Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಲೆಮನ್, ಕೊತ್ತಂಬರಿ ಇದ್ರೆ ಸಾಕು! 10 ನಿಮಿಷದಲ್ಲಿ ಈ ಸೂಪ್ ರೆಡಿ.. ಶುಗರ್ ಇದ್ದವರೂ ಕುಡಿಯಬಹುದು
ಸಕ್ಕರೆ ಕಾಯಿಲೆ ಇದ್ದವರೂ ಕುಡಿಯಬಹುದು! ಕೇವಲ 15 ನಿಮಿಷದಲ್ಲಿ ಮಾಡಿ ಈ ರುಚಿಕರ ಆರೋಗ್ಯಕರ ಸೂಪ್. ಹೌದು, ಸಂಜೆ ಟೈಮ್‌ನ ತಂಪು ವಾತಾವರಣವಾಗಲಿ ಅಥವಾ ಬಿಸಿ ವಾತಾವರಣವಾಗಲಿ, ಮನಸ್ಸಿಗೆ ರಿಫ್ರೆಶ್ ಅನಿಸುವ ಏನಾದರೂ ಕುಡಿಯಬೇಕೆಂಬ ಆಸೆಯಿರಲಿ, ಒಂದು ಬಿಸಿಬಿಸಿ ಸೂಪ್ ಯಾವಾಗಲೂ ಉತ್ತಮ ಆಯ್ಕೆ ಆಗಿರುತ್ತದೆ. ಬಣ್ಣಬಣ್ಣದ ತರಕಾರಿಗಳು, ತಾಜಾ ಕೊತ್ತಂಬರಿ ಸೊಪ್ಪು (Coriander) ಮತ್ತು ನಿಂಬೆಯ (Lemon) ಹುಳಿಯ ಪರಿಪೂರ್ಣ ಮಿಶ್ರಣದಿಂದ ಕೂಡಿದ ಈ ಲೆಮನ್ ಕೊತ್ತಂಬರಿ ವೆಜಿಟೇಬಲ್ ಸೂಪ್ (Lemon Coriander Vegetable Soup), ನಿಮ್ಮ ಆರೋಗ್ಯ ಮತ್ತು ರುಚಿ ಇವೆರಡನ್ನೂ ಸಂತೃಪ್ತಿಪಡಿಸುತ್ತದೆ.
ಇದು ಕೇವಲ ಒಂದು ಲಘು ಆಹಾರವಲ್ಲ. ಬದಲಾಗಿ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವ ಶಕ್ತಿ ಹೊಂದಿದೆ. ಲೆಮನ್ ಕೊತ್ತಂಬರಿ ವೆಜಿಟೇಬಲ್ ಸೂಪ್ ಆರೋಗ್ಯಕ್ಕೂ, ರುಚಿಗೂ ಎರಡಕ್ಕೂ ಪರಿಪೂರ್ಣ. ಈ ಸೂಪ್‌ನಲ್ಲಿ ನಿಂಬೆ ರಸವು ದೇಹವನ್ನು ಡಿಟಾಕ್ಸ್ ಮಾಡುತ್ತದೆ, ಕೊತ್ತಂಬರಿ ಸೊಪ್ಪು ವಿಟಮಿನ್‌ಗಳ ಜೊತೆಗೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕಡಿಮೆ ಸಮಯದಲ್ಲಿ, ಸುಲಭವಾಗಿ ಮನೆಯಲ್ಲೇ ಈ ಅದ್ಭುತ ಸೂಪ್ ತಯಾರಿಸುವುದು ಹೇಗೆ (Lemon Coriander Vegetable Soup Recipe) ಎಂಬುದನ್ನು ತಿಳಿಯೋಣ ಬನ್ನಿ.

