Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬ್ರೇಕ್‌ಫಾಸ್ಟ್‌ಗೆ ಕೊಟ್ಟೂರು ಮಂಡಕ್ಕಿ ಮಾಡಿದ್ದೀರಾ..! ಈ ಸ್ಪೆಷಲ್ ಟೇಸ್ಟ್ ಸವಿದು ನೋಡಿ..!
ನಾವು ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಎಷ್ಟು ಕಡಿಮೆ ಸಮಯದಲ್ಲಿ ಮಾಡಬಹುದೋ ಅಂತಹ ತಿಂಡಿಯನ್ನೆ ಮಾಡುವುದು ಹೆಚ್ಚು, ಏಕೆಂದರೆ ಬೆಳಗ್ಗೆ ಎಲ್ಲರಿಗೂ ಗಡಿಬಿಡಿ. ಸಮಯವಿಲ್ಲದ ಕಾರಣಕ್ಕೆ ಹಲವು ಬಾರಿ ಹೋಟೆಲ್‌ನಿಂದ ತಿಂಡಿ ಖರೀದಿಸಿ ಮನೆಗೆ ತಂದು ಸವಿಯುವುದು ಕೂಡ ಇದೆ. ಹೀಗಾಗಿ ಬೆಳಗ್ಗೆ ಕಡಿಮೆ ಸಮಯದಲ್ಲಿ ರುಚಿ ರುಚಿಯಾಗಿ ಏನಾದರು ಮಾಡಲು ಮುಂದಾಗುವುದೇ ಹೆಚ್ಚು.
ಅದರಲ್ಲೂ ಹೆಚ್ಚಾಗಿ ನಾವು ಸುಲಭವಾಗಿ ಮಾಡಬಹುದಾದ ಚಿತ್ರಾನ್ನ, ಅವಲಕ್ಕಿ, ಮಂಡಕ್ಕಿ, ಒಗ್ಗರಣೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ಕಡಬು, ಇದೆಲ್ಲಾ ಕಡಿಮೆ ಸಮಯದಲ್ಲಿ ಮಾಡಬಹುದಾದ ಹಾಗೆ ಕಡಿಮೆ ವಸ್ತುಗಳ ಬಳಸಿ ಮಾಡಬಹುದಾದ ತಿಂಡಿ ಆಗಿರೋದ್ರಿಂದ ಬಹುತೇಕ ಮನೆಗಳಲ್ಲಿ ಇದನ್ನು ಬೆಳಗ್ಗೆ ತಿಂಡಿಗೆ ಮಾಡಿರುತ್ತಾರೆ. ಅದ್ರಲ್ಲೂ ಮಂಡಕ್ಕಿ ಮಾಡುವುದು ತುಂಬಾನೆ ಸುಲಭ ಹಾಗೂ ಕಡಿಮೆ ಸಮಯ ಹಿಡಿಯುತ್ತೆ.

ಮಂಡಕ್ಕಿ ಕಲಸಿಕೊಂಡು ಒಂದು ಒಗ್ಗರಣೆ ಹಾಕಿದರೆ ನಿಮ್ಮ ಮುಂದೆ ರುಚಿ ರುಚಿಯ ತಿಂಡಿ ರೆಡಿಯಾಗುತ್ತದೆ. ಹೀಗಾಗಿ ಮಂಡಕ್ಕಿಯಲ್ಲಿ ವಿಶೇಷವಾಗಿ ಮಾಡಬಹುದಾದ ಕೊಟ್ಟೂರು ಒಗ್ಗೆರಣೆ ಮಂಡಕ್ಕಿ ಎಂದಾದರು ಸವಿದಿದ್ದೀರಾ? ಕೊಟ್ಟೂರು ಬಳ್ಳಾರಿಯಲ್ಲಿ ಬರುವ ಒಂದು ಐತಿಹಾಸಿಕ ಹಿನ್ನೆಲೆಯ ಊರಾಗಿದೆ. ಇಲ್ಲಿ ಕೊಟ್ಟೂರು ಒಗ್ಗರಣೆ ಮಂಡಕ್ಕಿ ತುಂಬಾನೆ ಫೇಮಸ್.
