Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಲೋಳೆ ಇಲ್ಲದೆ ಘಮ ಘಮ ಎನ್ನುವ ಬೆಂಡೆಕಾಯಿ ಸಾಂಬಾರ್ ಮಾಡಿ..!
ಕೆಲವರಿಗೆ ಈ ಬೆಂಡೆಕಾಯಿ ಅಂದ್ರೆ ಅಲರ್ಜಿ, ಅದರಿಂದ ಮಾಡುವ ಪಲ್ಯ, ಸಾಂಬಾರ್ ಯಾವುದೂ ಅವರಿಗೆ ಇಷ್ಟವಾಗುವುದಿಲ್ಲ. ಆದರೆ ಬೆಂಡೆಕಾಯಿ ಪಲ್ಯ ಹಾಗೂ ಅದರ ಸಾಂಬಾರ್ ರುಚಿ ಒಮ್ಮೆ ನೋಡಿದವರು ಪದೇ ಪದೇ ಅದನ್ನು ಸವಿಯಲು ಇಷ್ಟಪಡುತ್ತಾರೆ.
ಕೆಲವರು ಬೆಂಡೆಕಾಯಿ ಲೋಳೆಯಾಗಿರುತ್ತೆ ಎನ್ನುವ ಕಾರಣಕ್ಕೆ ಅದನ್ನು ಸವಿಯಲು ಇಷ್ಟ ಪಡುವುದಿಲ್ಲ. ಬೆಂಡೆಕಾಯಿಗೆ ಕಾಯಿ ಹಾಕಿ ಮಾಡುವ ಪಲ್ಯವಂತು ಬಾಯಿ ಚಪ್ಪರಿಸಿ ಸವಿಯಬಹುದು. ಸಾಂಬಾರ್ ಮಾಡಿದರು ಸಹ ಅದರ ರುಚಿಗೆ ಸರಿ ಸಾಟಿಯೇ ಇಲ್ಲ.

ಇನ್ನು ಇದರ ಸಾಂಬಾರ್ ಮಾಡುವುದು ತುಂಬಾನೆ ಸುಲಭ. ಲೋಳೆಯಾಗಿರದಂತೆ ಬೆಂಡೆಕಾಯಿಯ ಸಾಂಬಾರ್ ಮಾಡಿದರೆ ಅದರ ಘಮಲಿಗೆ ಊಟ ಮತ್ತಷ್ಟು ಚೆನ್ನಾಗಿ ಮಾಡಬಹುದು. ಹಾಗಾದ್ರೆ ನಾವಿಂದು ಈ ಬೆಂಡೆಕಾಯಿಯ ಸಾಂಬಾರ್ ಮಾಡುವುದು ಹೇಗೆ ಎಂಬ ಕುರಿತು ತಿಳಿದುಕೊಳ್ಳೋಣ.
ಲೋಳೆ ಆಗಿರದಂತೆ ಬೆಂಡೆಕಾಯಿಯ ಸಾಂಬಾರ್ ಮಾಡುವುದು ಹೇಗೆ? ಈ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆಕಾಯಿ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ
- ತೊಗರಿ ಬೇಳೆ
- ಜೀರಿಗೆ
- ಬೆಳ್ಳುಳ್ಳಿ
- ಒಣಮೆಣಸು
- ಸಾಸಿವೆ
- ಕರಿಬೇವು
- ಎಣ್ಣೆ
- ಇಂಗು
- ಟೊಮೆಟೋ
- ಈರುಳ್ಳಿ
- ಹುಣಸೆ ಹುಳಿ
- ಕೊತ್ತಂಬರಿ ಸೊಪ್ಪಿ
- ಉಪ್ಪು
ಬೆಂಡೆಕಾಯಿ ಸಾಂಬಾರ್ ಮಾಡುವ
ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಕತ್ತರಿಸಿಕೊಂಡಿರುವ ಬೆಂಡೆಕಾಯಿಯನ್ನು ಹಾಕಿಕೊಳ್ಳಿ. ಈ ರೀತಿ ಫ್ರೈ ಮಾಡುವುದರಿಂದ ಬೆಂಡೆಕಾಯಿಯ ಲೋಳೆ ಅಂಶ ಹೋಗುತ್ತದೆ. 4 ರಿಂದ 5 ನಿಮಿಷ ಚೆನ್ನಾಗಿ ಕರಿದುಕೊಂಡರೆ ಸಾಕಾಗುತ್ತದೆ. ನಂತರ ಬೆಂಡೆಕಾಯಿಯನ್ನು ಬದಿಗಿಟ್ಟುಕೊಳ್ಳಿ.
ನಂತರ ಒಂದು ಕುಕ್ಕರ್‌ನಲ್ಲಿ ಬೇಳೆ ಹಾಕಿಕೊಂಡು ಬೇಯಿಸಿಕೊಳ್ಳಿ. ನೀವು ಎಲ್ಲಾ ಸಾಂಬಾರ್‌ಗೆ ಬೇಯಿಸಿಕೊಳ್ಳುವಂತೆಯೆ ಬೇಳೆ ಬೇಯಿಸಿಕೊಳ್ಳಿ. ಈ ವೇಳೆಯನ್ನು ಪುಡಿ ಮಾಡಿಕೊಳ್ಳಿ. ಇದೀಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ, ಸಾಸಿವೆ, ಜೀರಿಗೆ, ಒಣಮೆಣಸು, ಬೆಳ್ಳುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
ಫ್ರೈ ಮಾಡಿದ ಮೇಲೆ ಕತ್ತರಿಸಿದ ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಬೆಂದ ಬಳಿಕ ಇದಕ್ಕೆ ಟೊಮೆಟೋ ಹಾಕಿಕೊಳ್ಳಿ. 2 ನಿಮಿಷ ಬಳಿಕ ಇದಕ್ಕೆ ಮೊದಲು ಫ್ರೈ ಮಾಡಿಕೊಂಡ ಬೆಂಡೆಕಾಯಿಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಬೇಯಿಸಿಕೊಡಿರುವ ಬೇಳೆಯನ್ನು ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಿಮಗೆ ಎಷ್ಟು ತೆಳು ಅಥವಾ ದಪ್ಪ ಬೇಕೋ ಅಷ್ಟು ನೀರು ಹಾಕಿಕೊಳ್ಳಿ. ಬಳಿಕ ಇದಕ್ಕೆ ಖಾರದ ಪುಡಿ, ಅರಶಿಣ, ಸಾಂಬಾರ್ ಪುಡಿ ಹಾಕಿಕೊಳ್ಳಿ. ಬಳಿಕ ಇದಕ್ಕೆ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಹುಣಸೆ ಹುಳಿ, ಕೊತ್ತಂಬರಿ ಸೊಪ್ಪು ಹಾಕಿ ಸೇರಿಸಿ ಮಿಶ್ರಣ ಮಾಡಿ ಕುದಿಬರಲು ಬಿಡಿ. 5 ನಿಮಿಷ ಕುದಿಬಂದರೆ ಸಾಕು ನಿಮ್ಮ ಮುಂದೆ ಬೆಂಡೆಕಾಯಿ ಸಾಂಬಾರ್ ರೆಡಿಯಾಗುತ್ತದೆ.



Click it and Unblock the Notifications