ಈ ಸೂಪ್ ಏಕೆ ಆರೋಗ್ಯಕರ?
ಈ ಸೂಪ್ ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯದ ವಿಚಾರದಲ್ಲೂ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಅದರ ನೈಸರ್ಗಿಕ ಪದಾರ್ಥಗಳು.
ನಿಂಬೆ ರಸ: ವಿಟಮಿನ್ 'ಸಿ'ಯ ಅತ್ಯುತ್ತಮ ಮೂಲವಾಗಿರುವ ನಿಂಬೆ ರಸವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಸೂಪ್‌ಗೆ ಇದು ಒಂದು ವಿಶಿಷ್ಟವಾದ, ಹುಳಿಯ ರುಚಿಯನ್ನು ನೀಡುತ್ತದೆ.
ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ಸೂಪ್‌ಗೆ ಒಂದು ತಾಜಾ ಮತ್ತು ಆಹ್ಲಾದಕರ ಪರಿಮಳವನ್ನು ನೀಡುತ್ತದೆ.
ಶುಂಠಿ ಮತ್ತು ಬೆಳ್ಳುಳ್ಳಿ: ಇವೆರಡೂ ಆ್ಯಂಟಿ-ಇನ್‌ಫ್ಲಮೇಟರಿ (ಉರಿಯೂತ ನಿವಾರಕ) ಗುಣಗಳನ್ನು ಹೊಂದಿವೆ. ಇವುಗಳು ಜೀರ್ಣಕ್ರಿಯೆ ಸುಧಾರಿಸುತ್ತವೆ. ಶೀತ, ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.
ತರಕಾರಿಗಳು: ಕ್ಯಾರೆಟ್, ಮಶ್ರೂಮ್ ಮತ್ತು ಇತರೆ ತರಕಾರಿಗಳಲ್ಲಿ ವಿಟಮಿನ್, ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿದೆ. ಇದು ಸೂಪ್ ಪೌಷ್ಟಿಕಾಂಶ ಭರಿತವಾಗಿದೆ.
ಲೆಮನ್ ಕೊತ್ತಂಬರಿ ವೆಜಿಟೇಬಲ್ ಸೂಪ್‌ಗೆ ಬೇಕಾಗುವ ಸಾಮಗ್ರಿಗಳು
• ಕೊತ್ತಂಬರಿ ಸೊಪ್ಪು
• ನಿಂಬೆ ರಸ
• ಶುಂಠಿ
• ಬೆಳ್ಳುಳ್ಳಿ
• ಹಸಿಮೆಣಸು
• ಕ್ಯಾರೆಟ್
• ಮಶ್ರೂಮ್
• ನೀರು
• ರುಚಿಗೆ ತಕ್ಕಷ್ಟು ಉಪ್ಪು
• ಕಾಳುಮೆಣಸು
• ಕಾರ್ನ್ ಫ್ಲೋರ್
• ಎಣ್ಣೆ

ಲೆಮನ್ ಕೊತ್ತಂಬರಿ ವೆಜಿಟೇಬಲ್ ಸೂಪ್ ತಯಾರಿಸುವ ವಿಧಾನ
ಮೊದಲು ಎಲ್ಲಾ ತರಕಾರಿಗಳನ್ನು ಮತ್ತು ಕೊತ್ತಂಬರಿಯನ್ನು ಸ್ವಚ್ಛವಾಗಿ ತೊಳೆಯಿರಿ. ಈಗ ಕೊತ್ತಂಬರಿ ಸೊಪ್ಪು, ಕ್ಯಾರೆಟ್, ಮಶ್ರೂಮ್ ಮತ್ತು ಹಸಿಮೆಣಸನ್ನು ಹೆಚ್ಚಿಕೊಳ್ಳಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ತುರಿದುಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಕ್ಯಾರೆಟ್ ಮತ್ತು ಮಶ್ರೂಮ್ ಹಾಕಿ ಸುಮಾರು 3 ನಿಮಿಷಗಳ ಕಾಲ ಹುರಿಯಿರಿ.
ಇದಕ್ಕೆ 4 ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕುದಿಯಲು ಬಿಡಿ. ಒಂದು ಬಟ್ಟಲಿನಲ್ಲಿ ಕಾರ್ನ್ ಫ್ಲೋರ್ ಅನ್ನು ಸ್ವಲ್ಪ ನೀರಿನಲ್ಲಿ ಕಲಸಿ ಸೂಪ್‌ಗೆ ಹಾಕಿ.
ಸೂಪ್ ಗಟ್ಟಿಯಾಗುವವರೆಗೆ, ಸುಮಾರು 2-3 ನಿಮಿಷಗಳ ಕಾಲ ನಿರಂತರವಾಗಿ ತಿರುಗಿಸುತ್ತಾ ಬೇಯಿಸಿ. ನಂತರ ಒಲೆ ಆಫ್ ಮಾಡಿ. ಇದಕ್ಕೆ ನಿಂಬೆ ರಸ ಬೆರೆಸಿ. ಹಾಗೆಯೇ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಿಸಿಯಾದ ಸೂಪ್ ಅನ್ನು ಬಟ್ಟಲಿಗೆ ಹಾಕಿ. ಅದರ ಮೇಲೆ ಸ್ವಲ್ಪ ಕಾಳುಮೆಣಸು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇಷ್ಟು ಮಾಡಿದರೆ ಸಾಕು, ಲೆಮನ್ ಕೊತ್ತಂಬರಿ ವೆಜಿಟೇಬಲ್ ಸೂಪ್ ಸವಿಯಲು ಸಿದ್ಧ. ಇದು ಅತ್ಯಂತ ಟೇಸ್ಟಿ ಮತ್ತು ಹೆಲ್ದಿ ಆಗಿರುತ್ತದೆ.



Click it and Unblock the Notifications