Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೊಸ ಬಗೆಯ ಕೊರಿಯನ್ ತಿಂಡಿ: ಮಕ್ಕಳಿಗಂತು ಬಹು ಇಷ್ಟದ ಖಾದ್ಯ!
ನೀವು ಬೆಳಗ್ಗೆ ತಿಂಡಿಗೆ ವಿವಿಧ ರೀತಿಯ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ವಿಶೇಷ ರುಚಿಯ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ವಿಶೇಷ ಖಾದ್ಯ ಅಂದ್ರೆ ಸ್ನ್ಯಾಕ್ಸ್ ಅಂತೆ ಸವಿಯಲು ಮಾಡಿಕೊಳ್ಳುವ ಹಲವು ರುಚಿ ರುಚಿಯ ಖಾದ್ಯಗಳ ಕುರಿತು ನಾವಿಂದು ತಿಳಿದುಕೊಳ್ಳೋಣ.
ನೀವು ಹಲವು ಹೋಟೆಲ್‌ನಲ್ಲಿ ನೋಡಿರುವಂತೆ ಚೈನೀಸ್, ಕೊರಿಯನ್ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಸಂಜೆ ಸಮಯದಲ್ಲಿ ನೀವು ರಸ್ತೆ ಬದಿಯಲ್ಲಿ ಹಲವು ರೀತಿಯ ತಿಂಡಿಗಳ ಸವಿದಿರಬಹುದು. ಅದ್ರಲ್ಲೂ ಕೊರಿಯನ್ ಶೈಲಿಯ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಕೊರಿಯನ್ ತಿಂಡಿಯನ್ನು ಮನೆಯಲ್ಲೇ ಮಾಡಿಕೊಳ್ಳೋದು ಹೇಗೆ ಗೊತ್ತಾ?

ಕೊರಿಯನ್ ತಿಂಡಿಗಳು ಹಲವು ಪದಾರ್ಥಗಳ ಬಳಸಿ ಮಾಡಲಾಗುತ್ತದೆ. ಹೆಚ್ಚಾಗಿ ಹಸಿ ತರಕಾರಿಗಳು, ಸಾಸ್‌ಗಳು, ಮಸಾಲೆ ಭರಿತ ತಿಂಡಿಗಳು ಎಂತವರ ಬಾಯಲ್ಲೂ ನೀರು ತರಿಸುತ್ತವೆ. ಹಾಗಾದ್ರೆ ನಾವಿಂದು ಮನೆಯಲ್ಲಿ ಬೆಳಗ್ಗೆಯ ತಿಂಡಿಗೆ ಕೊರಿಯನ್ ಶೈಲಿಯಲ್ಲಿ ಹೊಸ ಖಾದ್ಯ ಮಾಡಿ ಸವಿಯುವ ಕುರಿತು ಇಂದು ತಿಳಿದುಕೊಳ್ಳೋಣ.
ಈ ಕೊರಿಯನ್ ತಿಂಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ಹೊಸ ರೀತಿಯ ಕೊರಿಯನ್ ತಿಂಡಿ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಮೊಟ್ಟೆ-5
- ಹಸಿರು ಮೆಣಸಿನಕಾಯಿ-3
- ಬೆಳ್ಳುಳ್ಳಿ-1
- ಈರುಳ್ಳಿ-3
- ಕ್ಯಾರೆಟ್-1
- ಎಲೆಕೋಸು-1 ಕಪ್
- ಕ್ಯಾಪ್ಸಿಕಂ-1
- ಕರಿಮೆಣಸಿನ ಪುಡಿ-1/4 ಟೀಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಹೊಸ ರೀತಿಯ ಕೊರಿಯನ್ ತಿಂಡಿ ಮಾಡುವ ವಿಧಾನವೇನು?
ಮೊದಲಿಗೆ ಇದಕ್ಕೆ ಅಗತ್ಯವಾಗಿರುವ ಎಲ್ಲಾ ತರಕಾರಿಗಳನ್ನು ತಣ್ಣದಾಗಿ ಹೆಚ್ಚಿಕೊಂಡು ಇಟ್ಟುಕೊಳ್ಳಿ. ಈಗ ಮೊದಲು 5 ಮೊಟ್ಟೆ ಒಡೆದು ಒಂದು ಪಾತ್ರೆಗೆ ಹಾಕಿ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಮಿಕ್ಸ್ ಮಾಡಿದ ಮೊಟ್ಟೆಗಳನ್ನು ಹಾಕಿಕೊಳ್ಳಿ.
ಮೊಟ್ಟೆಯನ್ನ ಪಲ್ಯದಂತೆ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಇದು ಸ್ವಲ್ಪ ಗಟ್ಟಿಯಾಗಿ ದೊಡ್ಡ ಪುಡಿ ಪುಡಿಯಾಗಬೇಕು. ನಂತರ ಮೊಟ್ಟೆ ತೆಗೆದು ಬದಿಗಿಟ್ಟುಕೊಳ್ಳಿ
ಮತ್ತೆ ಬಾಣಲೆಗೆ ಎಣ್ಣೆ ಹಾಕಿಕೊಂಡು ಸಣ್ಣದಾಗಿ ಹೆಚ್ಚಿಕೊಂಡ ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಬಿಸಿ ಮಾಡಿ. ಅನಂತರ ಇದಕ್ಕೆ 4 ಈರುಳ್ಳಿ, ಹಾಗೆ ಕ್ಯಾರೆಟ್ ಹಾಕಿ 1 ನಿಮಿಷ ಫ್ರೈ ಮಾಡಿ. ಈಗ ಎಲೆಕೋಸು, ಕ್ಯಾಪ್ಸಿಕಂ, ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಈಗ 2ರಿಂದ 3 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಫ್ರೈ ಮಾಡಿಕೊಂಡಿದ್ದ ಮೊಟ್ಟೆಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಕಾಳು ಮೆಣಸಿನ ಪುಡಿ, ಹಾಗೆ ಯಾವುದಾದರು ಸಾಸ್ ಇದ್ದರೆ ಬಳಸಿಕೊಳ್ಳಿ. ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿ.
ಇಷ್ಟಾದರೆ ನಿಮ್ ಮುಂದೆ ರುಚಿ ರುಚಿಯ ಕೊರಿಯನ್ ಎಗ್ ತಿಂಡಿ ಸಿದ್ದವಾಗುತ್ತೆ. ಬೆಳಗ್ಗೆ ತಿಂಡಿಗೆ ನೀವು ಒಮ್ಮೆ ಸವಿದರೆ ಪದೇ ಪದೇ ಇದನ್ನೇ ಮಾಡಿಕೊಂಡು ಸವಿಯೋದು ಖಚಿತ. ಈ ಹೊಸ ರೀತಿಯ ತಿಂಡಿಯನ್ನು ಮಾಡೋದು ಕೂಡ ಬಹಳ ಸುಲಭ. ಹಾಗೆ ಸಂಜೆ ಸ್ನ್ಯಾಕ್ಸ್ ಆಗಿಯೂ ಕೂಡ ಇದನ್ನು ಸವಿಯಬಹುದು. ನೀವು ಸಹ ಮನೆಯಲ್ಲಿ ಮಕ್ಕಳಿಗೆ ಇದನ್ನು ಮಾಡಿ ಕೊಡಿ.



Click it and Unblock the Notifications