Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜೀರ್ಣಕ್ರಿಯೆ ಸುಧಾರಿಸುವ ಬೆಲ್ಲದ ನಿಂಬೆ ಶರ್ಬತ್: ಮಾಡೋದು ಹೇಗೆ ಗೊತ್ತಾ?
ಬೇಸಿಗೆಯಲ್ಲಿ ನಿಮಗೆ ಹೆಚ್ಚು ನೀರಿನ ಅವಶ್ಯಕತೆ ಇದ್ದೇ ಇರಲಿದೆ. ದೇಹ ದಣಿಯದಂತೆ ಕೆಲಸ ಮಾಡಬೇಕಾದರೆ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿರಲಿದೆ. ಹಾಗೆ ಹೆಚ್ಚು ಹೆಚ್ಚು ನೀರು ಕುಡಿಯುವುದು ನಿಮ್ಮ ದೇಹವು ಸಮತೋಲನ ಕಾಪಾಡುವುದಕ್ಕೆ ಸಹಕಾರಿಯಾಗಲಿದೆ. ಹಾಗೆ ಮಧ್ಯಾಹ್ನದ ಬಿಸಿಲಿನಲ್ಲಿ ನೀವು ದಣಿವಾದಾಗ ನೀರಿನ ಬದಲಾಗಿ ಜ್ಯೂಸ್, ಐಸ್ ಕ್ರೀಮ್ ಸಹ ಸವಿದಿರುತ್ತೀರಿ.
ಹಾಗೆ ಬಿಸಿಲಿನಲ್ಲಿ ನಿಮಗೆ ಆರಾಮ ನೀಡುವ ಹಲವು ಪಾನಿಯಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಸಹ ಒಂದು. ಹಲವರು ಸುಲಭವಾಗಿ ಮನೆಯಲ್ಲಿ ನೀರು ನಿಂಬೆ ಜ್ಯೂಸ್ ಮಿಕ್ಸ್ ಮಡಿ ಸವಿಯಲು ಮುಂದಾಗೋದು ನೋಡಬಹುದು. ಇನ್ನು ಅಂಗಡಿಗಳಲ್ಲಿ ಆದರೆ ಇದಕ್ಕೆ ಹಲವು ರೀತಿಯ ರುಚಿಯನ್ನು ಸೇರಿಸಿ ಮಾರಾಟ ಮಾಡುತ್ತಾರೆ. ಅದ್ರಲ್ಲೂ ಹೆಚ್ಚಿನವರು ಏಲಕ್ಕಿ, ತಂಪಿನಕಾಳು ಸೇರಿ ಹಲವು ರುಚಿಯಲ್ಲಿ ಸವಿಯಬಹುದು.

ಹಾಗೆ ಈ ನಿಂಬೆ ಹಣ್ಣಿನ ಜ್ಯೂಸ್ ಅನ್ನು ಹಲವು ಬಗೆಯಲ್ಲಿ ಮಾಡಬಹುದು. ನಾವಿಂದು ಬೆಲ್ಲವನ್ನು ಬಳಸಿಕೊಂಡು ನಿಂಬೆ ಶರ್ಬತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನಿಂಬೆ ಶರ್ಬತ್ ಬಿಸಿಲಿನಲ್ಲಿ ನಿಮ್ಮ ದೇಹವನ್ನು ತಂಪಾಗಿಡಲಿದೆ. ಹಾಗೆ ಜೀರ್ಣಕ್ರಿಯೆ ದೃಷ್ಟಿಯಿಂದ ಈ ಶರ್ಬತ್ ಬಹಳ ಪ್ರಮುಖವಾಗಿರಲಿದೆ. ನೀವು ಜೀರ್ಣಕ್ರಿಯೆ ಸಮಸ್ಯೆ ಹೊಂದಿದ್ದರೆ ಈ ಬೆಲ್ಲ ಬಳಸಿ ಮಾಡುವ ನಿಂಬೆ ಶರ್ಬತ್ ಕುಡಿದು ನೋಡಿ.
