Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕುಂದಾಪುರ ಸ್ಟೈಲ್ ಎಗ್ ಗ್ರೇವಿ: ಮನೆಯಲ್ಲೇ ಸಿಂಪಲ್ ಆಗಿ ಮಾಡಿ.. ಬ್ಯಾಚುಲರ್ಸ್ ತಪ್ಪದೇ ಟ್ರೈ ಮಾಡಿ
ಕರಾವಳಿ ಭಾಗದ ಜನಪ್ರಿಯ ಖಾದ್ಯಗಳಲ್ಲಿ ಕುಂದಾಪುರ ಮೊಟ್ಟೆ ಗ್ರೇವಿ (kundapura egg gravy) ಕೂಡ ಒಂದು. ಇದರ ವಿಶಿಷ್ಟ ರುಚಿ, ಮಾಡುವ ಸುಲಭ ವಿಧಾನದಿಂದಾಗಿ ಅಡುಗೆ ಪ್ರಿಯರ ಮನ ಗೆದ್ದಿದೆ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಈ ಗ್ರೇವಿಯು ಅನ್ನ, ಚಪಾತಿ ಅಥವಾ ದೋಸೆ ಸೇರಿದಂತೆ ಇನ್ನಿತರ ತಿನಿಸುಗಳೊಂದಿಗೆ ಉತ್ತಮ ಜೋಡಿಯಾಗುತ್ತದೆ. ರುಚಿಕರವಾದ ಈ ಗ್ರೇವಿಯನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಮತ್ತು ತಯಾರಿಸುವ ಸುಲಭ ವಿಧಾನ (egg gravy) ಇಲ್ಲಿದೆ.
ಮೊಟ್ಟೆ ಗ್ರೇವಿ ತಯಾರಿಸಲು ಅಗತ್ಯವಿರುವ ಸಾಮಗ್ರಿಗಳು ಹೀಗಿವೆ
• ಮೊಟ್ಟೆಗಳು
• ಕೊತ್ತಂಬರಿ ಬೀಜ
• ಕಾಳು ಮೆಣಸು
• ಜೀರಿಗೆ
• ಗುಂಟೂರು ಒಣ ಮೆಣಸು
• ಬ್ಯಾಡಗಿ ಒಣ ಮೆಣಸು
• ಮೆಂತ್ಯ ಬೀಜ
• ಅರಿಶಿಣ ಪುಡಿ,
• ದೊಡ್ಡ ಈರುಳ್ಳಿ (ಕತ್ತರಿಸಿದ್ದು)
• ಹಸಿ ತೆಂಗಿನಕಾಯಿ ತುರಿ
• ರುಚಿಗೆ ತಕ್ಕಷ್ಟು ಉಪ್ಪು
• ಬೆಳ್ಳುಳ್ಳಿ ಎಸಳುಗಳು
• ಹುಣಸೆ ಹಣ್ಣಿನ ರಸ (ಸ್ವಲ್ಪ)

ಮೊಟ್ಟೆ ಗ್ರೇವಿ ತಯಾರಿಸುವ ವಿಧಾನ
ಮೊದಲಿಗೆ, ಮಸಾಲೆ ತಯಾರಿಸಲು ಒಂದು ಬಾಣಲೆ ಅಥವಾ ಪ್ಯಾನ್ನಲ್ಲಿ ಗುಂಟೂರು ಮತ್ತು ಬ್ಯಾಡಗಿ ಒಣ ಮೆಣಸುಗಳನ್ನು ಹುರಿಯಿರಿ. ಮೆಣಸುಗಳು ಹುರಿದ ನಂತರ, ಅದೇ ಬಾಣಲೆಗೆ ಕೊತ್ತಂಬರಿ ಬೀಜ, ಕಾಳು ಮೆಣಸು, ಜೀರಿಗೆ ಮತ್ತು ಮೆಂತ್ಯ ಬೀಜಗಳನ್ನು ಹಾಕಿ. ಎಲ್ಲಾ ಸಾಮಗ್ರಿಗಳು ಗರಿಯಾಗುವವರೆಗೆ ಅಥವಾ ಪರಿಮಳ ಬರುವವರೆಗೆ ಚೆನ್ನಾಗಿ ಹುರಿಯಿರಿ. ಹುರಿದ ಮಸಾಲೆಗಳನ್ನು ಪಕ್ಕಕ್ಕಿಟ್ಟು ತಣ್ಣಗಾಗಲು ಬಿಡಿ.
ಈಗ, ಒಂದು ಮಿಕ್ಸಿ ಜಾರ್ಗೆ ಹುರಿದ ಮಸಾಲೆಗಳು, ಅರಿಶಿಣ ಪುಡಿ, ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಎಸಳುಗಳು, ಹುಣಸೆ ಹಣ್ಣಿನ ರಸ ಮತ್ತು ಹಸಿ ತೆಂಗಿನಕಾಯಿ ತುರಿಯನ್ನು ಹಾಕಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣ ಮಸಾಲೆಯ ಹದ ಸ್ವಲ್ಪ ತೆಳುವಾಗಿರಬೇಕು. ಹೀಗೆ ರುಬ್ಬಿದ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿ.
ಇದಾದ ನಂತರ, ಉಳಿದ ಅರ್ಧ ಭಾಗದಷ್ಟು ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಮಸಾಲೆಗೆ ಸೇರಿಸಿ. ಇದನ್ನು ಮಧ್ಯಮ ಉರಿಯಲ್ಲಿ ಸುಮಾರು ಮೂರು ನಿಮಿಷಗಳ ಕಾಲ ಕುದಿಯಲು ಬಿಡಿ. ಮಸಾಲೆ ಸ್ವಲ್ಪ ಕುದಿಯಲು ಪ್ರಾರಂಭಿಸಿದಾಗ, ಒಂದೊಂದಾಗಿ ಮೊಟ್ಟೆಗಳನ್ನು ಒಡೆದು ಮಸಾಲೆಯೊಳಗೆ ಹಾಕಿ. ಮೊಟ್ಟೆಗಳನ್ನು ಕಲಕದೆ ಮತ್ತೆ ಮೂರು ನಿಮಿಷಗಳ ಕಾಲ ಬೇಯಲು ಬಿಡಿ. ಇದರಿಂದ ಮೊಟ್ಟೆಗಳು ಗಟ್ಟಿಯಾಗುತ್ತವೆ.

