Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ಪೆಷಲ್ ಟೇಸ್ಟ್ ನೀಡುವ ಮದ್ದೂರು ಮಸಾಲೆ ವಡೆ..! ಈ ವಿಧಾನದಲ್ಲಿ ಮಾಡಿ ನೋಡಿ..!!
ರಾಜ್ಯದ ಒಂದೊಂದು ಮೂಲೆಯಲ್ಲೂ ಒಂದೊಂದು ರೀತಿಯ ಖಾದ್ಯಗಳು ಫೇಮಸ್ ಆಗಿರುತ್ತವೆ. ದಾವಣಗೆರೆಯ ಬೆಣ್ಣೆ ದೋಸೆ, ಮೈಸೂರು ಬೊಂಡಾ, ಹೊಸಪೇಟೆ ಬಿರಿಯಾನಿ, ಬಿಡದಿ ಇಡ್ಲಿ ಹೀಗೆ ಒಂದೊಂದು ಭಾಗದಲ್ಲಿ ಒಂದು ರೀತಿ ಖಾದ್ಯ ಫೇಮಸ್ ಆಗಿಬಿಡುತ್ತವೆ. ಹಾಗೆ ಅದೇ ಸಾಲಿನ ಒಂದು ಫೇಮಸ್ ತಿಂಡಿ ಅಂದ್ರೆ ಅದು ಮದ್ದೂರು ವಡೆ. ಮದ್ದೂರು ವಡೆ ರಾಜ್ಯದ ರುಚಿಕರ ಕ್ರಿಸ್ಪಿಯಾದ ತಿಂಡಿ.
ಸಂಜೆ ಸ್ನ್ಯಾಕ್ಸ್‌ಗೆ ಈ ಮದ್ದೂರು ವಡೆ ಸಿಕ್ಕಾಪಟ್ಟೆ ರುಚಿ ತಂದು ಕೊಂಡುವ ತಿಂಡಿಯಾಗಿದೆ. ಹೀಗಾಗಿ ಕೆಲರು ರಸ್ತೆ ಬದಿಯ ಅಂಗಡಿಗಳಿಗೆ ತೆರಳಿ ಈ ಮದ್ದೂರು ವಡೆ ಸವಿಯುತ್ತಾರೆ. ಮಕ್ಕಳಂತೂ ಈ ವಡೆ ರುಚಿಗೆ ಫಿದಾ ಆಗುತ್ತಾರೆ. ಮದ್ದೂರು ಫೇಮಸ್ ವಡೆಯನ್ನು ಮನೆಯಲ್ಲೂ ಮಾಡಬಹುದು ಆದ್ರೆ ನಾವಿಂದು ಸಾಮಾನ್ಯ ವಡೆಯ ಬದಲು ಸ್ಪೆಷಲ್ ಮದ್ದೂರು ವಡೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಈ ಮಸಾಲೆ ವಡೆಗಳನ್ನು ಸಾಮಾನ್ಯವಾಗಿ ಹುಡಿಗಡಲೆ, ನೆಲಗಡಲೆ ಬಳಸಿ ಮಾಡುತ್ತಾರೆ. ಇಂದು ನಾವು ಈ ಮದ್ದೂರು ಮಸಾಲೆ ವಡೆಯನ್ನು ವಿಶೇಷವಾಗಿ ಮಾಡೋಣ. ಮೈದಾ ಹಿಟ್ಟು ಬಳಸಿ ಮಾಡುವ ಈ ವಡೆ ಬಹಳ ರುಚಿ ನೀಡಲಿದೆ. ಹಾಗಾದ್ರೆ ಸ್ಪೆಷಲ್ ಮಸಾಲೆ ಮದ್ದೂರು ವಡೆ ಮಾಡುವ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಮದ್ದೂರು ಮಸಾಲೆ ವಡೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವುದು ಹೇಗೆ ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಮದ್ದೂರು ಸ್ಪೆಷಲ್ ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ - 1
- ಮಧ್ಯಮ ರವೆ-1 ಗ್ಲಾಸ್
- ಮೈದಾ - 1 ಗ್ಲಾಸ್
- ಅಕ್ಕಿ ಹಿಟ್ಟು - 1/2 ಗ್ಲಾಸ್
- ಹಸಿರು ಮೆಣಸಿನಕಾಯಿ
- ಶುಂಠಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಎಲೆಗಳು
- ಕೆಡಲೆ ಬೀಜ
- ಬಿಳಿ ಎಳ್ಳು
- ತುಪ್ಪ
- ಎಣ್ಣೆ
- ರುಚಿಗೆ ಉಪ್ಪು
ಮದ್ದೂರು ಸ್ಪೆಷಲ್ ಮಸಾಲೆ ವಡೆ ಮಾಡುವುದು ಹೇಗೆ?
