Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಒರಿಜಿನಲ್ ಮದ್ದೂರು ವಡೆ ಮಾಡೋದು ಹೇಗೆ ಗೊತ್ತಾ? ಸಿಂಪಲ್ ಇಲ್ಲಿದೆ ರೆಸಿಪಿ!
ಬೆಳಗ್ಗೆ ಎದ್ದಾಗ ತಿಂಡಿ ಏನು ಮಾಡಬೇಕು ಅನ್ನೋದೆ ಪ್ರತಿಯೊಬ್ಬ ಗೃಹಿಣಿಯರ ಪ್ರಶ್ನೆಯಾಗಿರುತ್ತೆ. ಆದ್ರೆ ಕೆಲವೊಮ್ಮೆ ಈ ಪ್ರಶ್ನೆಗೆ ಉತ್ತರ ಸಿಗಬಹುದು, ಮತ್ತೆ ಕೆಲವೊಮ್ಮೆ ಯೋಚಿಸುವಾಗಲೇ ಸಮಯವಾಗಿರುತ್ತೆ. ಹೀಗಾದಾಗ ಏನಾದರು ಒಂದು ಮಾಡಿ ಆ ದಿನ ದೂಡುತ್ತಾರೆ. ಆದರೆ ಫ್ರೀ ಆಗಿದ್ದಾಗ ಯಾವ ತಿಂಡಿ ಮಾಡಬೇಕು? ಅಂದರೆ ಇದು ಬೆಳಗ್ಗೆಯ ತಿಂಡಿಗೆ ಅಲ್ಲ ಬದಲಾಗಿದೆ ಸಂಜೆಯ ಸ್ನ್ಯಾಕ್ಸ್ ಆಗಿ ಇಲ್ಲವೆ ಊಟದ ಜೊತೆ ಸವಿಯಲು ಈ ಮದ್ದೂರು ವಡೆ ತಿಂಡಿ ಮಾಡಿ ನೋಡಿ.
ವಡೆಯಲ್ಲಿ ಹಲವು ವಿಧಗಳಿವೆ. ಅದ್ರಲ್ಲೂ ಈ ಮದ್ದೂರು ವಡೆ ತುಂಬಾನೆ ಫೇಮಸ್ ತಿಂಡಿಯಾಗಿದೆ. ರಾಜ್ಯದ ಅತ್ಯಂತ ರುಚಿಕರ ಮಸಾಲ ತಿಂಡಿಗಳ ಪಟ್ಟಿಯಲ್ಲಿ ಈ ಮದ್ದೂರು ವಡೆ ಸಹ ಇದೆ. ಮಕ್ಕಳಿಗೆ ಈ ತಿಂಡಿ ಅಂದರೆ ಇಷ್ಟ, ಅದ್ರಲ್ಲೂ ಈಗ ಮದ್ದೂರು ವಡೆ ಮಾರುಕಟ್ಟೆಗೂ ಎಂಟ್ರಿ ಕೊಟ್ಟಿದೆ. ಹಲವು ಅಂಗಡಿಗಳಲ್ಲಿ ಮದ್ದೂರು ವಡೆ ಸಿಗುತ್ತದೆ.

ಹಾಗಾದ್ರೆ ಈ ಮದ್ದೂರು ವಡೆಯನ್ನ ಮನೆಯಲ್ಲೇ ಮಾಡುವುದು ಹೇಗೆ? ಮದ್ದೂರು ವಡೆ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮದ್ದೂರು ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ - 1
- ರವಾ - 1 ಗ್ಲಾಸ್
- ಮೈದಾ - 1 ಗ್ಲಾಸ್
- ಅಕ್ಕಿ ಹಿಟ್ಟು - 1/2 ಗ್ಲಾಸ್
- ಹಸಿರು ಮೆಣಸಿನಕಾಯಿ - 3
- ಶುಂಠಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಎಲೆಗಳು -
- ಕಡಲೆ ಬೀಜ - 2 ಟೀಸ್ಪೂನ್
- ಬಿಳಿ ಎಳ್ಳು - 1 ಟೀಸ್ಪೂನ್
- ತುಪ್ಪ - 1 ಚಮಚ
- ಎಣ್ಣೆ
- ರುಚಿಗೆ ಉಪ್ಪು
ಮದ್ದೂರು ವಡೆ ಮಾಡುವ ವಿಧಾನ
ಒಂದು ಬೌಲ್‌ಗೆ ಈರುಳ್ಳಿ ಹಾಕಿಕೊಂಡು ಅದಕ್ಕೆ ಕತ್ತರಿಸಿಕೊಂಡ ಹಸಿ ಮೆಣಸು, ಶುಂಠಿಯನ್ನು ಸೇರಿಸಿಕೊಳ್ಳಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಎಲ್ಲಾ ವಸ್ತುಗಳು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಇದನ್ನು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಬೇಕು.