ಅಂತಿಮವಾಗಿ, ಮೊಟ್ಟೆಗಳನ್ನು ನಿಧಾನವಾಗಿ ತಿರುಗಿಸಿ ಅಥವಾ ಮಗುಚಿ. ನಂತರ ಇನ್ನೂ ಒಂದು ನಿಮಿಷ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಇಷ್ಟು ಮಾಡಿದರೆ ಸಾಕು, ಕುಂದಾಪುರ ಶೈಲಿಯ ರುಚಿಕರವಾದ ಮೊಟ್ಟೆ ಗ್ರೇವಿ ಸಿದ್ಧ. ಇದನ್ನು ಬಿಸಿಬಿಸಿ ಅನ್ನ, ಚಪಾತಿ, ದೋಸೆ, ಇಡ್ಲಿ ಅಥವಾ ನೀರ್ ದೋಸೆಯೊಂದಿಗೆ ಸವಿಯಬಹುದು. ಈ ಗ್ರೇವಿ ಯಾವುದೇ ಊಟಕ್ಕೂ ಉತ್ತಮ ಸೈಡ್ ಡಿಶ್ ಆಗಿರುತ್ತದೆ.
ಒಟ್ಟಾರೆಯಾಗಿ, ಕರಾವಳಿಯ ಅಡುಗೆ ಅಂದ್ರೆ ಅದರಲ್ಲಿ ತೆಂಗಿನ ಕಾಯಿ, ಮಸಾಲೆಗಳ ಘಮಘಮ ಹಾಗೂ ವಿಶಿಷ್ಟ ಸಾಂಪ್ರದಾಯಿಕ ಶೈಲಿ. ಅಡುಗೆ ಪ್ರಿಯರ ಮನಸನ್ನು ಕದ್ದಿರುವಂತಹ ಒಂದು ವಿಶೇಷ ಖಾದ್ಯವೇ ಕುಂದಾಪುರ ಮೊಟ್ಟೆ ಗ್ರೇವಿ. ಉಡುಪಿ - ಕುಂದಾಪುರ ಭಾಗದಲ್ಲಿ ಜನಪ್ರಿಯವಾಗಿರುವ ಈ ತಿನಿಸು, ಅಲ್ಲಿ ಮಾತ್ರವಲ್ಲ. ದೇಶದ ವಿವಿಧೆಡೆಗಳಲ್ಲಿ ಖಾದ್ಯ ಪ್ರಿಯರ ಮೆಚ್ಚುಗೆ ಗಳಿಸಿದೆ. ಮೊಟ್ಟೆ ಪ್ರಿಯರಿಗೆ ಈ ರೆಸಿಪಿ ಒಂದು ಹಬ್ಬದಂತೆಯೇ ಸರಿ. ನೀವು ಒಮ್ಮೆ ಮನೆಯಲ್ಲಿ ಈ ಕುಂದಾಪುರ ಶೈಲಿಯ (Kundapura Style Egg Curry) ರೆಸಿಪಿ ಟ್ರೈ ಮಾಡಿ. ಖಂಡಿತವಾಗಿಯೂ ಇದರ ರುಚಿ ನಿಮಗೆ ಇಷ್ಟವಾಗುತ್ತದೆ.



Click it and Unblock the Notifications