ಒಂದು ಬೌಲ್‌ಗೆ ತೆಳುವಾಗಿ ಈರುಳ್ಳಿಯನ್ನು ಕತ್ತರಿಸಿಕೊಂಡು ಹಾಕಿ, ಇದಕ್ಕೆ ಸಣ್ಣದಾಗಿ ಹಸಿ ಮೆಣಸು ಹಾಗೂ ಶುಂಠಿಯನ್ನು ಕೂಡ ಹಾಕಿಕೊಂಡು ಕಲಸಿ ಹಾಗೆ ಕೊತ್ತಂಬರಿ, ಕರಿಬೇವು ಸೊಪ್ಪನ್ನು ಕೂಡ ಚಿಕ್ಕದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ. ನಂತರ ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹಾಗೆ ಒಂದು ಲೋಟದಲ್ಲಿ ರವೆಯನ್ನು ಇದಕ್ಕೆ ಹಾಕಿಕೊಂಡು ಅದೇ ಗ್ಲಾಸ್‌ನಲ್ಲಿ ಮೈದಾ ಹಿಟ್ಟು ಹಾಕಿ, ನಂತರ ಅರ್ಧ ಗ್ಲಾಸ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ.
ಒಂದು ಮುಷ್ಟಿ ಕಡಲೆ ಕಾಯಿ ಬೀಜವನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ಒಂದು ಸುತ್ತು ರುಬ್ಬಿಕೊಂಡು ಇದಕ್ಕೆ ಹಾಕಿ ಸ್ವಲ್ಪ ಪುಡಿಯಾದರೆ ಸಾಕು. ಇದನ್ನು ಕೂಡ ಬೌಲ್‌ಗೆ ಸೇರಿಸಿ ಬಳಿಕ ಬಿಳಿ ಎಳ್ಳು, ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಕೈನಲ್ಲಿ ಕಿವುಚಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ನೀರು ಹಾಕಿಕೊಳ್ಳಬೇಡಿ.
5 ನಿಮಿಷ ಹದ ಮಾಡಿದ ಬಳಿಕ ಒಂದು ಸ್ಪೂನ್ ತುಪ್ಪ ಹಾಗೂ ಒಂದು ಸ್ಪೂನ್ ಬಿಸಿ ಎಣ್ಣೆಯನ್ನು ಇದಕ್ಕೆ ಹಾಕಿ ಮತ್ತೆ ಕಲಸಿಕೊಳ್ಳಿ. ಇದು ಸ್ವಲ್ಪ ಉಂಡೆ ಕಟ್ಟಲು ಬರುವಂತೆ ಆಗುತ್ತದೆ. ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಎಷ್ಟು ಕಡಿಮೆ ನೀರು ಹಾಕುತ್ತೀರೋ ಅಷ್ಟು ಒಳ್ಳೆಯದು. ಈ ಹದ ಬರುವವರೆಗೆ ಕಲಸಿಕೊಳ್ಳಿ. ಎಲ್ಲಾ ಹಿಟ್ಟನ್ನು ಉಂಡೆ ಮಾಡಿಟ್ಟುಕೊಳ್ಳಿ.
ಅನಂತರ ಒಂದೊಂದೆ ನಿಮ್ಮ ಗಾತ್ರಕ್ಕೆ ಬೇಕಾಗುವಂತೆ ಲಟ್ಟಿಸಿಕೊಂಡು ಎಣ್ಣೆಗೆ ಬಿಟ್ಟುಕೊಳ್ಳಿ. 2 ನಿಮಿಷ ಒಂದು ಮೈ ಬೆಂದ ಬಳಿಕ ಇನ್ನೊಂದು ಕಡೆ ತಿರುಗಿಸಿಕೊಳ್ಳಿ. ಹೀಗೆ ಎಲ್ಲಾ ವಡೆ ಮಾಡಿಕೊಳ್ಳಿ. ವಡೆಗಿಂತ ಸ್ವಲ್ಪ ದೊಡ್ಡದಾಗಿ ಇದರ ಗಾತ್ರ ಇರಲಿ. ಒಂದರಿಂದ 2 ವಡೆ ಒಟ್ಟಿಗೆ ಎಣ್ಣೆಗೆ ಬಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮದ್ದೂರು ಸ್ಪೆಷಲ್ ಮಸಾಲೆ ವಡೆ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
