Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಮಹಾರಾಷ್ಟ್ರದ ಬೆಸ್ಟ್ ಖಾಪ್ರೋಳಿ ನೀವೂ ಮಾಡಿ; ಇದು ದೋಸೆಗಿಂತ ಮೃದು!
ಮಹಾರಾಷ್ಟ್ರದ ಸಂಸ್ಕೃತಿಯಲ್ಲಿ ಹಲವು ರೀತಿಯ ಖಾದದ್ಯಗಳ ಮಾಡಿ ಸವಿಯೋದು ನೋಡಬಹುದು. ಅದ್ರಲ್ಲೂ ಹಲವು ಖಾದ್ಯಗಳು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಹೊರಗಡೆಯು ಬಹಳ ಫೇಮಸ್. ಮಹಾರಾಷ್ಟ್ರದಲ್ಲಿ ಮಾಡುವಂತಹ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬೆಳಗಿನ ತಿಂಡಿಗೆ ವಿವಿಧ ರೀತಿಯ ಖಾದ್ಯಗಳ ಮಾಡಿ ಸವಿಯೋದು ಸಾಮಾನ್ಯವಾಗಿ ನೋಡಬಹುದು.
ಇನ್ನು ಅದೇ ರೀತಿ ಬೆಳಗ್ಗೆ ತಿಂಡಿಗೆ ಹಲವು ಬಗೆಯ ಖಾದ್ಯಗಳ ಜೊತೆಗೆ ಮೃದುವಾದ ಖಾಪ್ರೋಳಿ ಮಾಡುವುದು ನೋಡಿರಬಹುದು. ಇದು ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಮಾಡುತ್ತಾರೆ. ಬೆಳಗಾವಿಯಲ್ಲಿ ಸಹ ಇದು ಬಹಳ ಫೇಮಸ್. ಖಾಪ್ರೋಳಿ ದೋಸೆಯಂತೆ ಕಂಡು ಅದಕ್ಕಿಂತ ರುಚಿಕರ ಹಾಗೆ ಮೃದುವಾದ ಖಾದ್ಯ.

ಮಹಾರಾಷ್ಟ್ರದ ಸಾಂಪ್ರದಾಯಿಕ ಅಡುಗೆ ವಿಧಾನದಲ್ಲಿ ಈ ಖಾಪ್ರೋಳಿ ಕೂಡ ಬಹಳ ಹೆಸರುವಾಸಿಯಾಗಿದೆ. ಹಾಗಾದ್ರೆ ನಾವಿಂದು ಮನೆಯಲ್ಲಿ ಖಾಪ್ರೋಳಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದ್ರಲ್ಲೂ ಸುಲಭವಾಗಿ ಬೆಳಗ್ಗೆ ತಿಂಡಿಯ ಸಮಯದಲ್ಲಿ ಈ ಖಾಪ್ರೋಳಿ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳಿ.
ಈ ಖಾಪ್ರೋಳಿ ಮಾಡುವುದು ಹೇಗೆ? ಈ ರೆಸಿಪಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದಿಕೊಳ್ಳೋಣ.
ಖಾಪ್ರೋಳಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಉದ್ದಿನ ಬೇಳೆ
- ಕಡಲೆ ಬೇಳೆ
- ಅವಲಕ್ಕಿ
- ಎಣ್ಣೆ
- ಮೆಂತ್ಯ
- ಅರಶಿಣ
ಖಾಪ್ರೋಳಿ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಂದು ಕಪ್ ಅಕ್ಕಿಯನ್ನು ತೊಳೆದು ನೆನೆಸಿಡಿ. ಹಾಗೆ ಮತ್ತೊಂದು ಬೌಲ್‌ನಲ್ಲಿ ಉದ್ದಿನ ಬೇಳೆ, ಕಾಲು ಕಪ್ ಕಡಲೆ ಬೇಳೆ, ಮೆಂತ್ಯ ಸಹ ಹಾಕಿ ತೊಳೆದು ನೆನೆಸಿಡಿ. ಇದೆಲ್ಲವು 6 ಗಂಟೆಯಾದರು ನೆನೆಸಿಡಿ. ನಂತರ ಎಲ್ಲಾ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು. ಅಗತ್ಯ ನೀರು ಹಾಕಿ ನುಣ್ಣಗೆ ರುಬ್ಬಿ. ಹೀಗೆ ರುಬ್ಬಿಕೊಳ್ಳಲು 10 ನಿಮಿಷ ಮುನ್ನ ಅರ್ಧ ಕಪ್ ಅವಲಕ್ಕಿಯನ್ನು ನೆನೆಸಿಟ್ಟು ಅದನ್ನು ಸಹ ಇದರೊಂದಿಗೆ ಬೆರೆಸಿ ಚೆನ್ನಾಗಿ ರುಬ್ಬಿ ಹಿಟ್ಟು ರೆಡಿ ಮಾಡಿಕೊಳ್ಳಬೇಕು.
ಈ ಹಿಟ್ಟನ್ನು ಪಾತ್ರೆಗೆ ಹಾಕಿ ಅರಶಿಣ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದೇ ಸಮಯದಲ್ಲಿ ಉಪ್ಪು ಸಹ ಹಾಕಿ ಮಿಶ್ರಣ ಮಾಡಿ. ನಂತರ ಮುಚ್ಚಳ ಮುಚ್ಚಿ ಒಂದು ರಾತ್ರಿ ಬಿಡಬೇಕು. ಈಗ ಮಾರನೆ ದಿನ ಹುದುಗಿ ಬಂದಿರುವ ಹಿಟ್ಟನ್ನು ಮಿಶ್ರಣ ಮಾಡಿಕೊಂಡು ದೋಸೆ ಮಾಡಿಕೊಳ್ಳಲು ಸಿದ್ದ ಮಾಡಿ.
ಮೊದಲು ಕಾವಲಿಯನ್ನು ಒಲೆ ಮೇಲೆ ಇಟ್ಟು ಬಿಸಿ ಮಾಡಿಕೊಂಡು ಎಣ್ಣೆ ಹಚ್ಚಿ ಅಥವಾ ಬೆಣ್ಣೆಯನ್ನು ಹಚ್ಚಿಕೊಂಡು ಮಾಡಿಕೊಳ್ಳಬಹುದು. ಈ ಖಾಪ್ರೋಳಿ ಸವಿಯಲು ಕಾಯಿ ಹಾಲು ಮಾಡಿಕೊಳ್ಳಬಹುದು, ಇಲ್ಲವೆ ಕಡಲೆಯಿಂದ ಮಾಡುವ ಚಟ್ನಿ ಬಹಳ ರುಚಿ ನೀಡಲಿದೆ. ಹಾಗೆ ಎಲ್ಲಾ ಬಗೆಯ ತೆಂಗಿನಕಾಯಿ ಚಟ್ನಿ ಕೂಡ ಇದಕ್ಕೆ ಬಹಳ ರುಚಿ ತರಲಿವೆ.
ನೀವು ಸಹ ಇದನ್ನು ಬೆಳಗ್ಗೆ ತಿಂಡಿಗೆ ಸುಲಭವಾಗಿ ಮಾಡಿ ಸವಿಯಬಹುದು. ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ ಇದಾಗಿದೆ. ದೋಸೆಗಿಂತ ಇದು ಬಹಳ ರುಚಿ ನೀಡಲಿದೆ.



Click it and Unblock the Notifications
