Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಮನೆಯಲ್ಲಿ ಮಾಡಿ ಮಸಾಲ ಕುಷ್ಕ..! ಸಿಕ್ಕಾಪಟ್ಟೆ ರುಚಿ ರೆಸಿಪಿ
ನೀವು ಮಾಂಸಹಾರಿಗಳಲ್ಲದಿದ್ದರೆ ನಿಮಗೆ ಮಾಂಸಹಾರವಲ್ಲದ ಕುಷ್ಕ ಮಾಡಿ ಸವಿಯಬೇಕು ಎನಿಸಿರುತ್ತೆ. ಯಾಕಂದ್ರೆ ಹೋಟೆಲ್ಗಳಲ್ಲಿ ಸಿಗುವ ಕುಷ್ಕ ಸವಿಯಲು ಮನಸ್ಸು ಕೇಳುವುದಿಲ್ಲ ಯಾಕಂದ್ರೆ ಅಲ್ಲಿ ಮಾಂಸಹಾರವು ಇರುವುದರಿಂದ ಕುಷ್ಕ ರೈಸ್ ಸೇವಿಸಲು ಹಿಂಜರಿಕೆ ಇದ್ದೇ ಇರುತ್ತದೆ. ಇದು ಎಲ್ಲಾ ಸಸ್ಯಹಾರಿಗಳ ಸಮಸ್ಯೆಯಾಗಿದೆ.
ಆದರೆ ಕುಷ್ಕ ರೈಸ್ ಅನ್ನು ಮಾಂಸ ಹಾಕದೆಯೇ ಮಾಡಲಾಗುತ್ತದೆ. ಇದರ ಅಂತಿಮ ಹಂತದಲ್ಲಿ ಕುಷ್ಕಕ್ಕೆ ಮಾಂಸ ಸೇರಿಸಲಾಗುತ್ತದೆ. ಇಲ್ಲವೆ ಹಲವು ಕಡೆಗಳಲ್ಲಿ ಕುಷ್ಕ ಹಾಗೂ ಬಿರಿಯಾನಿ ಬೇರೆ ಬೇರೆಯಾಗಿ ಮಾಡಲಾಗುತ್ತದೆ. ಆದರೂ ಕೇವಲ ಕುಷ್ಕ ಸವಿಯಲು ಹಿಂಜರಿಕೆ ಇದ್ದೇ ಇರುತ್ತದೆ.

ಹಾಗಾದ್ರೆ ಮನೆಯಲ್ಲಿ ರುಚಿ ರುಚಿಯಾದ ಕುಷ್ಕ ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ, ಮಾಂಸ ಬಳಸದೆ ಕುಷ್ಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಕುಷ್ಕ ಮಾಡುವ ವಿಧಾನವೇನು, ಇದನ್ನು ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ನೋಡೋಣ.
ಕುಷ್ಕ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಪಲಾವ್ ಎಲೆ - 2
- ಕಲ್ಲು ಹೂವು /ಛರಿಲಾ- 1 ಟೀಸ್ಪೂನ್
- ಜಾಪತ್ರೆ-1
- ದಾಲ್ಚಿನ್ನಿ - 3 ಪೀಸು
- ಚಕ್ರ ಮೊಗ್ಗು-3
- ಲವಂಗ-3
- ಏಲಕ್ಕಿ-3
- ಶಾಹಿ ಜೀರಾ - 1/4 ಟೀಸ್ಪೂನ್
- ಈರುಳ್ಳಿ-4
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಪುದೀನ ಎಲೆಗಳು - 1/2 ಕಪ್
- ಕೊತ್ತಂಬರಿ ಸೊಪ್ಪು - 1/2 ಕಪ್
- ಹಸಿರು ಮೆಣಸಿನಕಾಯಿ - 4
- ಮೆಣಸಿನ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಪುಡಿ-1/2 ಟೀಸ್ಪೂನ್
- ಟೊಮೆಟೊ-1
- ಮೊಸರು - 2 ಟೀಸ್ಪೂನ್
- ಬಿರಿಯಾನಿ ಪುಡಿ - 1/2 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕುಷ್ಕ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು ನೀರಿನಲ್ಲಿ ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ಇನ್ನೊಂದೆಡೆ ಕುಕ್ಕರ್ಗೆ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಮಸಾಲೆ ಪದಾರ್ಥಗಳಾದ ಪಲಾವ್ ಎಲೆ, ಕಲ್ಲು ಹೂವು /ಛರಿಲಾ, ಜಾಪತ್ರೆ, ದಾಲ್ಚಿನ್ನಿ, ಚಕ್ರ ಮೊಗ್ಗು, ಲವಂಗ, ಏಲಕ್ಕಿ, ಶಾಹಿ ಜೀರಾ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ.
