Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ರೀತಿ ಬದನೆಕಾಯಿ ಚಟ್ನಿ ಮಾಡಿದ್ರೆ 6 ದಿನ ಇಟ್ಟರೂ ಹಾಳಾಗಲ್ಲ..!!
ಬೆಳಗ್ಗೆ ತಿಂಡಿಗೆ ಅತ್ಯಂತ ರುಚಿಯಲ್ಲಿ ನಾವು ತಿಂಡಿಗೆ ಒಂದು ಚಟ್ನಿ ಮಾಡುತ್ತೇವೆ. ಯಾವುದೇ ತಿಂಡಿ ಆಗಿರಲಿ ಒಂದು ಚಟ್ನಿ ಜೊತೆಗೆ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಇಡ್ಲಿ, ದೋಸೆ, ಚಿತ್ರಾನ್ನ, ಪೂರಿ, ಚಪಾತಿ, ಪರೋಟಾ ಹೀಗೆ ಯಾವುದೇ ತಿಂಡಿ ಮಾಡಿರಲಿ ಅದಕ್ಕೊಂದು ರುಚಿ ರುಚಿಯ ಚಟ್ನಿ ಇದ್ದರೆ ತಿಂಡಿಯ ರುಚಿ ದುಪ್ಪಟ್ಟಾಗುವುದು ಖಚಿತ.
ಹೀಗೆ ತಿಂಡಿಗೆ ಯಾವುದಾದರು ಚಟ್ನಿ ಮಾಡಬೇಕು ಎಂಬ ಆಲೋಚನೆ ನಿಮ್ಮ ತಲೆಗೆ ಬಂದ ಕೂಡಲೆ ನೆನಪಾಗುವುದು ತೆಂಗಿನಕಾಯಿ ಚಟ್ನಿ, ಪುದಿನ ಚಟ್ನಿ, ಹುರಿಗಡಲೆ, ಶೇಂಗಾ ಚಟ್ನಿಗಳು ಮಾಡಿರುತ್ತೀರಿ. ಹಾಗೆ ಒಂದಿಷ್ಟು ತರಕಾರಿಗಳಿಂದಲೂ ಚಟ್ನಿ ಮಾಡಬಹುದು. ಅದರಲ್ಲಿ ಮುಖ್ಯವಾಗಿ ಹೀರೆಕಾಯಿಯ ಸಿಪ್ಪೆಯಿಂದ ಅದ್ಭುತ ರುಚಿಯ ಚಟ್ನಿ ಮಾಡಬಹುದು. ಹಾಗೆ ಬದನೆಕಾಯಿಯ ಮೂಲಕ ಮಾಡುವ ಚಟ್ನಿಯಂತು ಬಾಯಲ್ಲಿ ನೀರು ತರಿಸುತ್ತದೆ.

ಅದರಲ್ಲೂ ಈ ಬದನೆಕಾಯಿ ಚಟ್ನಿಯೊಂದಿಗೆ ಇಡ್ಲಿ, ದೋಸೆ ಹಾಗೂ ಚಪಾತಿ ಸವಿಯಲು ಈ ಚಟ್ನಿ ಸಿಕ್ಕಾಪಟ್ಟೆ ರುಚಿ ನೀಡಲಿದೆ. ಬದನೆಕಾಯಿ ಚಟ್ನಿಯನ್ನು ಈ ವಿಧಾನದ ಮೂಲಕ ಮಾಡಿದರೆ ಸುಮಾರು 6 ದಿನಗಳ ಕಾಲ ಇಟ್ಟು ಸವಿಯಬಹುದು. ಚಟ್ನಿ ಸಾಮಾನ್ಯವಾಗಿ ಬೆಳಗ್ಗೆ ಮಾಡಿದ್ದರೆ ಒಂದು ಹೊತ್ತಿನ ನಂತರ ಬೇಗ ಹಾಳಾಗುತ್ತದೆ. ಅದರಲ್ಲೂ ತೆಂಗಿನಕಾಯಿ, ಈರುಳ್ಳಿ ಚಟ್ನಿ ಬಹುಬೇಗ ಕೆಟ್ಟುಹೋಗುತ್ತೆ.
