Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪಾಕ ಮಾಡದೆ ಸುಲಭವಾಗಿ ಹಿಟ್ಟಿನ ಲಾಡು ಮಾಡುವುದು ಹೇಗೆ?
ಸಿಹಿ ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ. ಸ್ಪೆಷಲ್ ಸಂದರ್ಭಗಳಲ್ಲಿ ಸಿಹಿ ಹಂಚಿಕೊಳ್ಳುವುದು ಮಾಮೂಲಿ. ಆದರೆ ನೀವು ಬರಿ ದಿನಗಳಲ್ಲಿಯೂ ಮನೆಯಲ್ಲಿ ಈ ತರಹದ ಸಿಹಿಯನ್ನು ಮಾಡಿ ನಿಮ್ಮ ಮನೆಯವರಿಗೆ ತಿನ್ನಿಸಿ ನೋಡಿ, ಮತ್ತೆ ಮತ್ತೆ ಬೇಕು ಅನ್ನೋದು ಗ್ಯಾರಂಟಿ. ಅದರಲ್ಲೂ ಸಿಹಿಯನ್ನು ಇಷ್ಟ ಪಡುವ ಮಕ್ಕಳಿಗೆ ಚಾಕಲೇಟ್ ಕೊಡಿಸುವ ಬದಲು ಈ ರೀತಿ ಸುಲಭ ಲಾಡು ಮಾಡಿ ಕೊಡಬಹುದು. ಹಾಗಾದ್ರೆ ಕ್ವಿಕ್ ಆಗಿ ಲಾಡು ಮಾದುವುದು ಹೇಗೇ? ನೋಡೋಣ ಬನ್ನಿ.

ಲಾಡು ಮಾದಲು ಬೇಕಾಗುವ ಸಾಮಗ್ರಿಗಳು
- ಗೋಧಿ ಹಿಟ್ಟು - 1 ಕಪ್
- ತುಪ್ಪ -1/2 ಕಪ್
- ಸಕ್ಕರೆ - 1ಕಪ್
- ಒಣ ದ್ರಾಕ್ಷೆ ( ಅಗತ್ಯ ಇದ್ದಲ್ಲಿ)
ಮಾಡುವ ವಿಧಾನ
ಒಂದು ದಪ್ಪ ತಳದ ಪಾತ್ರೆಯನ್ನು ಗ್ಯಾಸ್ ಮೇಲಿಡಿ. ಅದಕ್ಕೆ ತುಪ್ಪವನ್ನು ಹಾಕಿ. ಅದು ಸ್ವಲ್ಪ ಬಿಸಿ ಆದ ನಂತರ ಬಿಸಿಯಾದ ತುಪ್ಪಕ್ಕೆ ಗೋದಿಹಿಟ್ಟನ್ನು ಹಾಕಿ. ನಂತರ ಸಣ್ಣ ಉರಿಯಲ್ಲಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ತಳ ಹಿಡಿಯದಂತೆ, ಸ್ದು ಹೋಗದಂತೆ ಎಚ್ಚರಿಕೆಯಿಂದ ಕೈಯಾಡಿಸಿ.

ಈಗ ಸಕ್ಕರೆಯನ್ನು ಪುಡಿ ಮಾಡಿ ಇಟ್ಟು ಕೊಳ್ಳಿ. ಗೋಧಿ ಹಿಟ್ಟು ಹುರಿದ ಮೇಲೆ ಅದು ಬಿಸಿ ಇರುವಾಗಲೇ ಸಕ್ಕರೆ ಪುಡಿಯನ್ನು ಪಾತ್ರೆಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ಸ್ವಲ್ಪ ಹೊತ್ತು ಆರಲು ಬಿಡಬೇಕು. ನಂತರ ಇದನ್ನು ಬೇಕಾದ ಅಳತೆಯಲ್ಲಿ ಉಂಡೆಗಳನ್ನಾಗಿ ಮಾಡಿಕೊಳ್ಳ ಬೇಕು. ಅಗತ್ಯ ವಿದ್ದಲಿ ಮಧ್ಯೆ ಒಣ ದ್ರಾಕ್ಷಿ, ಗೋಡಂಭಿ, ಬಾದಾಮಿ ಚೂರುಗಳನ್ನು ಇಟ್ಟರೆ ಲಾಡು ತಿನ್ನುವಾಗ ಬಾಯಿಗೆ ಡ್ರೈ ಫ್ರೂಟ್ಸ್ ಸಿಗುತ್ತದೆ. ಅಮ್ಮ ಹೇಳಿಕೊಟ್ಟ ಈ ಹೆಲ್ದೀ ಸ್ವೀಟ್ ರೆಸಿಪಿ ಮಾಡಿ ನೋಡಿ!



Click it and Unblock the Notifications
