Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಬಾಯಲ್ಲಿ ನೀರು ತರಿಸುತ್ತೆ ನಿಂಬೆ ಉಪ್ಪಿನಕಾಯಿ..! ಮಳೆಗಾಲದಲ್ಲಿ ಇದಕ್ಕಿಂತ ರುಚಿ ಮತ್ತೊಂದಿಲ್ಲ!!
ಉಪ್ಪಿನಕಾಯಿ ಎಂದರೆ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಊಟದ ಉಪ್ಪಿನಕಾಯಿ ಇದ್ದರೆ ಆ ಊಟದ ರುಚಿಯೇ ಬೇರೆ. ಹಲವರು ಉಪ್ಪಿನಕಾಯಿ ಇಲ್ಲದಿದ್ದರೆ ಊಟವನ್ನೇ ಮಾಡುವುದಿಲ್ಲ. ಅಂದರೆ ಉಪ್ಪಿನಕಾಯಿಗೆ ಅಷ್ಟೊಂದು ಹೊಂದಿಕೊಂಡಿರುತ್ತಾರೆ. ಈಗಂತು ಮಾರುಕಟ್ಟೆಯಲ್ಲಿ ಎಷ್ಟೊಂದು ವಿಧದ ಉಪ್ಪಿನಕಾಯಿ ಬಂದಿವೆ ಎಂದರೆ ನೀವು ಊಹಿಸಲು ಸಹ ಸಾಧ್ಯವಿಲ್ಲ.
ಮಾವಿನ ಉಪ್ಪಿನಕಾಯಿ, ನಿಂಬು, ಟೊಮೆಟೋ ಸೇರಿ ಎಲ್ಲಾ ತರಕಾರಿಗಳ ಉಪ್ಪಿನಕಾಯಿ ಸಹ ನಮಗೆ ಸಿಗುತ್ತವೆ. ಇದ್ರಲ್ಲಿ ಒಂದಕ್ಕಿಂತ ಮತ್ತೊಂದು ಬಲು ರುಚಿಯಾಗಿರುತ್ತೆ. ಕರಾವಳಿ, ಮಲೆನಾಡ ಕಡೆಯಂತೂ ಮಿಡಿಮಾವಿನಕಾಯಿ ಉಪ್ಪಿನಕಾಯಿ ಫೇಮಸ್. ಜೊತೆಗೆ ಒಮ್ಮೆ ಉಪ್ಪಿನಕಾಯಿ ಹಾಕಿದರೆ ವರ್ಷಕ್ಕೂ ಹೆಚ್ಚು ಕಾಲ ಇಟ್ಟು ಸವಿಯುತ್ತಾರೆ.

ರಸಗ್ರಂಥಿಗಳಲ್ಲಿ ನೀರೂರಿಸುವ ಉಪ್ಪಿನಕಾಯಿ ಹೆಚ್ಚು ನೀರು, ಕಡಿಮೆ ಫ್ಯಾಟ್ ಹಾಗೂ ಪ್ರೋಟೀನ್ ಹೊಂದಿರುತ್ತದೆ. ಉಪ್ಪಿನ ನೀರಿನಲ್ಲಿ ನೆನೆಯುವುದರಿಂದ ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್‌ಗಳೂ ಇರುತ್ತವೆ. ಇನ್ನು ನಿಂಬು ಉಪ್ಪಿನಕಾಯಿ ಹಲವರ ಫೇವರಿಟ್, ಏಕೆಂದರೆ ಇದರ ಹುಳಿಯ ಅಂಶವೂ ಸೇರಿ ಬಾಯಿಗೆ ಒಳ್ಳೆಯ ರುಚಿ ನೀಡಲಿದೆ. ಮೊಸರು ಊಟದ ಜೊತೆಗೆ ಒಂದು ಪೀಸ್ ನಿಂಬು ಉಪ್ಪಿನಕಾಯಿ ಇದ್ದರೆ ಅಂದಿನ ಊಟ ಒಂದು ತುತ್ತು ಹೆಚ್ಚು ಸೇರಿಸಬಹುದು.
ಹಾಗಾದ್ರೆ ಈ ನಿಂಬು ಉಪ್ಪಿನಕಾಯಿಯನ್ನ ಮನೆಯಲ್ಲೇ ಮಾಡುವುದು ಹೇಗೆ? ಮಾರುಕಟ್ಟೆಯಲ್ಲಿ ಹತ್ತಾರು ವಿಧದ ನಿಂಬು ಉಪ್ಪಿನಕಾಯಿ ಸಿಗುತ್ತವೆ ಬೆಲೆಯೂ ದುಬಾರಿಯಾಗಿದೆ. ಆದ್ರೆ ಮನೆಯಲ್ಲೇ ನಿಂಬು ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವುದು ಹೇಗೆ? ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಂಬು ಉಪ್ಪಿನಕಾಯಿ ಮಾಡಲು ಬೇಕಾಗುವ ಪದಾರ್ಥಗಳು
- ನಿಂಬೆ - 10
- ಕೆಂಪು ಮೆಣಸಿನ ಪುಡಿ- 4 ಟೀಸ್ಪೂನ್
- ಉಪ್ಪು - 1/2 ಕಪ್
- ಮೆಣಸು 1 ಟೀಸ್ಪೂನ್
- ಮೆಂತ್ಯ - 1 tbsp
- ಕಾಳು ಮೆಣಸು
- ಇಂಗು- 1/4 ಟೀಸ್ಪೂನ್
- ಸಾಸಿವೆ - 1 tbsp
- ಎಣ್ಣೆ 1/2 ಕಪ್
ನಿಂಬು ಉಪ್ಪಿನಕಾಯಿ ಮಾಡುವುದು ಹೇಗೆ?