ಆದ್ರೆ ನಾವಿಂದು ತಿಳಿಸಲು ಹೊರಟಿರುವ ಈ ಬದನೆಕಾಯಿ ಚಟ್ನಿ 6 ದಿನಗಳ ಕಾಲ ಇಟ್ಟು ಸವಿಯಬಹುದು. ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ. ಹಾಗಾದ್ರೆ ಈ ಬದನೆಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬದನೆಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ - ಅರ್ಧ ಕೆ.ಜಿ
- ಬೆಳ್ಳುಳ್ಳಿ
- ಹಸಿ ಮೆಣಸು
- ಟೊಮೆಟೋ
- ಈರುಳ್ಳಿ
- ಸಾಸಿವೆ
- ಜೀರಿಗೆ
- ಇಂಗು
- ಕೊತ್ತಂಬರಿ
- ಕರಿಬೇವು
- ಎಣ್ಣೆ
- ಉಪ್ಪು
ಬದನೆಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ದೊಡ್ಡದಾಗಿ ಕತ್ತರಿಸಿಕೊಂಡಿರುವ ಬದನೆಕಾಯಿಯನ್ನು ಹಾಕಿ. ಬದನೆಕಾಯಿಯನ್ನು ಹೆಚ್ಚಿಕೊಂಡು ಅದನ್ನು ಉಪ್ಪು ನೀರಿಗೆ ಹಾಕಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಬಹುಬೇಗ ಕಪ್ಪಾಗುತ್ತದೆ. ಈ ಬದನೆಕಾಯಿ ಕುಕ್ಕರ್ಗೆ ಹಾಕಿಕೊಂಡು ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ, ಉಪ್ಪು ಹಾಗೂ ಈ ಎಲ್ಲಾ ವಸ್ತುಗಳು ಮುಳುಗುವಷ್ಟು ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಒಂದು ಸೀಟಿ ಹೊಡೆದ ಬಳಿಕ ಆಫ್ ಮಾಡಿಕೊಳ್ಳಿ. ಈಗ ಈ ಪದಾರ್ಥಗಳು ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್ಗೆ ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ಇದು ಪೇಸ್ಟ್ ರೀತಿ ಇರಲಿ. ಈಗ ಕುಕ್ಕರ್ ಮುಚ್ಚಳ ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಿ. ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು.
ಎಲ್ಲಾ ವಸ್ತುಗಳು ಚೆನ್ನಾಗಿ ಪುಡಿ ಪುಡಿಯಾಗುವಂತೆ ಕಿವುಚಿಕೊಳ್ಳಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ನಂತರ ಜೀರಿಗೆ, ಸಾಸಿವೆ, ಇಂಗು, ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿಕೊಂಡು ನೇರವಾಗಿ ಚಟ್ನಿಗೆ ಹಾಕಿಕೊಳ್ಳಿ. ನಂತರ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಈಗ ಮಿಕ್ಸಿಯಲ್ಲಿ ಪೇಸ್ಟ್ ಮಾಡಿದ್ದ ಮೆಣಸಿನ ಪೇಸ್ಟ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಬದನೆಕಾಯಿ ಚಟ್ನಿ ರೆಡಿಯಾಗುತ್ತದೆ. ಇದನ್ನು ನೀವು 1 ವಾರ ಇಟ್ಟು ಸವಿಯಬಹುದು, ಬಹುಬೇಗ ಹಾಳಾಗುವುದಿಲ್ಲ. ನೀವು ಕೂಡ ಒಮ್ಮೆ ಮನೆಯಲ್ಲಿ ಈ ರೀತಿ ಚಟ್ನಿ ಮಾಡಲು ಪ್ರಯತ್ನಿಸಿ ನೋಡಿ.



Click it and Unblock the Notifications