Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Easy Recipe: ಊಟದ ಜೊತೆ ಸವಿಯಲು ಗೆಡ್ಡೆ ಕೋಸು ಪಲ್ಯ..! ಮಾಡೋದು ಹೇಗೆ?
ನೀವು ಹಲವು ಬಗೆಯ ತರಕಾರಿಗಳಲ್ಲಿ ಪಲ್ಯ ಮಾಡಿ ಸವಿದಿರುತ್ತೀರಿ. ಊಟ, ತಿಂಡಿಯ ಜೊತೆಗೆ ಪಲ್ಯ ಇದ್ದರೇನೆ ಅದರ ರುಚಿ ಹೆಚ್ಚಾಗುವುದು. ಇದಕ್ಕಾಗಿ ನೀವು ಹಲವು ಬಗೆಯ ತರಕಾರಿಗಳಲ್ಲಿ ಪಲ್ಯ ಮಾಡಿ ಸವಿಯೋದು ಕಾಮನ್. ಅದರಲ್ಲೂ ಆರೋಗ್ಯ ವೃದ್ಧಿಸುವ ನಮ್ಮ ದೇಹಕ್ಕೆ ಮತ್ತಷ್ಟು ಆರೋಗ್ಯಕರ ಅಂಶ ನೀಡುವಂತಹ ತರಕಾರಿಗಳ ಪಲ್ಯ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಹೀಗಾಗಿ ನಾವಿಂದು ನವಿಲು ಕೋಸಿನ ಅಥವಾ ಗೆಡ್ಡೆ ಕೋಸಿನ ಅದ್ಭುತ ರುಚಿಯ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ನವಿಲು ಕೋಸು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ನಿಮಗೆ ಗೊತ್ತಾ? ನವಿಲುಕೋಸು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ನಿಮ್ಮ ಮೂಳೆಗಳು, ಹಲ್ಲಿನ ಆರೋಗ್ಯಕ್ಕೆ ಇದು ಬಹಳ ಉತ್ತಮ. ಇದರಲ್ಲಿನ ವಿಟಮಿನ್ ಎ ಅಂಶ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಉತ್ತಮ.

ನವಿಲು ಕೋಸು ವಿಟಮಿನ್ ಸಿ, ಐಸೊಥಿಯೋಸೈನೇಟ್‌ಗಳು, ಆಂಥೋಸಯಾನಿನ್ ಅಂಶ ಹೊಂದಿದೆ. ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಅಗತ್ಯ. ಇಷ್ಟೆಲ್ಲಾ ಆರೋಗ್ಯಕರ ಅಂಶ ತನ್ನಲ್ಲಿಟ್ಟುಕೊಂಡಿರುವ ಈ ನವಿಲುಕೋಸಿನ ಪಲ್ಯ ಮಾಡುವುದಾದರು ಹೇಗೆ? ಅದರಲ್ಲೂ ವಿಶೇಷವಾಗಿ ಮದುವೆ ಮನೆಗಳಲ್ಲಿ ಮಾಡುವಂತಹ ರುಚಿಯಲ್ಲಿ ನಾವಿಂದು ಈ ನವಿಲು ಕೋಸಿನ ಪಲ್ಯ ಮಾಡುವುದನ್ನು ತಿಳಿಯೋಣ.
ನವಿಲು ಕೋಸಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬ ಕುರಿತು ಇಲ್ಲಿ ತಿಳಿದುಕೊಳ್ಳಿ.
ನವಿಲು ಕೋಸಿನ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ನವಿಲು ಕೋಸು ಅಥವಾ ಗೆಡ್ಡೆ ಕೋಸು- 2
- ಸಾಸಿವೆ
- ಕಡಲೆ ಬೇಳೆ
- ಈರುಳ್ಳಿ-1
- ಕರಿಬೇವು
- ತೆಂಗಿನಕಾಯಿ
- ಹಸಿ ಮೆಣಸಿನಕಾಯಿ
- ಶುಂಠಿ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ನವಿಲು ಕೋಸಿನ ಪಲ್ಯ ಮಾಡುವ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಕಡಲೆ ಬೇಳೆ, ಜೀರಿಗೆ, ಹಾಕಿ ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕರಿಬೇವು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಗೆಡ್ಡೆ ಕೋಸು ಅಥವಾ ನವಿಲು ಕೋಸನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷ ಇದನ್ನು ಫ್ರೈ ಮಾಡಿದ ಬಳಿಕ ಸ್ವಲ್ಪ ನೀರು ಹಾಕಿಕೊಂಡು ಮತ್ತೆ 8 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ. ಆಗಾಗ ತಳ ಹಿಡಿಯದಂತೆ ತಿರುಗಿಸಿಕೊಳ್ಳುತ್ತಾ ಇರಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಹಸಿ ಮೆಣಸು, ಶುಂಠಿ, ಜೀರಿಗೆ ಹಾಕಿ ರುಬ್ಬಬೇಕು. ಮೂರು ಸುತ್ತು ಬಂದು ತರಿತರಿಯಾಗಿ ಹುಡಿ ಮಾಡಿಕೊಳ್ಳಿ.
ರುಬ್ಬಿದ ಈ ಮಸಾಲೆಯನ್ನು ಬಾಣಲೆಯಲ್ಲಿರುವ ಪಲ್ಯಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆ ಹಾಕಿ 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಗೆಡ್ಡೆಕೋಸು ಪಲ್ಯ ರೆಡಿಯಾಗುತ್ತದೆ. ನೀವು ಕೂಡ ಊಟದ ಜೊತೆಗೆ ಚಪಾತಿ, ದೋಸೆಯೊಂದಿಗೆ ಸವಿಯಲು ಮನೆಯಲ್ಲಿ ಈ ಪಲ್ಯ ಮಾಡಿ ನೋಡಿ.



Click it and Unblock the Notifications
