ಅಕ್ಕಿ, ಉದ್ದು ಹಾಕಿರುವ ಬೌಲ್ಗೆ ಹಾಕಿ ಚೆನ್ನಾಗಿ ನೆನೆಯಲು ಬಿಡಿ. ನಾಲ್ಕರಿಂದ ಐದು ಗಂಟೆ ನೆನೆದರೆ ಸಾಕಾಗುತ್ತದೆ. ಹೀಗೆ ಚೆನ್ನಾಗಿ ನೆನೆದ ಬಳಿಕ ನೀರಿನಿಂದ ಸ್ವಲ್ಪ ಸ್ವಲ್ಪವೇ ತೆಗೆದು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಕೊಳ್ಳುವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಜೋಪಾನವಾಗಿ ರುಬ್ಬಿಕೊಳ್ಳಬೇಕು.
ನುಣ್ಣಗೆ ಹಿಟ್ಟು ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈ ಹಿಟ್ಟು ತೆಳುವಾಗಿಯೂ ಹೆಚ್ಚು ದಪ್ಪವಾಗಿಯೂ ಇರದಂತೆ ನೋಡಿಕೊಳ್ಳಿ. ಈಗ ಈ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಕಲಸಿದ ಬಳಿಕ ಈ ಪಾತ್ರೆಗೆ ಮುಚ್ಚಳ ಮುಚ್ಚಿ 8 ಗಂಟೆಗಳ ಕಾಲ ಹುಳಿ ಬರಲಿ ಇಡಬೇಕು.
ಬೆಳಗ್ಗೆ ಎದ್ದು ಈ ಹಿಟ್ಟನ್ನು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಈಗ ಇಡ್ಲಿ ಹಿಟ್ಟು ಹಾಕಲು ಬೇಕಾದ ತಟ್ಟೆಗಳ ತೆಗೆದುಕೊಂಡು ಎಣ್ಣೆ ಸವರಿಕೊಳ್ಳಿ. ಎಣ್ಣೆ ಸವರಿದ ಬಳಿಕ ತಟ್ಟಗೆ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಇಡ್ಲಿ ಹಿಟ್ಟನ್ನು ತಟ್ಟೆ ಫುಲ್ ಆಗಿ ಹಾಕಬೇಡಿ. ನಂತರ ಈ ತಟ್ಟೆಗಳನ್ನು ಇಡ್ಲಿ ಕುಕ್ಕರ್ನಲ್ಲಿ ಇಟ್ಟು ಬೇಯಿಸಿಕೊಳ್ಳಿ. 10 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮೃದು ಮಲ್ಲಿಗೆ ತಟ್ಟೆ ಇಡ್ಲಿ ರೆಡಿಯಾಗುತ್ತದೆ.



Click it and Unblock the Notifications