ನಿಂಬೆ ಹಣ್ಣನ್ನು ಆರಿಸಿಕೊಳ್ಳುವುದರಿಂದ ಇದರ ತಯಾರಿ ಆರಂಭಗಾಗುತ್ತದೆ. ಚೆನ್ನಾಗಿರು ನಿಂಬೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ನಿಂಬೆ ಹಾಳಾಗಿರುವುದು, ಕಪ್ಪಾಗಿರಬಾರದು. ಅಲ್ಲದೆ ನಿಂಬೆಯನ್ನು ಮೊದಲು ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಿ. ನೀರು ಇರಬಾರದು. ಕೆಲವೊಮ್ಮೆ ನೀವು ನಿಂಬೆಯನ್ನು ಕತ್ತರಿಸಿ ಅದಕ್ಕೆ ಉಪ್ಪು ಹಾಕಿ ಒಂದು ದಿನ ಇಟ್ಟು ಸಹ ಮಾಡುತ್ತಾರೆ. ಆದರೆ ಹಾಗೆಯೇ ಮಾಡಬಹುದು.
ಮೊದಲು ಪಾತ್ರೆಗೆ ಮೆಂತ್ಯ ಹಾಕಿ ಚೆನ್ನಾಗಿ ಹುರಿದುಕೊಂಡು ತೆಗೆದಿಡಿ. ಈಗ ಅದೇ ಪಾತ್ರೆಗೆ ಸಾಸಿವೆ ಹಾಕಿ ಹುರಿದುಕೊಂಡು ತೆಗೆದುಕೊಳ್ಳಿ, ಬಳಿಕ ಕಾಳು ಮೆಣಸು ಸಹ ಹಾಕಿ ಹುರಿದುಕೊಳ್ಳಿ. ಈಗ ಪಾತ್ರೆಗೆ ಎಣ್ಣೆ ಹಾಕಿ ಕಾಳು ಮೆಣಸು, ಇಂಗು ಹಾಕಿಕೊಂಡು ಒಲೆ ಆಫ್ ಮಾಡಿ. ಬಳಿಕ ಈಗಾಗಲೇ ಫ್ರೈ ಮಾಡಿಕೊಂಡ ವಸ್ತುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಹುಡಿ ಮಾಡಿಕೊಳ್ಳಿ.
ಈಗ ನಿಂಬೆ ಹಣ್ಣು ಕತ್ತರಿಸಿಕೊಳ್ಳಿ. ಅಥವಾ ಮೊದಲೇ ಹೆಚ್ಚಿಕೊಂಡಿರುವ ನಿಂಬೆಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಅರಶಿಣ ಹಾಕಿಕೊಳ್ಳಿ, ನಂತರ ಖಾರದ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆಗಳನ್ನು ಹಾಕಿ ಮತ್ತೊಮ್ಮೆ ಕಲಸಿಕೊಳ್ಳಿ.
ಈಗ ಇಂಗು ಮತ್ತು ಕಾಳು ಮೆಣಸು ಹಾಕಿ ಕಾಯಿಸಿಕೊಂಡಿದ್ದ ಎಣ್ಣೆಯನ್ನು ಅದಕ್ಕೆ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡುತ್ತಾ ಹೋಗಿ. ಎಣ್ಣೆ ಸ್ವಲ್ಪ ಹೆಚ್ಚಾಗಿರಲಿ. ನಿಮಗೆ ನೀರು ಬೇಕಿದ್ದರೆ ಹಾಕಿಕೊಳ್ಳಬಹುದು. ಇದನ್ನು ಪ್ಲಾಸ್ಟಿಕ್ ಬಾಟಲಿ ಬಿಟ್ಟು ಬೇರೆ ಗಾಜು, ಭರಣಿಯಲ್ಲಿ ಹಾಕಿ 20 ರಿಂದ 25 ದಿನಗಳ ಕಾಲ ಇಟ್ಟರೆ ನಿಂಬೆ ಹಣ್ಣಿನ ಉಪ್ಪಿನಕಾಯಿ ರೆಡಿಯಾಗುತ್ತದೆ.



Click it and Unblock the Notifications
