Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಊಟಕ್ಕೆ ಮತ್ತಷ್ಟು ರುಚಿ ನೀಡುತ್ತೆ ಬೆಂಡೆಕಾಯಿ ಮಸಾಲ ಫ್ರೈ
ಬೆಂಡೆಕಾಯಿ ಬಳಸಿ ನಾವು ಸಾಂಬಾರು ಮಾಡುವುದು ಹೇಗೆ ಎಂಬುದನ್ನು ನೋಡಿದ್ದೆವು. ಆದ್ರೆ ಈಗ ಈ ಬೆಂಡೆಕಾಯಿಯ ಮಸಾಲ ಫ್ರೈ ಕುರಿತು ತಿಳಿದುಕೊಳ್ಳೋಣ. ಬಂಡೆಕಾಯಿ ಪಲ್ಯ ಹಾಗೂ ಮಸಾಲ ಫ್ರೈ ಎರಡೂ ಸಹ ಊಟಕ್ಕೆ ಒಳ್ಳೆಯ ರುಚಿ ನೀಡಲಿದೆ. ಅದರಲ್ಲೂ ಈ ಬೆಂಡೆಕಾಯಿ ಫ್ರೈ ಊಟದ ಜೊತೆ ಇದ್ದರೆ ಅದರ ರುಚಿಯೇ ಬೇರೆ.
ಕೆವಲರು ಊಟದ ಜೊತೆಗೆ ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿ ತಿನ್ನುವಂತೆಯೇ ಈ ಬೆಂಡೆಕಾಯಿ ಮಸಾಲ ಸಹ ಸವಿಯಬಹುದು. ಊಟದ ಜೊತೆ ಹಪ್ಪಳದಂತೆ ಈ ಮಸಾಲೆ ಫ್ರೈ ಅನ್ನು ನೀವು ಒಮ್ಮೆ ಮಾಡಿ ಸವಿದರೆ ಅದರ ರುಚಿಗೆ ನೀವು ಮಾರು ಹೋಗುತ್ತೀರಿ.

ಹಾಗಾದ್ರೆ ಈ ಬೆಂಡೆಕಾಯಿ ಮಸಾಲ ಫ್ರೈ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಜೊತೆಗೆ ಊಟಕ್ಕೆ ಬೆಂಡೆಕಾಯಿ ಮಸಾಲ ಫ್ರೈ ಮಾಡುವ ಮೂಲಕ ಊಟದ ರುಚಿ ಹೆಚ್ಚಿಸೋಣ
ಬೆಂಡೆಕಾಯಿ ಮಸಾಲ ಫ್ರೈ ಮಾಡಲು ಬೇಕಾಗುವ ವಸ್ತುಗಳೇನು?
- ಬೆಂಡೆಕಾಯಿ- 200 ಗ್ರಾಮ್
- ಒಣ ಮೆಣಸಿನ ಕಾಯಿ
- ಉದ್ದಿನ ಬೇಳೆ
- ಕಡಲೇ ಬೇಳೆ
- ಧನಿಯಾ
- ಜೀರಿಗೆ
- ಉದ್ದಿನ ಬೇಳೆ
- ಬೆಳ್ಳುಳ್ಳಿ
- ಅರಶಿಣ
- ಕರಿಬೇವು
- ಎಣ್ಣೆ
- ಉಪ್ಪು
- ಕಡಲೆ ಬೀಜ
- ಒಣ ಕೊಬ್ಬರಿ
ಬೆಂಡೆಕಾಯಿ ಮಸಾಲ ಫ್ರೈ ಮಾಡುವ ಸರಿಯಾದ ವಿಧಾನ
ಮೊದಲು ಬೆಂಡೆಕಾಯಿಯನ್ನು ತೊಳೆದುಕೊಂಡು ಬಟ್ಟೆಯಲ್ಲಿ ಒರೆಸಿಕೊಂಡು ಎರಡು ತುದಿಗಳನ್ನು ಕತ್ತಿಸಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ, ಕಡಲೆ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡಿ ಫ್ರೈ ಮಾಡಿಕೊಳ್ಳಿ, ಇದಕ್ಕೆ ಜೀರಿಗೆ ಹಾಕಿಕೊಂಡು ಫ್ರೈ ಮಾಡಿ.
ಬಳಿಕ ಇದಕ್ಕೆ ಒಣ ಮೆಣಸು, ಕೊಬ್ಬರಿ ಹಾಕಿಕೊಳ್ಳಿ. ಇದನ್ನು ಒಂದು ನಿಮಿಷ ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಳ್ಳದೆ ಚೆನ್ನಾಗಿ ಪುಡಿ ಪುಡಿಯಾಗುವಂತೆ ರುಬ್ಬಿಕೊಳ್ಳಿ.
ಅರ್ಧ ಪುಡಿ ಪುಡಿಯಾದ ಬಳಿಕ ಇದಕ್ಕೆ ಬೆಳ್ಳುಳ್ಳಿ, ಅರಶಿಣ ಪುಡಿ, ಉಪ್ಪು ಹಾಕಿಕೊಂಡಿ ಮತ್ತೆ ರುಬ್ಬಿಕೊಳ್ಳಿ. ಈ ವೇಳೆ ನುಣ್ಣಗೆ ರುಬ್ಬಿಕೊಳ್ಳಿ. ಈ ರುಬ್ಬಿಕೊಂಡ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಬೆಂಡೆಕಾಯಿಯನ್ನು ತೆಗೆದುಕೊಂಡು ಮಧ್ಯದಲ್ಲಿ ಸೀಳಿಕೊಂಡು ಅದರ ಒಳಗೆ ಮಸಾಲೆಯನ್ನು ಸೇರಿಸಿ. ಮೇಲೆಯೂ ಹಚ್ಚಿಕೊಳ್ಳಿ.
ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆ ಒಳಗೆ ಮಸಾಲೆ ಹಾಕಿರುವ ಎಲ್ಲಾ ಬೆಂಡೆಕಾಯಿಯನ್ನು ಇಟ್ಟುಕೊಳ್ಳಿ. 2 ನಿಮಿಷಗಳ ಕಾಲ ಬೇಯಲು ಬಿಡಿ. ಬಳಿಕ ಬೆಂಡೆಕಾಯಿಯನ್ನು ಮತ್ತೊಂದು ಕಡೆ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲೆ ಭರಿತ ರುಚಿ ರುಚಿಯ ಬೆಂಡೆಕಾಯಿ ಮಸಾಲೆ ಫ್ರೈ ರೆಡಿಯಾಗಿರುತ್ತದೆ. ಇದು ಊಟ, ತಿಂಡಿ, ಸಂಜೆಯ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು.



Click it and Unblock the Notifications