ನಾವು ಕೂಡ ಈ ಕೊಟ್ಟೂರು ಒಗ್ಗರಣೆ ಮಂಡಕ್ಕಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಈ ಕೊಟ್ಟೂರು ಮಂಡಕ್ಕಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ವಿಧಾನವೇನು? ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊಟ್ಟೂರು ಮಂಡಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
ಮಂಡಕ್ಕಿ
ಎಣ್ಣೆ
ಜೀರಿಗೆ
ಸಾಸಿವೆ
ಉಪ್ಪು
ಹುರಿಗಡಲೆ
ಕೊತ್ತಂಬರಿ ಸೊಪ್ಪು
ಹಾಲು
ಗರಂ ಮಸಾಲ
ಹಸಿ ಮೆಣಸು
ಈರುಳ್ಳಿ
ಟೊಮೇಟೋ
ಕೊಟ್ಟೂರು ಮಂಡಕ್ಕಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಕತ್ತರಿಸಿಕೊಂಡ ಎರಡು ಈರುಳ್ಳಿಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಸಣ್ಣದಾಗಿ ಕತ್ತರಿಸಿಕೊಂಡ 2 ಟೊಮೆಟೋ ಅನ್ನು ಹಾಕಿಕೊಂಡು ಫ್ರೈ ಮಾಡಲು ಬಿಡಿ. 3 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಕರಿಬೇವು, ಅರಶಿನ ಹಾಕಿ ಫ್ರೈ ಮಾಡಿ.
1 ನಿಮಿಷ ಫ್ರೈ ಮಾಡಿದ ಬಳಿಕ ಹಸಿ ಮೆಣಸು, ಗರಂ ಮಸಾಲ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಲು ಕಲಸಿಕೊಳ್ಳಿ. ನಂತರ ಅರ್ಧ ಲೋಟ ಹಾಲು ಹಾಲು ಅರ್ಧ ಲೋಟ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುದಿ ಬರುವಂತೆ ಮಾಡಿ. ಸಣ್ಣದಾಗಿ ಕುದಿ ಬರಲು ಬಿಡಿ. ಆಗಾಗ ಕೈ ಆಡಿಸುತ್ತಾ ಇರಿ. ಈಗ ಸ್ವಲ್ಪ ಮಂಡಕ್ಕಿಯನ್ನು ನೀರಿಗೆ ಹಾಕಿ ಎತ್ತಿಕೊಂಡು ಇಟ್ಟುಕೊಳ್ಳಿ.
ಮಂಡಕ್ಕಿಯಿಂದ ನೀರು ಸಂಪೂರ್ಣ ಹಿಂಡಿಕೊಂಡು ಒಲೆ ಮೇಲೆ ಇಟ್ಟಿರುವ ಒಗ್ಗರಣೆಗೆ ಹಾಕಿಕೊಂಡು ಒಮ್ಮೆ ಕಲಸಿಕೊಳ್ಳಿ. ಈಗ ಒಂದು ಮುಷ್ಟಿಯಷ್ಟು ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ಅದನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಮಂಡಕ್ಕಿಗೆ ಪೂರ್ಣ ಮಸಾಲೆ ಹಿಡಿಯುವಂತೆ ಮಾಡಿಕೊಳ್ಳಬೇಕು.
ಕೊನೆಯದಾಗಿ ಉಪ್ಪು ಹಾಗೂ ಹಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಇಳಿಸಿಕೊಳ್ಳಿ. ಮಂಡಕ್ಕಿ ಬಿಸಿಯಾದಾಗಿದ್ದಾಗ ಅಂಟಿಕೊಂಡಂತೆ ಇರುತ್ತದೆ. ಆದ್ರೆ ತಣ್ಣಗಾದಾಗ ಹುಡಿ ಹುಡಿಯಾಗುತ್ತದೆ. ಇದರ ಜೊತೆಗೆ ಯಾವುದಾದ್ರು ಬಜ್ಜಿ, ಬೋಂಡಾ ಇದ್ದರೆ ಇದರ ರುಚಿ ದುಪ್ಪಟ್ಟಾಗುತ್ತೆ, ನೀವು ಕೂಡ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
