Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಅನ್ನ ಉಳಿದರೆ ಚಿತ್ರಾನ್ನ ಮಾಡದೆ ಈ ರೀತಿ ಮ್ಯಾಗಿ ಮಸಾಲ ರೈಸ್ ಮಾಡಿ..!
ಎಲ್ಲರ ಮನೆಯಲ್ಲೂ ಅನ್ನ ಉಳಿಯುವುದು ಸಾಮಾನ್ಯ. ಉಳಿದ ಅನ್ನವನ್ನ ಎಸೆಯೋದು ಬಹಳ ಕಡಿಮೆ. ಏಕೆಂದರೆ ಉಳಿದ ಅನ್ನದಲ್ಲಿ ನಾವು ಹಲವು ರೀತಿಯ ಖಾದ್ಯ ಮಾಡುತ್ತೇವೆ. ಹಿಂದಿನ ದಿನ ಅನ್ನ ಉಳಿದರೆ ಬೆಳಗ್ಗೆ ಅದನ್ನು ಚಿತ್ರಾನ್ನ ಮಾಡುವುದು ಸಾಮಾನ್ಯ. ಹಾಗೆ ಉಳಿದ ಅನ್ನದಲ್ಲಿ ಸಂಡಿಗೆ, ಪುಳಿಯೋಗರೆ, ಬೋಂಡಾ ಕೂಡ ಮಾಡುತ್ತಾರೆ. ಈ ರೈಸ್ ಉಳಿದಾಗ ಬೆಳಗ್ಗೆ ತಿಂಡಿಗೆ ಇದರಿಂದಲೇ ಯಾವುದಾದರೊಂದು ಖಾದ್ಯ ರೆಡಿಯಾಗುತ್ತದೆ.
ಹಾಗೆ ಈ ಅನ್ನವನ್ನು ನಾವು ರುಚಿಕರವಾಗಿ ಯಾವುದಾದರು ಖಾದ್ಯ ಮಾಡಿ ಸವಿಯುವ ಮನಸ್ಸಾಗುತ್ತದೆ. ಬೆಳಗ್ಗೆ ಹಳೆಯ ಅನ್ನದಲ್ಲಿ ಯಾವ ತಿಂಡಿ ಮಾಡಿದರೂ ಅಷ್ಟೊಂದು ರುಚಿಯಾಗಿರುವುದಿಲ್ಲ ಎಂಬ ವಾದವಿದೆ. ಆದ್ರೆ ನಾವಿಂದು ಅತ್ಯಂತ ರುಚಿಕರವಾಗಿ ಮಸಾಲೆ ಭರಿತ ರೈಸ್ ರೆಸಿಪಿ ಮಾಡುವ ಕುರಿತಂತೆ ಇಲ್ಲಿ ತಿಳಿದುಕೊಳ್ಳೋಣ.

ಉಳಿದ ಅನ್ನದಲ್ಲಿ ಮಾರನೆ ದಿನ ಬೆಳಗ್ಗೆ ಮ್ಯಾಗಿ ಮಸಾಲ ರೈಸ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಒಂದು ಪ್ಯಾಕ್ ಮ್ಯಾಗಿ ಮಸಾಲ ಬಳಸಿ ಈ ರೀತಿ ರೈಸ್ ಮಾಡಿದರೆ ಮನೆಯಲ್ಲಿ ಎಲ್ಲರು ಸವಿಯಲು ಮುಂದಾಗುತ್ತಾರೆ. ಇದನ್ನು ಮಾಡುವುದು ಕೂಡ ತುಂಬಾನೆ ಸುಲಭ. ಕಡಿಮೆ ಸಮಯದಲ್ಲಿ ಈ ರೈಸ್ ಮಾಡಬಹುದು. ಮ್ಯಾಗಿ ಮಸಾಲೆಯ ಸುವಾಸನೆಯಿಂದ ಎಲ್ಲರ ಬಾಯಲ್ಲೂ ನೀರು ಬರುತ್ತೆ.
ಹಾಗಾದ್ರೆ ನಾವು ಈ ಮ್ಯಾಗಿ ಮಸಾಲ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮ್ಯಾಗಿ ರೈಸ್ ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮ್ಯಾಗಿ ಮಸಾಲ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಅನ್ನ
- ಜೀರಿಗೆ
- ಶುಂಠಿ/ಬೆಳ್ಳುಳ್ಳಿ
- ಗೋಡಂಬಿ
- ಮೆಣಸಿನಕಾಯಿ
- ಹಸಿರು ಬಟಾಣಿ
- ಈರುಳ್ಳಿ
- ಟೊಮೆಟೊ
- ಮ್ಯಾಗಿ ಮಸಾಲಾ ಪ್ಯಾಕೆಟ್ - 2
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
ಮ್ಯಾಗಿ ಮಸಾಲ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಇದಕ್ಕೆ ಜೀರಿಗೆ, ಶುಂಠಿ, ಬೆಳ್ಳುಳ್ಳಿ ಕತ್ತರಿಸಿಕೊಂಡು ಹಾಕಿ, ನಂತರ ಗೋಡಂಬಿ, ಹಸಿ ಬಟಾಣಿ ಅಥವಾ ಕಡಲೆ ಬೀಜ, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು.
1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಒಂದು ಈರುಳ್ಳಿಯನ್ನು ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಒಂದು ಟೊಮೆಟೋ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಈಗ ಮ್ಯಾಗಿ ಮಸಾಲ ಪೌಡರ್ ಅನ್ನು ಒಡೆದು ಹಾಕಿ, 2 ಪ್ಯಾಕೆಟ್ ಹಾಕಿಕೊಂಡು ಮಿಕ್ಸ್ ಮಾಡಿ 1 ನಿಮಿಷದಲ್ಲಿ ಇದಕ್ಕೆ ಉಳಿದ ಅನ್ನವನ್ನು ಇದಕ್ಕೆ ಸೇರಿಸಿ.
ಅನ್ನ ಸೇರಿಸಿದ ಬಳಿಕ ಉರಿ ಸಣ್ಣ ಮಾಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲಾ ಮಸಾಲೆಗಳು ಹಿಡಿಯುವಂತೆ ಕಲಸಿಕೊಳ್ಳಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ರುಚಿ ರುಚಿಯ ಮ್ಯಾಗಿ ಮಸಾಲೆ ರೈಸ್ ರೆಡಿಯಾಗುತ್ತದೆ. ಸುಲಭವಾಗಿ ಕಡಿಮೆ ಸಮಯದಲ್ಲಿ ರುಚಿ ರುಚಿಯ ಈ ರೈಸ್ ಮಾಡಬಹುದು. ಮಕ್ಕಳೂ ಕೂಡ ಇಷ್ಟ ಪಟ್ಟು ಸವಿಯುತ್ತಾರೆ. ಹಾಗಾದ್ರೆ ಇದನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications