Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇಮ್ಯೂನಿಟಿ ಹೆಚ್ಚಾಗಬೇಕಾ? ಈ ಸೂಪ್ ಕುಡಿರಿ ಸಾಕು.. ಶೀತ, ಕೆಮ್ಮು ದೂರ
ಇಮ್ಯೂನಿಟಿ ಪವರ್ ಹೆಚ್ಚಿಸಲು ಲೆಮನ್ ಕೊರಿಯಾಂಡರ್ ಸೂಪ್! ಇದು ಆರೋಗ್ಯಕ್ಕೂ, ಚಳಿಗಾಲದ ಉಷ್ಣಕ್ಕೂ ಸೂಪರ್. ಹೌದು, ಇತ್ತೀಚಿನ ದಿನಗಳಲ್ಲಿ ಸೂಪ್ (soup) ಜನಪ್ರಿಯ ಆಹಾರ ಕ್ರಮವಾಗಿದೆ. ಇದು ಸುಲಭವಾಗಿ ಜೀರ್ಣವಾಗುವ ಹಾಗೂ ಪೋಷಕಾಂಶ ಭರಿತವಾದ ಒಂದು ಪಾನೀಯ. ಸೂಪ್ ಕುಡಿಯುವುದರಿಂದ ಹಸಿವು ನಿಯಂತ್ರಣಕ್ಕೆ ಬರುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತವೆ ಮತ್ತು ತೂಕ ಇಳಿಕೆಗೂ ಸಹಕಾರಿಯಾಗಿದೆ. ನಾವಿಂದು ಈ ಲೇಖನದಲ್ಲಿ ನಿಂಬೆ ಕೊತ್ತಂಬರಿ ಸೂಪ್ (lemon coriander soup) ತಯಾರಿಸುವ ವಿಧಾನದ ಬಗ್ಗೆ ತಿಳಿಸಿದ್ದೇವೆ.
ನಿಂಬೆ ಕೊತ್ತಂಬರಿ ಸೂಪ್ ತಯಾರಿಸುವುದು ಬಹಳ ಸುಲಭ. ಈ ಸೂಪ್ನಲ್ಲಿರುವ ನಿಂಬೆ ಹಣ್ಣು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿಯಾಗಿದೆ. ಇದಲ್ಲದೆ, ಈ ಸೂಪ್ನಲ್ಲಿ ಕಡಿಮೆ ಕ್ಯಾಲೋರಿಗಳಿರುವುದರಿಂದ ತೂಕ ಇಳಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ನಿಂಬೆ ಕೊತ್ತಂಬರಿ ಸೂಪ್ ಒಂದು ಹಿತವಾದ, ಹುಳಿ ಮತ್ತು ಪರಿಮಳಯುಕ್ತ ಸೂಪ್ ಆಗಿದೆ. ಇದನ್ನು ತರಕಾರಿ ಸಾರು, ತಾಜಾ ಕೊತ್ತಂಬರಿ ಮತ್ತು ನಿಂಬೆ ರಸದಿಂದ ತಯಾರಿಸಲಾಗುತ್ತದೆ. ಇದು ಹಗುರವಾದ ಸೂಪ್ ಆಗಿದ್ದು, ಮಳೆಗಾಲ (ಋತುಮಾನ ಬದಲಾದಾಗ) ಬಂದಾಗ ಅಥವಾ ಬೆಚ್ಚಗಿನ ಮತ್ತು ಆರೋಗ್ಯಕರ ಏನನ್ನಾದರೂ ಸೇವಿಸಲು ಬಯಸಿದಾಗ ಸಾಮಾನ್ಯವಾಗಿ ಸವಿಯಲಾಗುತ್ತದೆ. ಈ ಸೂಪ್ಗೆ ತಾಜಾ ನಿಂಬೆ ಹಣ್ಣು, ಕೊತ್ತಂಬರಿ ಸೊಪ್ಪು, ತರಕಾರಿಗಳು ಮತ್ತು ಮಸಾಲೆ ಪದಾರ್ಥಗಳು ಬೇಕಾಗುತ್ತವೆ. ಮೊದಲಿಗೆ, ಸಣ್ಣಗೆ ಹೆಚ್ಚಿದ ತರಕಾರಿಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿಯಬೇಕು. ನಂತರ ನೀರು ಸೇರಿಸಿ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಬೇಕು.
ನಿಂಬೆ ಕೊತ್ತಂಬರಿ ಸೂಪ್ ತಯಾರಿಸಲು ಬೇಕಾದ ಪದಾರ್ಥಗಳು
• ತರಕಾರಿ ಸಾರು ಅಥವಾ ನೀರು - 4 ಕಪ್
• ತಾಜಾ ಕೊತ್ತಂಬರಿ (ಸಣ್ಣಗೆ ಹೆಚ್ಚಿದ) - 2 ಚಮಚ
• ಹಸಿ ಮೆಣಸಿನಕಾಯಿ - 1
• ಕಾರ್ನ್ಫ್ಲೋರ್ - 1 ಚಮಚ
• ನಿಂಬೆ ಹಣ್ಣಿನ ರಸ - 1 ಚಮಚ
• ತುರಿದ ಶುಂಠಿ - 1 ಚಮಚ
• ಜಜ್ಜಿದ ಬೆಳ್ಳುಳ್ಳಿ - 1 ಎಸಳು
• ಎಣ್ಣೆ ಅಥವಾ ಬೆಣ್ಣೆ - 1 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಕಾಳುಮೆಣಸು - ಅಗತ್ಯಕ್ಕೆ ತಕ್ಕಷ್ಟು