ಬಳಿಕ ಇದಕ್ಕೆ ಒಂದು ಲೋಟದಲ್ಲಿ ಮಧ್ಯಮ ರವೆ ಹಾಕಿ, ಅದೇ ಲೋಟದಲ್ಲಿ 1 ಗ್ಲಾಸ್ ಮೈದಾ, ಅರ್ಧ ಲೋಟ ಅಕ್ಕಿ ಹಿಟ್ಟು ಹಾಕಿ, ಬಳಿಕ ಇದಕ್ಕೆ ಕಡಲೆ ಬೀಜ ಹುರಿದು ತರಿತರಿಯಾಗಿ ರುಬ್ಬಿಕೊಂಡು ಇದಕ್ಕೆ ಹಾಕಿ. ಇದಕ್ಕೆ ಬಿಳಿ ಎಳ್ಳು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ತುಪ್ಪ ಹಾಗೂ ಬಿಸಿ ಎಣ್ಣೆ ಹಾಕಿಕೊಂಡು ಕಲಸಿಕೊಳ್ಳಿ.
ಹಿಟ್ಟು ಹದಾ ಆಗುವಂತೆ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡುವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿರುವಂತೆ ಮಾಡಿಕೊಳ್ಳಿ. ಬಳಿಕ ಮದ್ದೂರು ವಡೆಗೆ ಬೇಕಾಗುವ ಗಾತ್ರಕ್ಕೆ ತಕ್ಕಂತೆ ಉಂಡೆ ಕಟ್ಟುಕೊಳ್ಳಿ.
ಈಗ ಒಂದು ಪ್ಲಾಸ್ಟಿಕ್ ಮೇಲೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆ ಇಟ್ಟು ತಟ್ಟಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಅಷ್ಟಕ್ಕೆ ಮಾಡಿಕೊಳ್ಳಿ. ತುಂಬಾನೆ ತೆಳುವಾಗಿ ಅಥವಾ ದಪ್ಪವಾಗಿ ತಟ್ಟಿಕೊಳ್ಳಬೇಡಿ. ಮಧ್ಯಮ ಗಾತ್ರದಲ್ಲಿರುವಂತೆ ತಟ್ಟಿಕೊಳ್ಳಿ. ಈಗ ಒಲೆ ಮೇಲೆ ಪಾತ್ರೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
ಬಳಿಕ ಕಾದಿರುವ ಎಣ್ಣೆಗೆ ವಡೆಯನ್ನು ಹಾಕಿಕೊಳ್ಳಿ. ಈ ವೇಳೆ ಉರಿಯನ್ನು ಮಧ್ಯಮವಾಗಿ ಇಡಿ. ತೀರ ಹೆಚ್ಚಾಗಿಯೂ ಇಡಬೇಡಿ. ಒಮ್ಮೆ 3 ವಡೆಗಳ ಹಾಕಿಕೊಂಡಿ ಕಾಯಿಸಿಕೊಳ್ಳಿ. ಆಗಾಗ ವಡೆಯನ್ನು ತಿರುಗಿಸಿಕೊಳ್ಳಿ. ಎರಡೂ ಬದಿ ಚೆನ್ನಾಗಿ ಕಾಯಿಸಿಕೊಂಡರೆ ನಿಮ್ಮ ಮುಂದೆ ಮದ್ದೂರು ವಡೆ ಸಿದ್ಧವಾಗುತ್ತದೆ. ಚೆನ್ನಾಗಿ ಬೇಯಿಸಿಕೊಂಡರೆ ಹೆಚ್ಚು ದಿನ ಇಡಬಹುದು.



Click it and Unblock the Notifications