ಹಾಗಾದ್ರೆ ಈ ನಿಂಬೆ ಶರ್ಬತ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೆಲ್ಲದ ನಿಂಬೆ ಶರ್ಬತ್ ಮಾಡಲು ಬೇಕಾಗುವ ವಸ್ತುಗಳು
- ನಿಂಬೆ ಹಣ್ಣು
- ಬೆಲ್ಲ
- ಏಲಕ್ಕಿ
- ಬ್ಲಾಕ್ ಸಾಲ್ಟ್
ಬೆಲ್ಲದ ನಿಂಬೆ ಶರ್ಬತ್ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್ಗೆ 2 ಕಪ್ ನೀರು ಹಾಕಿಕೊಳ್ಳಿ. ಅಥವಾ ನಿಮಗೆ ಎಷ್ಟು ಜ್ಯೂಸ್ ಬೇಕೋ ಅಷ್ಟು ನೀರು ಹಾಕಿ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಬೆಲ್ಲ ಚೆನ್ನಾಗಿ ಕರಗಬೇಕು. ನಂತರ ಇದಕ್ಕೆ ಕಾಲು ಸ್ಪೂನ್ ಕಪ್ಪು ಉಪ್ಪು (ಬ್ಲಾಕ್ ಸಾಲ್ಟ್) ಸೇರಿಸಿಕೊಳ್ಳಿ. ಇದು ನಿಮ್ಮ ಜೀರ್ಣಕ್ರಿಯೆಗೆ ಬಹಳ ಮುಖ್ಯ.
ಬೆಲ್ಲ , ಉಪ್ಪು ಕರಗಿದ ಬಳಿಕ ಇದಕ್ಕೆ ಶುಂಠಿ ಚೂರನ್ನು ಸೇರಿಸಿಕೊಳ್ಳಿ. ಚೆನ್ನಾಗಿ ಈ ಎಲ್ಲಾ ವಸ್ತುಗಳು ಮಿಕ್ಸ್ ಆಗುವಂತೆ ಮಾಡಿಕೊಳ್ಳಿ. ಅನಂತರ ಒಂದು ನಿಂಬೆ ಹಣ್ಣನ್ನು ಕತ್ತರಿಸಿಕೊಂಡು ಅದರ ರಸವನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಮತ್ತೆ ಮಿಶ್ರಣ ಮಾಡಿಕೊಳ್ಳಿ ಎಷ್ಟು ಪ್ರಮಾಣದಲ್ಲಿ ರಸ ಬೇಕು ಎಂಬುದನ್ನು ನೋಡಿಕೊಳ್ಳಿ.
ಇದಕ್ಕೆ ಏಲಕ್ಕಿ ಅಥವಾ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಜರಡಿ ಹಿಡಿದು ಗ್ಲಾಸ್ಗೆ ಹಾಕಿಕೊಂಡು ಫ್ರಿಡ್ಜ್ನಲ್ಲಿ ಇಟ್ಟು ತಣ್ಣಗಾದ ಬಳಿಕ ಸವಿಯಬಹುದ. ಅಥವಾ ಹಾಗೆಯೇ ಕುಡಿಯಲು ನೀಡಬಹುದು. ಹಾಗೆ ಇದು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮವಾಗಿರಲಿದೆ. ಬೇಸಿಗೆಯ ಸಮಯದಲ್ಲಿ ನೀವು ಸೇವಿಸುವ ಆಹಾರವು ಜೀರ್ಣವಾಗಲು ಹೆಚ್ಚು ನೀರಿನ ಅಗತ್ಯವಿರಲಿದೆ. ಒಂದು ವೇಳೆ ನಿಮ್ಮಲ್ಲಿ ಈ ರೀತಿ ಜೀರ್ಣಕ್ರಿಯೆ ಸಮಸ್ಯೆಗಳಿದ್ದರೆ ಈ ಶರ್ಬತ್ ಕುಡಿಯುವುದು ಉತ್ತಮ.



Click it and Unblock the Notifications
