Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಲೋಳೆಯಿಲ್ಲದ ಕ್ರಿಸ್ಪಿ ಬೆಂಡೆಕಾಯಿ ಗ್ರೇವಿ..! ಸಿಂಪಲ್ ಟಿಪ್ಸ್ ಟ್ರೈ ಮಾಡಿ..!
ಊಟದ ಜೊತೆ ಪಲ್ಯ ಇಲ್ಲದಿದ್ರೆ ಊಟ ಸೇರೋದೆ ಇಲ್ಲ. ಅದರಲ್ಲೂ ಬೆಂಡೆಕಾಯಿಯ ಪಲ್ಯ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಬೆಂಡೆಕಾಯಿಯಲ್ಲಿ ಬಾಯಿ ಚಪ್ಪರಿಸಿ ತಿನ್ನಬಹುದಾದ ಪಲ್ಯ ಮಾಡಬಹುದು. ಆರೋಗ್ಯದ ದೃಷ್ಟಿಯಿಂದಲೂ ಬೆಂಡೆಕಾಯಿ ಅತ್ಯುತ್ತಮ ಆಹಾರವಾಗಿದೆ.
ಆದರೆ ಕೆಲವರು ಬೆಂಡೆಕಾಯಿ ಲೋಳೆಯಾಗಿರುತ್ತದೆ ಎಂದು ಅದನ್ನು ಸೇವಿಸಲು ಇಷ್ಟಪಡುವುದಿಲ್ಲ. ಬೆಂಡೆಕಾಯಿ ವಿಟಮಿನ್ ಬಿ, ಸಿ, ಫೋಲಿಕ್ ಆಮ್ಲ ಮತ್ತು ಫೈಬರ್ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಲ್ಲದೆ ಈ ಬೆಂಡೆಕಾಯಿ ನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹದ ನೀರಿನ ಚಯಾಪಚಯವನ್ನು ಸುಧಾರಿಸುತ್ತದೆ.

ಹಾಗಾದರೆ ನಾವಿಂದು ರುಚಿ ರುಚಿಯ ಬೆಂಡೆಕಾಯಿ ಪಲ್ಯ ಅಥವಾ ಗ್ರೇವಿಯನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ. ಬೆಂಡೆಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬೆಂಡೆಕಾಯಿ ಪಲ್ಯ ಮಾಡುವ ವಿಧಾನವೇನು ಎಂಬುದನ್ನು ತಿಳಿಯೋಣ.
ಬೆಂಡೆಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ
- ಜೀರಿಗೆ - ಅರ್ಧ ಸ್ಪೂನ್
- ಈರುಳ್ಳಿ- 3 (ಚಿಕ್ಕದು)
- ಶುಂಠಿ - (ಜಜ್ಜಿಕೊಂಡು ಬಳಸಿ
- ಮೊಸರು - ಅರ್ಧ ಕಪ್
- ಟೊಮೆಟೋ- 2
- ಗರಂ ಮಸಾಲ- ಒಂದು ಸ್ಪೂನ್
- ಅರಶಿನ
- ಖಾರದ ಪುಡಿ
- ಧನಿಯ ಪುಡಿ
- ಹುಣಸೆ ಹುಳಿ
- ಕೊತ್ತಂಬರಿ ಸೊಪ್ಪು
ಬೆಂಡೆಕಾಯಿ ಗ್ರೇವಿ ಮಾಡುವ ವಿಧಾನ
ಮೊದಲು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಕೊಂಡಿರುವ ಬೆಂಡೆಕಾಯಿ ಹಾಕಿ. ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಇಟ್ಟುಕೊಂಡು 3ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಬಳಿಕ ಬೆಂಡೆಕಾಯಿಯನ್ನು ಎತ್ತಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ ಹಾಕಿ. ಬೇಕಾದರೆ ಸಾಸಿವೆಯನ್ನೂ ಹಾಕಿಕೊಳ್ಳಬಹುದು.
ನಂತರ ಇದಕ್ಕೆ ಸಣ್ಣಗೆ ಹೆಚ್ಚಿರುವ ಈರುಳ್ಳಿ ಹಾಕಿ. ಇದಕ್ಕೆ ಶುಂಠಿ, ಟೊಮೆಟೋವನ್ನು ಮಿಕ್ಸರ್ ಜಾರ್‌ಗೆ ಹಾಕಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಹಾಕಿ. 2 ನಿಮಿಷ ಚೆನ್ನಾಗಿ ಫ್ರೈ ಆಗಲು ಬಿಡಿ. ಬಳಿಕ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ ಫ್ರೈ ಆಗಲು ಬಿಡಿ. ಇದೇ ವೇಳೆ ರುಚಿ ನೋಡಿಕೊಂಡು ಉಪ್ಪು ಹಾಕಿಕೊಳ್ಳಿ.
30 ಸೆಕೆಂಡುಗಳ ಕಾಲ ಫ್ರೈ ಮಾಡಿದ ಬಳಿಕ ಸ್ವಲ್ಪ ನೀರು ಸೇರಿಸಿಕೊಳ್ಳಿ ನೀರು ಹಾಕಿದ ಬಳಿಕ ಗ್ರೇವಿಗೆ ಮೊಸರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಗೋಲಿ ಗಾತ್ರದ ಹುಣಸೆ ಹುಳಿ ಹಾಕಿ. ಇದೆಲ್ಲಾ ಹಾಕಿ ಮಿಕ್ಸ್ ಮಾಡಿದ ಬಳಿಕ ಬೆಂಡೆಕಾಯಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈ ವೇಳೆ ಉಪ್ಪು ನೋಡಿ ಹಾಕಿಕೊಳ್ಳಿ. ಈ ಮೊದಲೇ ಉಪ್ಪು ಹಾಕಿ ಬೆಂಡೆಕಾಯಿ ಫ್ರೈ ಮಾಡಿಕೊಂಡಿರುತ್ತೀರಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಒಲೆಯನ್ನು ಆಫ್ ಮಾಡಿ, ಗ್ರೇವಿಯನ್ನು ಚೆನ್ನಾಗಿ ತಿರುಗಿಸಿ ಇಳಿಸಿಕೊಳ್ಳಿ.
ಗಮನಿಸಿ: ಬೆಂಡೆಕಾಯಿ ಲೋಳೆಯಾಗಬಾರದು ಎಂದಾದರೆ ಮೊದಲು ನೀರಿನಲ್ಲಿ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಬೇಕು. ಹೆಚ್ಚಿಕೊಳ್ಳುವಾಗ ಚಾಕು ಅಥವಾ ಕತ್ತಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಬೇಕು, ಇದರಿಂದ ಲೋಳೆಯಾಗುವುದಿಲ್ಲ.
ರೋಗನಿರೋಧಕ ಶಕ್ತಿ ಹೆಚ್ಚಳ ಬೆಂಡೆಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇದು ದೇಹದಲ್ಲಿ ಹಾನಿ ಉಂಟುಮಾಡುವ ಜೀವಿಗಳ ವಿರುದ್ಧ ಹೋರಾಡುತ್ತದೆ ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ನೀರನ್ನು ಕುಡಿಯಬೇಕು.



Click it and Unblock the Notifications