ನಿಂಬೆ ಕೊತ್ತಂಬರಿ ಸೂಪ್ ತಯಾರಿಸುವ ವಿಧಾನ
ಮೊದಲೇ ಹೇಳಿದಂತೆ, ಈ ಸೂಪ್ ಮಾಡುವ ವಿಧಾನವು ಸರಳವಾಗಿದೆ. ಮೊದಲಿಗೆ, ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಬೇಕು. ನಂತರ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ ಒಂದು ನಿಮಿಷ ಹುರಿಯಬೇಕು. ಹೀಗೆ ಮಾಡಿದರೆ ಸೂಪ್ ಅದ್ಭುತ ಪರಿಮಳ (ವಾಸನೆ) ಬರುತ್ತದೆ.
ನಂತರ, ತರಕಾರಿ ಸಾರನ್ನು (ವೆಜಿಟಬಲ್ ಸ್ಟಾಕ್) ಹಾಕಿ ಕುದಿಯಲು ಬಿಡಬೇಕು. ಸಾರು ಕುದಿಯಲು ಪ್ರಾರಂಭಿಸಿದಾಗ, 2 ಚಮಚ ನೀರಿನಲ್ಲಿ ಮಿಶ್ರಣ ಮಾಡಿದ ಒಂದು ಚಮಚ ಕಾರ್ನ್ಫ್ಲೋರ್ ಮಿಶ್ರಣವನ್ನು ಸೇರಿಸಬೇಕು. ಇದನ್ನು ನಿಧಾನವಾಗಿ ಸೇರಿಸುತ್ತಾ, ಸೂಪ್ ಸ್ವಲ್ಪ ದಪ್ಪವಾಗುವವರೆಗೆ ತಿರುಗಿಸುತ್ತಾ ಇರಬೇಕು.

ಅಂತಿಮ ಹಂತದಲ್ಲಿ, ಉರಿಯನ್ನು ಆಫ್ ಮಾಡಿ. ಈಗಾಗಲೇ ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು ಮತ್ತು ಒಂದು ನಿಂಬೆಯ ರಸವನ್ನು ಸೇರಿಸಬೇಕು. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಬೇಕು. ಇಷ್ಟು ಮಾಡಿದರೆ ಬಿಸಿ ಬಿಸಿಯಾದ ನಿಂಬೆ ಕೊತ್ತಂಬರಿ ಸೂಪ್ ಸಿದ್ಧ. ಇದನ್ನು ಬಿಸಿ ಇರುವಾಗಲೇ ಸವಿಯಬಹುದು. ಇದರ ಮೇಲೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿದರೆ, ರುಚಿ ಮತ್ತಷ್ಟು ಹೆಚ್ಚುತ್ತದೆ.



Click it and Unblock the Notifications
