Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ರುಚಿ ರುಚಿಯ ಕೋಸಂಬರಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ಕೋಸಂಬರಿ ಶುಭ ಕಾರ್ಯದಲ್ಲಿ ಇರಲೇಬೇಕಾದ ಒಂದು ಖಾದ್ಯ. ಸಸ್ಯಹಾರಿ ಊಟದಲ್ಲಿ ಕೋಸಂಬರಿಯೇ ಪ್ರಮುಖ ಖಾದ್ಯ. ಅದರಲ್ಲೂ ಊಟ ಆರಂಭವಾಗೋದೇ ಕೋಸಂಬರಿಯ ರುಚಿ ನೋಡುವುದರಿಂದ. ಹೀಗಾಗಿ ಕೋಸಂಬರಿ ಅನ್ನೋದು ಪ್ರತಿ ಅಡುಗೆ, ಹಬ್ಬ, ಸಮಾರಂಭದ ಮೂಲವಾಗಿದೆ.
ಈ ಕೋಸಂಬರಿಯಲ್ಲಿ ಹಲವು ವಿಧಗಳಿವೆ. ಕಡಲೆ ಬೇಳೆ ಕೋಸಂಬರಿ ಕರ್ನಾಟಕದ ವಿಶೇಷ ಶೈಲಿಯ ಕೋಸಂಬರಿಯಾಗಿದೆ. ಸೌತೆಕಾಯಿ, ಕ್ಯಾರೆಟ್/ಗಜರಿ, ಕಡಲೇ ಬೇಳೆ ಮತ್ತು ತೆಂಗಿನ ತುರಿಯ ಸಮ್ಮಿಶ್ರಣದಿಂದ ಮಾಡಲಾಗುವ ಕೋಸಂಬರಿ ರುಚಿಯಲ್ಲು ಮೇಲುಗೈ. ದೇವರ ಪೂಜೆ, ನೈವೇದ್ಯದಲ್ಲಿ ಕೋಸಂಬರಿ ಇರಲೇಬೇಕು.

ಹಾಗಾದ್ರೆ ಬಾಯಿ ಚಪ್ಪರಿಸಿ ಸವಿಯುವ ಕೋಸಂಬರಿಯನ್ನು ಮಾಡೋದು ಸಹ ತುಂಬಾನೆ ಸುಲಭ ಅಲ್ಲದೆ ಇದಕ್ಕಾಗಿ ಅಧಿಕ ಸಮಯವೂ ಬೇಕಿಲ್ಲ. ಬೇಳೆಯನ್ನು ನೆನೆಸಿಕೊಂಡಿದ್ದರೆ ಬೇಕೆಂದಾಗ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಕೋಸಂಬರಿಯನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವುದು ಹೇಗೆ? ಮಾಡಲು ಪಾಕವಿಧಾನ ಏನು? ಎಷ್ಟು ಸಮಯದಲ್ಲಿ ಮಾಡಬಹುದು ಎಂಬು ಕುರಿತ ಮಾಹಿತಿ ಇಲ್ಲಿದೆ ನೋಡಿ.
ಕೋಸಂಬರಿ ಮಾಡಲು ಬೇಕಾಗುವ ಪದಾರ್ಥಗಳು
- ಹಸರು ಬೇಳೆ- 1/4 ಕಪ್
- ಕ್ಯಾರೆಟ್ (ಕತ್ತರಿಸಿದ) - 2
- ಬೀನ್ಸ್ (ಕತ್ತರಿಸಿದ) - 10
- ಎಲೆಕೋಸು (ಕತ್ತರಿಸಿದ) - 1 ಕಪ್
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ಕಡಲೆ - 1 ಟೀಸ್ಪೂನ್
- ಉದ್ದು - 1 ಟೀಸ್ಪೂನ್
- ಬೆಳ್ಳುಳ್ಳಿ (ಪುಡಿಮಾಡಿದ) - 5
- ಕೆಂಪು ಮೆಣಸಿನಕಾಯಿ - 2
- ಹಸಿರು ಮೆಣಸಿನಕಾಯಿ - 6
- ಈರುಳ್ಳಿ (ಕತ್ತರಿಸಿದ) - 1
- ತೆಂಗಿನಕಾಯಿ (ರುಬ್ಬಿದ) - 1 ಕಪ್
- ಕರಿಬೇವಿನ ಎಲೆಗಳು - 2 tbs
- ಕೊತ್ತಂಬರಿ ಸೊಪ್ಪು - 1/4 ಕಪ್
- ಇಂಗು - 2 ಪಿಂಚ್ಗಳು
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಕೋಸಂಬರಿ ಮಾಡುವುದು ಹೇಗೆ
ಹೆಸರು ಬೇಳೆಯನ್ನ ನೀರಿನಲ್ಲಿ ತೊಳೆದು ಬಳಿಕ ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರು ಹಾಕಿ ಬೇಯಿಸಲು ಇಡಿ. ಇದಕ್ಕೆ ಬೀನ್ಸ್, ಕ್ಯಾರೆಟ್, ಕೋಸು ಹಾಕಿಕೊಂಡು ಬೇಯಿಸಿಕೊಳ್ಳಿ. 10ರಿಂ 15 ನಿಮಿಷ ಬೇಯಿಸಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಇಟ್ಟು ಅದಕ್ಕೆ ಸಾವಿಗೆ, ಜೀರಿಗೆ ಹಾಕಿಕೊಳ್ಳಿ.
ಇದಕ್ಕೆ ಕಡಲೆಬೇಳೆಮ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿ, ಒಣ ಮೆಣಸು ಹಾಗೂ ಹಸಿ ಮೆಣಸು ಸಿಗಿದುಕೊಂಡು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಆದ ಬಳಿಕ ಇದಕ್ಕೆ ಇಂಗು ಹಾಕಿಟ್ಟು ಬಿಡಿ.
1 ನಿಮಿಷದ ಬಳಿಕ ಬೇಯಿಸಿಕೊಂಡಿರುವ ಬೇಳೆ, ತರಕಾರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊಬ್ಬರಿ ತುರಿಯನ್ನು ಹಾಕಿಕೊಳ್ಳಿ. ಇದಾದ ಬಳಿಕ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಕೋಸಂಬರಿ ರೆಡಿಯಾಗಿರುತ್ತದೆ. ಇದೊಂದು ಪಲ್ಯದ ರೀತಿ ನೀವು ಸವಿಯಬಹುದು.
ಇದನ್ನು ಬರಿ ಬಾಯಿಗೆ, ಅನ್ನ, ಚಪಾತಿ ಸೇರಿ ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು, ನಿಮಗೆ ಮಸಾಲೆ ರೀತಿ ಸವಿಯಬೇಕಾದರೆ ಯಾವುದಾದರು ಚಾಟ್ ಮಸಾಲವನ್ನು ಇದಕ್ಕೆ ಸೇರಿಸಿ ತಯಾರಿಸಬಹುದು. ಕೆಲವು ಬಾರಿ ಇದಕ್ಕೆ ಸೌತೇಕಾಯಿ ಸಹ ಹಾಕಿ ಮಾಡಬಹುದು.



Click it and Unblock the Notifications