ಬಳಿಕ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಇದರ ಜೊತೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಇನ್ನೊಂದೆಡೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಪುದೀನ, ಉಪ್ಪು, ಮೆಣಸಿನ ಕಾಯಿ ಹಾಕಿಕೊಂಡು ಸಣ್ಣ ಜಾರ್ನಲ್ಲಿ ರುಬ್ಬಿಕೊಳ್ಳಿ. ಈ ರುಬ್ಬಿದ ಮಸಾಲೆಯನ್ನು ಕುಕ್ಕರ್ಗೆ ಹಾಕಿ ಮಿಕ್ಸ್ ಮಾಡಿ.
ಬಳಿಕ ಕುಕ್ಕರ್ಗೆ ಖಾರದ ಪುಡಿ, ಅರಶಿನ, ಧನಿಯಾ ಹಾಗೂ ಟೊಮೆಟೋ ಹಾಕಿಕೊಂಡು ಚೆನ್ನಾಗಿ ಫ್ರೈ ಆಗಲು ಬಿಡಿ. 1 ನಿಮಿಷದ ಬಳಿಕ ಸ್ವಲ್ಪ ಮೊಸರು ಹಾಗೂ ಬಿರಿಯಾನಿ ಪೌಡರ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಪಾತ್ರೆ ತಳಹಿಡಿಯಬಾರದು ಎಂಬ ಕಾರಣಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ.
3 ನಿಮಿಷದ ಬಳಿಕ ಅಕ್ಕಿ ಅಳತೆಯಂತೆ ನೀರು ಹಾಕಿಕೊಳ್ಳಿ. ನೀರು ಕುದಿಯಲು ಆರಂಭವಾದಾಗ ಅದಕ್ಕೆ ಅಕ್ಕಿ ಹಾಕಿಕೊಳ್ಳಿ. ಬಳಿಕ ಮುಚ್ಚಳ ಮುಚ್ಚಿ 2 ಸೀಟಿ ಬರುವವರೆಗೂ ಬಿಡಿ. 2 ಸೀಟಿ ಹೊಡೆದ ಬಳಿಕ ಉರಿ ಆಫ್ ಮಾಡಿ ಹಾಗೆಯೇ ಬಿಡಿ. ಎಲ್ಲಾ ಗ್ಯಾಸ್ ಹೊರಹೋದ ಬಳಿಕ ಕುಕ್ಕರ್ ಮುಚ್ಚಳ ತೆರೆಯಿರಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ನಿಮ್ಮ ಮುಂದೆ ರುಚಿಕರ ಕುಷ್ಕ ರೆಡಿಯಾಗಿರುತ್ತದೆ. ಒಮ್ಮೆ ಇದನ್ನು ಸೇವಿಸಿದರೆ ಮತ್ತೆ ಮತ್ತೆ ತಿನ್ನಬೇಕು ಎಂಬ ರುಚಿ ನೀಡುತ್ತದೆ. ತಿನ್ನಲು ಬಿರಿಯಾನಿ ರುಚಿಯನ್ನೇ ಇದು ಸಹ ನೀಡಲಿದೆ.



Click it and Unblock the Notifications