Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಊಟಕ್ಕೆ ಮಜ್ಜಿಗೆ ಹುಳಿ ಮಾಡುವುದು ಹೇಗೆ? ಇಷ್ಟೊಂದು ಸಿಂಪಲ್ ಅಡುಗೆ ಗೊತ್ತಾ?
ಊಟಕ್ಕೆ ಅದ್ಭುತ ರುಚಿಯ ಯಾವುದಾದರೊಂದು ಹುಳಿ, ಸಾಂಬಾರ್ ಇದ್ದರೆ ಅದರ ರುಚಿಗೆ ಒಂದಿಷ್ಟು ಊಟ ಹೆಚ್ಚು ಮಾಡುತ್ತೇವೆ. ಊಟದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಾರು, ಸಾಂಬಾರ್ ಇಷ್ಟವಾಗುತ್ತೆ. ಕೆಲವರಿಗೆ ಮಿಕ್ಸ ತರಕಾರಿ ಸಾಂಬಾರ್ ಇಷ್ಟವಾದರೆ ಮತ್ತೆ ಕೆಲವರಿಗೆ ರಸಂ ಇಷ್ಟವಾಗುತ್ತೆ.
ಕೆಲವರು ಮಸಾಲೆ ಭರತ ಸಾಂಬಾರ್‌ಗಿಂತಲೂ ಸರಳವಾಗಿ ಮಾಡುವ ಹುಳಿ, ರಸಂ ಇಷ್ಟಪಡುತ್ತಾರೆ. ಅದರಲ್ಲೂ ರಾತ್ರಿ ವೇಳೆ ಕಡಿಮೆ ಮಸಾಲೆ ಹಾಕಿರುವ ಸಾಂಬಾರ್ ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಇಂತಹ ಆರೋಗ್ಯಕರ ಊಟದ ವಿಚಾರದಲ್ಲಿ ನಾವಿಂದು ಮಜ್ಜಿಗೆ ಹುಳಿ ಮಾಡುವ ಕುರಿತು ತಿಳಿದುಕೊಳ್ಳೋಣ.

ಮಜ್ಜಿಗೆ ಹುಳಿ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಮಜ್ಜಿಗೆ ಹುಳಿಯಲ್ಲಿ ನಿತ್ಯದ ಊಟಕ್ಕಿಂತ ಹೆಚ್ಚು ಊಟ ಮಾಡಬಹುದು. ಏಕೆಂದರೆ ಕಡಿಮೆ ಮಸಾಲೆ ಹಾಕಿ ಒಳ್ಳೆಯ ಒಗ್ಗರಣೆ ಹಾಕಿದರೆ ಆ ಘಮ ಇಡೀ ಮನೆಯಲ್ಲಾ ಆವರಿಸುತ್ತೆ. ಈ ಘಮಲಿನಲ್ಲಿ ಒಳ್ಳೆಯ ಊಟವು ಹಿಡಿಯುತ್ತೆ. ಹಾಗಾದ್ರೆ ಈ ಮಜ್ಜಿಗೆ ಹುಳಿ ಮಾಡುವುದು ಹೇಗೆ?
ಮಜ್ಜಿಗೆ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಪದಾರ್ಥಗಳು
- ಸೋರೆಕಾಯಿ
- ತೆಂಗಿನ ಕಾಯಿ ತುರಿ
- ಕಡಲೆ ಬೇಳೆ
- ಒಣ ಮೆಣಸು
- ಕರಿಬೇವು
- ಜೀರಿಗೆ
- ಸಾಸಿವೆ
- ಮೊಸರು
- ಅರಶಿನ
- ಉಪ್ಪು
ಮಜ್ಜಿಗೆ ಹುಳಿ ಮಾಡುವುದು ಹೇಗೆ
ಈ ಮಜ್ಜಿಗೆ ಹುಳಿಯನ್ನು ಹಲವು ತರಕಾರಿಗಳ ಬಳಸಿ ಮಾಡುತ್ತಾರೆ. ಇಮದು ಸೋರೆಕಾಯಿ ಬಳಸಿ ಮಜ್ಜಿಗೆ ಹುಳಿ ಮಾಡುವ ಕುರಿತು ತಿಳಿಯೋಣ. ಮೊದಲು ಸೋರೆಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಬೇಯಿಸಿಕೊಳ್ಳಬೇಕು. ಒಂದು ಪಾತ್ರೆಗೆ ನೀರು ಹಾಕಿ ಸೋರೆಕಾಯಿ, ಉಪ್ಪು ಹಾಕಿ ಬೇಯಿಸಿಕೊಳ್ಳಿ. 5 ನಿಮಿಷ ಕುದಿ ಬಂದರೆ ಸೋರೆಕಾಯಿ ಬೇಯುತ್ತದೆ.
ಈಗ ಒಂದು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಕಡಲೆ ಬೇಳೆ (ನೀರಿನಲ್ಲಿ 20 ನಿಮಿಷ ನೆನೆಸಿಟ್ಟು ಬಳಸಿ), ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಚಟ್ನಿ ಹದದಲ್ಲಿ ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಒಲೆ ಮೇಲೆ ಬೇಯುತ್ತಿರುವ ಸೋರೆಕಾಯಿಗೆ ಹಾಕಿಕೊಳ್ಳಿ. ಒಂದು ಗ್ಲಾಸ್ ನೀರು ಅರಶಿನ ಪುಡಿ, ಉಪ್ಪು ಸಹ ಹಾಕಿಕೊಂಡು ಕುದಿಯಲು ಬಿಡಿ.
ಈಗ ಒಂದು ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ನೀರು ಹಾಕಿ ತೆಳು ಮಾಡಿಕೊಳ್ಳಿ. ಅರ್ಧ ಲೀಟರ್ ಮಜ್ಜಿಗೆ ಇದ್ದರೆ ಸಾಕು. ಇದನ್ನು ಒಲೆ ಮೇಲೆ ಕುದಿಯುತ್ತಿರುವ ಸೋರೆಕಾಯಿಯ ಹುಳಿಗೆ ಹಾಕಿಕೊಂಡು ಕಲಸಿಕೊಳ್ಳುತ್ತಾ ಇರಿ. ಬಿಸಿ ಆಗಿರುವುದರಿಂದ ನಿಧಾನವಾಗಿ ತಿರುಗಿಸುತ್ತಾ ಇರಿ. ಈಗ ಉರಿ ಸಣ್ಣದಾಗಿ ಇಡಿ.
ಈಗ ಇನ್ನೊಂದು ಕಡೆ ಒಗ್ಗರಣೆ ರೆಡಿ ಮಾಡಿ. ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಮಜ್ಜಿಗೆ ಹುಳಿಗೆ ಹಾಕಿಕೊಂಡು ತಿರುಗಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಜ್ಜಿಗೆ ಹುಳಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
